

ಉಪಚುನಾವಣೆಯಲ್ಲಿ ಮೂರಕ್ಕೆ , ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದ ಫಲಿತಾಂಶ ಬರುತ್ತಿದ್ದಂತೆ , ಕುಂದಾಪುರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ ನಡೆಯಿತು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯ ಎದುರು ಪಕ್ಷದ ಮುಖಂಡರು , ಕಾರ್ಯಕರ್ತರು ಸಿಹಿ ಹಂಚಿ ,ಪಟಾಕಿ ಸಿಡಿಸಿ , ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ ಶೇರಿಗಾರ್ , ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ,ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಅಬ್ಬು ಮೊಹಮ್ಮದ್ ,ಪಂಚಾಯತ್ ಸದಸ್ಯರಾದ ವಿಜಯಧರ್ ಕೆವಿ , ಪುರಸಭಾ ನಾಮ ನಿರ್ದೇಶಿತ ಸದಸ್ಯರಾದ ಅಶೋಕ್ ಸುವರ್ಣ , ಸದಾನಂದ ಖಾರ್ವಿ , ಶಶಿ ರಾಜ್ ಎಂ ಪೂಜಾರಿ, ಶಶಿಧರ ನಂದಿಬೆಟ್ಟ , ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಆಶಾ ಕರ್ವಾಲ್ಲೊ, ಸೀಮಾ ಚಂದ್ರ ಪೂಜಾರಿ , ಕೊಡಿ ಸುನಿಲ್ ಪೂಜಾರಿ , ಕೆ ಪಿ ಅರುಣ್ ಪಟೇಲ್ , ವೇಲಾ ಬ್ರಗಾಂಜ , ವೇಣುಗೋಪಾಲ್, ಮೌರಿಸ್ ಕರ್ವಾಲ್ಲೊ, ಕುಮಾರ ಖಾರ್ವಿ , ರೋಹನ್ ಫುಟಾರ್ಡೊ, ವಿನಯ ಕುಮಾರ್ ನಂದಿಬೆಟ್ಟು , ಚಂದ್ರಕಾಂತ ಖಾರ್ವಿ , ಎಡೊಲ್ಫ್ ಡಿಕೊಸ್ಟಾ, ಶಿವಕುಮಾರ್ ಪೂಜಾರಿ , ಜೂಲಿಯೆಟ್ ಪಾಯ್ಸ್ ಇನ್ನಿತರರು ಉಪಸ್ಥಿತರಿದ್ದರು.

