ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ: ಮುಂದಿನ 2023ರ ಸಾರ್ವತ್ರಿಕಕೋಲಾರ ವಿಧಾನಸಭಾ ಚುನಾವಣೆಯಲ್ಲಿಅಲ್ಪಸಂಖ್ಯಾತ ಸಮುದಾಯದ ಸ್ಥಳೀಯರಿಗೆ ಟಿಕೆಟ್ ನೀಡುವಂತೆಕಾಂಗ್ರೆಸ್ ವರಿಷ್ಠರು ಮುಂದಾಗಬೇಕುಎಂದು ನಗರಸಭೆ ಮಾಜಿ ಸದಸ್ಯ ಹಾಗೂ ಜಿಲ್ಲಾಅಲ್ಪಸಂಖ್ಯಾತಘಟಕದ ಮುಖಂಡಎಂ.ಜಾಫರ್ ಸಾಭ್ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು ಅವಿಭಜಿತಕೋಲಾರಜಿಲ್ಲೆಯಲ್ಲಿ 11 ವಿಧಾನ ಸಭಾ ಕ್ಷೇತ್ರಗಳು ಇದ್ದುಕೋಲಾರ ವಿಧಾನ ಸಭಾಕ್ಷೇತ್ರದಲ್ಲಿಅತಿ ಹೆಚ್ಚು ಸುಮಾರು 40 ಸಾವಿರಕ್ಕೂಅಧಿಕಅಲ್ಪಸಂಖ್ಯಾತ ಸಮುದಾಯದ ಮತದಾರರುಇದ್ದುಯಾವುದೇಚುನಾವಣೆ ನಡೆದರುಅಲ್ಪಸಂಖ್ಯಾತರು ಪ್ರಾಮಾಣಿಕವಾಗಿಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿರುತ್ತಾರೆಅದರಿಂದಅಲ್ಪಸಂಖ್ಯಾತರಿಗೆ ಮುಂದಿನ ಚುನಾವಣೆಯಲ್ಲಿಟಿಕೆಟ್ ನೀಡಿದರೆ ಗೆಲುವು ಸಾಧಿಸಲು ಸಾಧ್ಯವಾಗುತ್ತದೆಎಂದರು.
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೇವಲ ಕೋಲಾರ ವಿಧಾನ ಸಭಾಕ್ಷೇತ್ರದಿಂದ ಮಾತ್ರಕಾಂಗ್ರೆಸ್‍ಅಭ್ಯರ್ಥಿಯಾಗಿಅಲ್ಪಸಂಖ್ಯಾತ ಮುಸ್ಲಿಂ ಜನಾಂಗದವರಿಗೆ ಸ್ಪರ್ಧಿಸಲು ಪ್ರಬಲವಾದಅವಕಾಶವಿದ್ದುಕ್ಷೇತ್ರದಲ್ಲಿಕಾಂಗ್ರೆಸ್ ಪಕ್ಷಕ್ಕೆ ಮೊದಲಿನಿಂದಲೂಅಲ್ಪಸಂಖ್ಯಾತ ಸಮುದಾಯ ಬೆಂಬಲವಾಗಿದ್ದಾರೆಚುನಾವಣೆಯ ಸಂದರ್ಭದಲ್ಲಿಕಾಂಗ್ರೆಸ್‍ನಿಂದ ಹೊರಗಿನಅಭ್ಯರ್ಥಿಯನ್ನು ಕಣಕ್ಕಿಳಿಸಿದರೇ ಸೋಲು ಖಚಿತವಾಗುತ್ತದೆಇದನ್ನುಕಾಂಗ್ರೆಸ್ ಹೈಕಮಾಂಡ್‍ಗಮನಹರಿಸಬೇಕುಎಂದರು
ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಈಗಾಗಲೇ ಕೆಲವು ಹೆಸರುಗಳು ಚಾಲ್ತಿಯಲ್ಲಿವೆಆದರೆ ಅವುಗಳಿಗೆ ಮಾನ್ಯತೆ ನೀಡಬಾರದುಅಲ್ಪಸಂಖ್ಯಾತ ಮುಸ್ಲಿಂ ಜನಾಂಗಕ್ಕೆಇರುವಒಂದೇಒಂದುಅವಕಾಶವನ್ನೂ ಬೇರೆಯವರಿಗೆ ನೀಡಿಅನ್ಯಾಯವೆಸಗಬಾರದು ಹಾಗೂ ಬೇರೆಕಡೆಯಿಂದ ಬರುವ ಅಭ್ಯರ್ಥಿಗಳಿಗೆ ಅವಕಾಶ ನೀಡಬಾರದು ಕಳೆದ ಬಾರಿಕಾಂಗ್ರೆಸ್ ಪಕ್ಷದಅಭ್ಯರ್ಥಿಎರಡನೇ ಸ್ಥಾನ ಪಡೆದು ಸೋಲು ಕಂಡಿದ್ದರೂ ಈ ಬಾರಿಗೆಲ್ಲುವ ಅವಕಾಶಗಳು ಹೆಚ್ಚು ಇರುವುದರಿಂದ ಸ್ಥಳೀಯ ಅಲ್ಪಸಂಖ್ಯಾತ ಮುಸ್ಲಿಂ ಜನಾಂಗದವರಿಗೆಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶಗಳು ಕಲ್ಪಿಸಬೇಕು,ಒಂದು ವೇಳೆ ಮಾಜಿ ಮುಖ್ಯ ಮಂತ್ರಿ,ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೋಲಾರದಲ್ಲಿ ಸ್ಪರ್ಧಿಸಲು ಇಚ್ಚಿಸಿದರೆ ತಾಲ್ಲೂಕಿನಅಭಿವೃದ್ಧಿದೃಷ್ಟಿಯಿಂದ ನಮ್ಮ ವಿರೋಧವಿಲ್ಲದೆಅವರ ಗೆಲುವಿಗೆ ಮುಸ್ಲಿಂ ಜನಾಂಗ ಶ್ರಮಿಸುವುದಾಗಿ ಹೇಳಿದರು.
ಒಕ್ಕಲಿಗರಿಗೆ ,ಎಸ್.ಸಿ,ಎಸ್.ಟಿ ಗಳಿಗೆ ಈಗಾಗಲೇ ಬೇರೆ ಕ್ಷೇತ್ರಗಳಲ್ಲಿ ಅವಕಾಶಗಳು ಇದ್ದು,ಇರುವಒಂದುಅವಕಾಶವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಹೈಕಮಾಂಡ್ ನೀಡುವ ಮೂಲಕ ಈ ಭಾರಿಅಲ್ಪಸಂಖ್ಯಾತ ಮುಸ್ಲಿಂ ಅಭ್ಯರ್ಥಿಯ ಗೆಲುವಿಗೆ ಸಹಕಾರ ನೀಡಬೇಕು ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ನಗರಸಭೆ ಸದಸ್ಯ ಸಲ್ಲಾವುದ್ದೀನ್ ಬಾಬು, ಮುಸ್ಲಿಂ ಸಮುದಾಯದ ಮುಖಂಡರಾದಟೈರುಅಫ್ಸರ್, ಸಮೀರ್‍ಅಹಮದ್, μÉೀಕ್ ಫಯಾಸ್ವುದೀನ್, ಯೂನಸ್‍ಖಾನ್ , ಅಲ್ಲತಾಫ್ ಪಾಷ, ಸೀಪೂರು ಅಸ್ಲಾಂ, ಮೌಲಿ ಜುನೇದ್ ಪಾಷಇದ್ದರು.