ಕುಂದಾಪುರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ: ನಿರಂತರ ಬೆಲೆಯೇರಿಕೆಯಿಂದ ಜೀವನ ನಡೆಸುವುದು ಕಷ್ಟ

JANANUDI.COM NETWORK

ಕುಂದಾಪುರ,ಜೂ. 12: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ – ಬ್ಲಾಕ್ ಕಾಂಗ್ರೆಸ್ ಕುಂದಾಪುರ
ನಿರಂತರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ವಿರುದ್ಧ ಕೆ.ಪಿ.ಸಿ.ಸಿ.ಯ ನಿರ್ದೇಶನದಂತೆ ಬ್ಲಾಕ್ ಕಾಂಗ್ರೆಸ್ ಕುಂದಾಪುರ ವತಿಯಿಂದ ಎಚ್.ಪಿ. ಪೆಟ್ರೋಲ್ ಪಂಪ್ ಬಳಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿಯವರು ಕೋವಿಡ್ ಸಂಕಷ್ಟದ ಸಮಯದಲ್ಲಿ ನಿರಂತರ ಬೆಲೆಯೇರಿಕೆಯಿಂದ ದೇಶದ ಜನರಿಗೆ ಜೀವನ ನಡೆಸುವುದು ಕಷ್ಟವಾಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಏರಿಕೆಯಾಗದಿದ್ದರೂ ತೆರಿಗೆ ಪ್ರಮಾಣ ಏರಿಸಿದುದರಿಂದ ಜನಸಾಮಾನ್ಯರ ಶಾಪ ಸರಕಾರಕ್ಕೆ ತಟ್ಟಲಿದೆಯೆಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು ಮಾತನಾಡಿ, ಪೆಟ್ರೋಲ್, ಡೀಸೆಲ್ ದರ, ತಿಂಗಳಿಗೆ 18 ಬಾರಿ ಏರಿಕೆ ಕಂಡಿದೆ. ಸರಕು ಸಾಗಾಣಿಕ ವೆಚ್ಚದಲ್ಲಿ ಏರಿಕೆಯಾಗಿದೆ. ಇದರ ಜೊತೆಗೆ ವಿದ್ಯುತ್ ದರವನ್ನೂ ಏರಿಸುವ ಮೂಲಕ ಜನಸಾಮಾನ್ಯರನ್ನು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಯುಪಿಎ ಸರಕಾರದ ಅವಧಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾದಾಗ ಬಿಜೆಪಿ ನಾಯಕಿಯರಾದ ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ರಸ್ತೆಗಿಳಿದು ಪ್ರತಿಭಟಿಸಿದರು. ಇಂದು ಚಕಾರವೆತ್ತುತ್ತಿಲ್ಲ ಎಂದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಪ್ರಾಸ್ತಾವಿಕ ಮಾತುಗಳಿಂದ ಸ್ವಾಗತಿಸಿದರು. ಮಹಿಳಾ ಕಾಂಗ್ರೆಸ್ ಸದಸ್ಯರು ಬೆಲೆ ಏರಿಕೆ ವಿರೋಧಿಸಿ ಲಟ್ಟಣಿಗೆ, ಸೌಟು, ತಟ್ಟೆ ಹಿಡಿದು ವಿಭಿನ್ನವಾಗಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಮಾಜಿ ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಶೋಕ್ ಪೂಜಾರಿ, ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ, ಐಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರೆಗಾರ್, ಕೆಪಿಸಿಸಿ ಸೋಶಿಯಲ್ ಮೀಡಿಯಾ ಉಡುಪಿ ಜಿಲ್ಲೆ ಅಧ್ಯಕ್ಷ ರೋಶನ್ ಶೆಟ್ಟಿ, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಹಾರೂನ್ ಸಾಹೇಬ್, ಚಂದ್ರ ಅಮೀನ್, ಕುಮಾರ ಖಾರ್ವಿ, ನಾರಾಯಣ ಆಚಾರಿ, ಆಶಾ ಕಾರ್ವಾಲೊ, ಅಶ್ವತ್ ಕುಮಾರ್, ಸುವರ್ಣ ಡಿ ಅಲ್ಮೇಡ, ಅಶೋಕ್ ಸುವರ್ಣ, ಸುನಿಲ್ ಪೂಜಾರಿ, ರಮೇಶ್ ಶೆಟ್ಟಿ ಕಾಳಾವರ, ಶಿವಕುಮಾರ್, ಧರ್ಮಪ್ರಕಾಶ್, ಶಶಿರಾಜ್, ಡೋಲ್ಫಿ ಡಿಕೋಸ್ಟ, ಸುರೇಶ್ ಕೆ., ಪ್ರಭಾಕರ ಕಡ್ಗಿಮನೆ, ಜಯಕರ ಶೆಟ್ಟಿ ಕಾಳಾವರ, ಪ್ರಭಾಕರ, ಶಿಶಿರ್ ಕುಮಾರ್, ರಾಘವೇಂದ್ರ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.