ಕೇಂದ್ರ ಸರಕಾರದ ಜನವಿರೋಧಿ ನಿಲುವಿನ ವಿರುದ್ದ ಕಾಂಗ್ರೆಸ್ ಜನಧ್ವನಿ ಪಾದಯಾತ್ರೆ ಕುಂದಾಪುರದಿಂದ ಬೈಂದೂರಿಗೆ ಹೊರಟಿತು

JANANUDI.COM NETWORK


ಕುಂದಾಪುರ,ಫೆ.26: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ 100 ಕಿ.ಮಿ. ಜನಧ್ವನಿ ಪಾದಯಾತ್ರೆ ಹಮ್ಮಿಕೊಂಡಿದ್ದ ಭಾಗವಾಗಿ ಇಂದು ಬೆಳಿಗ್ಗೆ ಕುಂದಾಪುರ ಶಾಸ್ತ್ರಿ ಸರ್ಕಲ್ ನಿಂದ ಹೊರಟು, ಕುಂದಾಪುರದ ಮುಖ್ಯ ರಸ್ತೆಯಿಂದ ಸಾಗಿ, ಮಾಸ್ತಿ ಕಟ್ಟೆ ತಿರುವಿನಿಂದ ತಿರುಗಿ, ಚಿಕ್ಕನಸಾಲು ರಸ್ತೆಯಿಂದ ಸಾಗಿ ಬೈಂದೂರಿಗೆ ಹೊರಟಿತು.
ಈ ಸಂದರ್ಭದಲ್ಲಿ ಕಾಂಗ್ರೆಸಿನ ಪ್ರಮುಖ ನಾಯಕರಾದ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಮಾಜಿ ಮಂತ್ರಿ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಕ್ರಷ್ಣ ಪೂಜಾರಿ, ಅಶೋಕ ಕೊಡವೂರು ಉಡುಪಿ ಜಿಲ್ಲಾ ಅಧ್ಯಕ್ಷ, ಕಿಶನ್ ಹೆಗ್ಡೆ ಕೊಳ್ಕೆಬೈಲ್ ಜಿಲ್ಲಾ ಕಾರ್ಯದರ್ಶಿ, ರಾಜು ಪೂಜಾರಿ ಜಿಲ್ಲಾ ಉಪಧ್ಯಾಕ್ಷರು, ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಿನೋದ್ ಕ್ರಾಸ್ಟೊ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ, ವೆರೋನಿಕಾ ಕರ್ನೆಲೀಯೊ, ಕೆ.ಪಿ.ಸಿ.ಸಿ. ಸದಸ್ಯರು, ರೋಶನಿ ಒಲಿವೆರಾ ಆರ್.ಜೆ.ಪಿ.ಆರ್.ಎಸ್. ಮಲ್ಯಾಡಿ ಶಿವರಾಮ ಶೆಟ್ಟಿ ಮಾಜಿ ಬ್ಲಾಕ್ ಕಾಂಗ್ರೆಸ್ ಕುಂದಾಪುರ ಅಧ್ಯಕ್ಷರು, ಬಿ.ಹಿರಿಯಣ್ಣ ಮಾಜಿ ಕೆ.ಎಪ್.ಡಿ.ಸಿ.ಮಾಜಿ ಅಧ್ಯಕ್ಷರು. ಇಶ್ಚಿತಾರ್ಥ್ ಶೆಟ್ಟಿ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಚಂದ್ರ ಶೇಖರ ಶೆಟ್ಟಿ ರಾಜ್ಯ ಐ.ಟಿ ಸೇಲ್ ರಾಜ್ಯ ಪ್ರಧಾನ ಕಾರ್ಯದರ್ಶಿ, ದೆವಕಿ ಸಣ್ಣಯ್ಯ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ, ವಿಕಾಸ್ ಹೆಗ್ಡೆ, ಮಾಜಿ ನಗರ ಪ್ರಾಧಿಕಾರ ಅಧ್ಯಕ್ಷರು, ಎಮ್.ಎ.ಗಪೂರ್ ಮಾಜಿ ಜಿಲ್ಲಾ ಅಧ್ಯಕ್ಷರು, ಹರೀಶ್ ಕಿಣಿ ಮಾಜಿ ಜಿಲ್ಲಾ ಅಧ್ಯಕ್ಷರು, ಮತ್ತು ಅನೇಕ ಸ್ಥಳೀಯ ಕಾಂಗ್ರೆಸ್ ನಾಯಕರು, ಮತ್ತು ಇತರರು ಈ ಜನಧ್ವನಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು
.