

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತವು, ಬಹು ಸಂಸ್ಕೃತಿಯನ್ನು ಒಳಗೊಂಡು, ವಿವಿಧತೆಯಲ್ಲಿ ಏಕತೆಯನ್ನು ಪಸರಿಸುವ ದೇಶ. ಬಹುತ್ವದ ಬೇರುಗಳನ್ನು ದೇಶದಲ್ಲಿ ಗಟ್ಟಿಗೊಳಿಸಿದ್ದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ .ತನ್ನ 139ನೇ ಸಂಸ್ಥಾಪನ ದಿನದಂದು ಇತಿಹಾಸದಲ್ಲಿ ಪುನರಾವರ್ತನೆಯ ಸಂಕಲ್ಪ ಪ್ರತಿಯೊಂದು ಕಾಂಗ್ರೆಸ್ ಸದಸ್ಯರು ಮುಂದಿನ ದಿನಗಳಲ್ಲಿ ಸವಾಲಾಗಿ ಸ್ವೀಕರಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹರಿಪ್ರಸಾದ್ ಶೆಟ್ಟಿಯವರು ತಿಳಿಸಿದರು.
ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ನಡೆಸಿ ಮಾತನಾಡಿದರು.
ಇನ್ನೋರ್ವ ಅತಿಥಿ ಶ್ರೀ ಭಾಸ್ಕರ್ ಶೆಟ್ಟಿ, ಕಿಸಾನ್ ಘಟಕದ ಅಧ್ಯಕ್ಷರು ಈ ಸಂದರ್ಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಪಂಚಾಯತ್ ಸದಸ್ಯರಾದ ಜಾನಕಿ ಬಿಲ್ಲವ ,ವಸಂತಿ ಮೊಗವೀರ ,ಮಾಜಿ ಪುರಸಭಾ ಅಧ್ಯಕ್ಷರಾದ ಹಾರೊನ್ ಸಾಹೇಬ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೇವತಿ ಶೆಟ್ಟಿ ,ಎನ್ ಎಸ್ ಯು ಐ ಅಧ್ಯಕ್ಷ ಸುಜನ್ ಶೆಟ್ಟಿ ,ಬ್ಲಾಕ್ ಕಾಂಗ್ರೆಸ್ ಉಪಸಮಿತಿಗಳ ಅಧ್ಯಕ್ಷರಾದ ಮುನಾಫ್ ಕೋಡಿ, ಐಟಿ ಸೆಲ್ ಚಂದ್ರಶೇಖರ್ ಶೆಟ್ಟಿ ,ಜ್ಯೋತಿ ನಾಯ್ಕ್ ,ಅಶೋಕ್ ಸುವರ್ಣ, ಸುನಿಲ್ ಪೂಜಾರಿ, ಗಂಗಾಧರ ಶೆಟ್ಟಿ, ಜೋಸೆಫ್ ರೆಬೆಲ್ಲೊ, ಸುಭಾಷ್ ಪೂಜಾರಿ, ಶೋಭಾ ಸಚ್ಚಿದಾನಂದ, ಸೀಮಾ, ಚಂದ್ರ ಪೂಜಾರಿ, ವೇಲಾ ಬ್ರಗಾಂಜ, ಮೇಬಲ್ ಡಿಸೋಜಾ, ಕೆಪಿ ಅರುಣ್ ಪಟೇಲ್ ,ದಿನೇಶ್ ಭೆಟ್ಟ ,ನಾಗರಾಜ್ ನಾಯ್ಕ , ಪ್ರೀತಮ್ ಕರ್ವಾಲ್ಲೊ, ವೇಣುಗೋಪಾಲ್, ವಿವೇಕಾನಂದ, ಶಶಿ ಕುಮಾರ್, ಎಡಾಲ್ಫ್ ಡಿಕೋಸ್ತಾ, ಕೆ ಸುರೇಶ್, ಸ್ವಸ್ತಿಕ್ ಶೆಟ್ಟಿ, ಅಬ್ದುಲ್ಲಾ ಕೋಡಿ, ಸಂಗೀತ ಇನ್ನಿತರರು ಉಪಸ್ಥಿತರಿದ್ದರು.
ಇಂಟೆಕ್ ಅಧ್ಯಕ್ಷ ಚಂದ್ರ ಅಮೀನ್ ಸ್ವಾಗತಿಸಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರ್ವಹಿಸಿ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ವಂದಿಸಿದರು.



