ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿ ನನ್ನ ಭವಿಷ್ಯ ನಿಜವಾಗಿದೆ – ಸಿ.ಎಂ.ಇಬ್ರಾಹಿಂ

ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಕೋಲಾರ : ಪಂಚ ರಾಜ್ಯ ಚುನಾವಣೆಯಲ್ಲಿ ನಾನು ಮೊದಲ ಹೇಳಿದಂತೆ ಭವಿಷ್ಯ ನಿಜವಾಗಿದೆ . ಕಾಂಗ್ರೆಸ್ ನೆಲಕಚ್ಚಿದೆ , 73 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇಂತಹ ಹೀನಾಯ ಪರಿಸ್ಥಿತಿ ಬಂದಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ. ಎಂ. ಇಬ್ರಾಹಿಂ ತಿಳಿಸಿದರು . ಅವರು ನಗರ ಹೊರ ವಲಯದ ಎ.ಪಿ.ಎಂ.ಸಿ. ಮಾರುಕಟ್ಟೆ ಬಳಿಯಿರುವ ಅಂಜುಮಾನ್ ಕಮಿಟಿ ಉಪಾಧ್ಯಕ್ಷ ಮುಸ್ತಫಾರವರ ಎಂ. ಕೆ. ಟ್ರಾಕ್ಟರ್ ಶೋ ರೂಂಗೆ ಭೇಟಿ ನೀಡಿದ ಸಂಧರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ಕರಿಸಿದ ಪ್ರಿಯಾಂಕವಾರ್ದಾರವರು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಎಂಬ ಬೆಳೆಯನ್ನು ಬೆಳೆದರೂ ಬೆಳೆ ಕೊಯ್ಯುಯುವುದಕ್ಕೆ ಯಾವ ಕಾಂಗ್ರೆಸ್ ಕಾರ್ಯಕರ್ತರು ನೆರವಿಗೆ ಬರಲಿಲ್ಲ . ಉತ್ತರಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಎರಡು ಸೀಟುಗಳನ್ನು ಗೆಲ್ಲುವ ಹೀನಾಯ ಸ್ಥಿತಿಗೆ ಕಾಂಗ್ರೆಸ್ ತಲುಪಿದೆಯೆಂದು ಅಭಿಪ್ರಾಯ ಪಟ್ಟರು . ಪಂಜಾಬ್ ನಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಸ್ವಯಂಕೃತ ಅಪರಾಧದಿಂದ ಹಿಂದೆ ನಡೆದ ಚುನಾವಣೆಗಿಂತ ಈಗಿನ ಚುನಾವಣೆಯಲ್ಲಿ 73 ಸೀಟುಗಳನ್ನು ಕಳೆದುಕೊಂಡಿದೆ . ಕರ್ನಾಟಕದಲ್ಲೂ ಸಹ ಕಾಂಗ್ರೆಸ್‌ಗೆ ಮುಂದಿನ ವಿಧಾನಸಭಾ ಇ೦ತಹ ದುಸ್ಥಿತಿ ಚುನಾವಣೆಯಲ್ಲಿ ಬಂದದೊಗಲಿದೆಯೆಂದು ಭವಿಷ್ಯ ನುಡಿದರು .

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಸವತತ್ವ ಸರ್ಕಾರ ಕರ್ನಾಟಕದಲ್ಲಿ ಬರಲಿದ್ದು , ಬಿ.ಜೆ.ಪಿ. ಎರಡನೇ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗಲಿದ್ದು , ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಎಂದು ಬಣ್ಣಿಸಿದರಲ್ಲದೆ , ಹಿಂದೆ ಕೋಲಾರ ಲೋಕ ಸಭಾ ಚುನಾವಣೆ ನಡೆದಾಗ ಕೆ. ಎಚ್. ಮುನಿಯಪ್ಪರವರನ್ನು ಕಾಂಗ್ರೆಸ್ ಪಕ್ಷದ ಶಾಸಕರೇ ಸೋಲಿಸಿದರು , ಮುನಿಯಪ್ಪರವರ ಪರವಾಗಿ ನಾನು ಚುನಾವಣೆ ಪ್ರಚಾರಕ್ಕೆ ಬಂದಿದ್ದೆ ಎಂದರು .

ಮೇಕೆದಾಟು ಯೋಜನೆಯ ಪಾದಯಾತ್ರೆ ಸಂಪೂರ್ಣ ವಿಫಲವಾಗಿದ್ದು , ಇದಕ್ಕೆ ರಾಜ್ಯದ ಜನಬೆಂಬಲ ಪಕ್ಷಕ್ಕೆ ದೊರೆತಿರುವುದಿಲ್ಲ . ನಾನು ಹಿಂದೆ ಬಳ್ಳಾರಿ ಪಾದಯಾತ್ರೆ ಮಾಡಿದ್ದಾಗ ಜನ ಬೆಂಬಲ ದೊರೆತು ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬ೦ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರೆಂದು ವಿವರಿಸಿದರು . ನಾನು ಯಾವ ಪಕ್ಷಕ್ಕೆ ಹೋಗುತ್ತೇನೆಂದು ನಾಳೆ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ , ನಂತರ ಬೆಂಗಳೂರಿನಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇನೆಂದು ತಿಳಿಸಿದರು .