ಕುಂದಾಪುರ.ಎ.16: ಮುಂಬರುವ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆ, ಕುಂದಾಪುರ ಚರ್ಚ್ ಆವರಣಕ್ಕೆ ಬಂದು ಕ್ರೈಸ್ತ ಮತ ಭಾಂದವರಿಗೆ ಭೇಟಿ ನೀಡಿ ತಮಗೆ ಮತ ಹಾಕಿ ಬಹುಮತದಲ್ಲಿ ಆರಿಸಿ ವಿಧಾನ ಸಭೆಗೆ ಕಳುಹಿಸಿಕೊಡಬೇಕಾಗಿ ವಿನಂತಿಸಿಕೊಂಡರು.
“ನಾನು ಚುನಾವಣೆಗೆ ನಾಮ ಪತ್ರವನ್ನು ಸಲ್ಲಿಸಿದ್ದೇನೆ, ನನ್ನ ಗೆಲುವಿಗಾಗಿ, ನಾನು ದೇವಾಲಯಗಳಿಗೆ ಭೇಟಿ ಮಾಡಿದ್ದೇನೆ, ಈಗ ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಹಿರಿಯ ಹೋಲಿ ರೋಜರಿ ಮಾತೆಯ ಆಶಿರ್ವಾದ ಪಡೆಯಲು ಬಂದಿದ್ದೇನೆ, ರೋಜರಿ ಮಾತೆ ನನಗೆ ಆಶಿರ್ವದಿಸುತ್ತಾಳೆಂದು ನನ್ನ ನಂಬಿಕೆ, ಹಾಗೇ ಕ್ರೈಸ್ತ ಭಾಂಧವರು ನನ್ನನ್ನು ಮತ ಹಾಕಿ ಆಶಿರ್ವದಿಸಬೇಕೆಂದು, ಎಲ್ಲರಲ್ಲೂ, ವಿನಂತಿಸಿಕೊಳ್ಳುತ್ತೇನೆ” ಎಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿ “ಕಾಂಗ್ರೆಸ್ ಪಕ್ಷ ಎಲ್ಲರನೂ ಒಂದೇ ಸಮಾನವಾಗಿ ಕಾಣುತ್ತೆ, ನಮ್ಮದು ಜಾತ್ಯಾತೀತ ಪಕ್ಷ, ನಮ್ಮ ಪಕ್ಷ ಎಲ್ಲಾ ಜಾತಿ ಮತ, ಧರ್ಮ ಬಾಂಧವರೊಂದಿಗೆ ಇರುವ ಪಕ್ಷ, ಇಂತಹ ಪಕ್ಷವನ್ನು ಬಹುಮತದಲ್ಲಿ ಗೆಲ್ಲಿಸಿ, ರಾಜ್ಯದಲ್ಲಿ ಸುಭದ್ರ ಸರಕಾರ ಬರುಂವಂತೆ, ಸಹಕರಿಸಬೇಕು ಎಂದು ನಮ್ಮ ಇಚ್ಚೆ” ಎಂದು ಹೇಳಿಕೆ ನೀಡಿದರು.
ಈ ಸಂದರ್ಭದಲ್ಲಿ ಅವರ ದಿನೇಶ್ ಹೆಗ್ಡೆಯವರ ತಮ್ಮ ಮಹೇಶ್ ಹೆಗ್ಡೆ, ಸ್ಥಳೀಯ ಕಾಂಗ್ರೆಸ್ ನಾಯಕರು, ವಿನೋದ್ ಕ್ರಾಸ್ಟೊ, ಶಾಲೆಟ್ ರೆಬೆಲ್ಲೊ, ಆಶಾ ಕರ್ವಾಲ್ಲೊ, ಜೇಕಬ್ ಡಿಸೋಜಾ, ಸುವರ್ಣ ಆಲ್ಮೇಡಾ, ಸ್ಟೀವನ್ ಡಿಕೋಸ್ಟಾ, ಬರ್ನಾಡ್ ಡಿಕೋಸ್ಟಾ, ಮುಂತಾದವರು ಉಪಸ್ಥಿತರಿದ್ದರು.