ಜಿಲ್ಲೆಯಲ್ಲಿ ಕಾಂಗ್ರೆಸ್ , ಬಿಜೆಪಿ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಶಾಂತಿಯನ್ನು ಕದಡುವ ಕೆಲಸ ಮಾಡು ತಿದ್ದಾರೆ : ಜಿ.ಕೆ.ವೆಂಕಟಶಿವಾರೆಡ್ಡಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಜಿಲ್ಲೆಯಲ್ಲಿ ಕಾಂಗ್ರೆಸ್ , ಬಿಜೆಪಿ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಶಾಂತಿ ಯನ್ನು ಕದಡುವ ಕೆಲಸ ಮಾಡು ತಿದ್ದಾರೆ . ರಮೇಶ್ ಕುಮಾರ್ ಅವರ ನಿಜವಾದ ಮುಖವಾಡ ವನ್ನು ಸದ್ಯದಲ್ಲೇ ಬಯಲು ಮಾಡುತ್ತೆನೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಸವಾಲು ಹಾಕಿದದರು . ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದ ಜೆಡಿಎಸ್ ಜನತಾ ಜಲಧಾರೆಯ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತ ನಾಡಿದರು . ಕ್ಷೇತ್ರದ ಪ್ರತಿನಿಧಿಯಾಗಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೆನೆ . ರಮೇಶ್ ಕುಮಾರ್ ವರ್ತನೆಗೆ ಕ್ಷೇತ್ರದ ಬೇಸತ್ತಿದ್ದಾರೆ . ನಿಮ್ಮ ನಿಜ ಬಣ್ಣ ಜನನೆ ಕಳಚುತ್ತಾರೆ ಎಂದರು . ಕ್ಷೇತ್ರದ ಶಾಸಕ ಕೆ.ಆರ್‌ . ರಮೇಶ್ ಕುಮಾರ್ ನೂರಾನು ಕೋಟಿ ಭೇನಾಮಿ ಆಸ್ತಿ , ಅಕ್ರಮ ಬಗ್ಗೆ ಬಳಕಿಗೆ ತಂದ ಕಾರಣ ನ್ಯಾಯಾಲಯದಲ್ಲಿ ನನ್ನ ವಿರುದ್ಧ ಮಾನನಷ್ಟ ಮೊಕ್ಕದಮ್ಮೆ ಹೂಡಿ ದ್ದಾರೆ . ಮಿಸ್ಟರ್ ರಮೇಶ್ ಕುಮಾ ರ್‌ಗೆ ನಡುಕ ಶುರುವಾಗಿರಬೇಕು . ನಿನಗೆ ಯೋಗ್ಯತೆ ಇದ್ದರೆ ಜೈಲಿ ಹಾಕಿಸಿ . ನಿಮ್ಮ ದರಿದ ರಾಜ ಕಾರಣದ ಮುಖವಾಡ ಭಯಲು ಮಾಡುತ್ತೆವೆ ಎಂದು ಸವಾಲು ಹಾಕಿದರು . ಎಸ್ಸಿ , ಎಸ್ಟಿ ಜನಾಂಗ , ಅಲ್ಪಸಂಖ್ಯಾತ ಸಮುದಾಯದ ನಾಯಕ ಎಂದು ಹೇಳಿಕೊಳ್ಳಲು ನಾಚಿಕೆಯಾಗಲ್ಲವೆ . 10 ವರ್ಷ ಗಳಿಂದ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಒಬ್ಬ ಫಲಾನು ಭವಿಗೂ ಕೊಳವೆಭಾವಿ ಕೊರೆಸುವ ಕೆಲಸ ಮಾಡಿಲ್ಲ . ನೀವು ಅಕ್ರಮ ವಾಗಿ ಸಂಪಾದನೆ ಮಾಡಿರುವ 200 ಎಕರೆ ಜಾಗದಲ್ಲಿ ನಿರ್ಮಾಣ ಮಾಡಿರುವ ಫೌಲ್ಟ್ರಿ ಫಾರಂನಲ್ಲಿ ಎಷ್ಟು ಬೇಕಾದರು ಕೊರೆಸಿರುತ್ತೀರ . ಫಾರಂನಲ್ಲಿ ನಿಮಗೆ ಬಡವರ ಬಗ್ಗೆ ಕಾಳಜಿ ಯಿಲ್ಲ ಎಂದು ಆರೋಪಿಸಿದರು . ಕ್ಷೇತ್ರದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಜಾಗ ಮೀಸಲಿರಿಸಿದರು . ಎನ್.ಆರ್.ಶೆಟ್ಟಿ ಯವರೊಂದಿಗೆ ಶಾಮೀಲಾಗಿ ದುಬೈನಲ್ಲಿ ವ್ಯವಹಾರ ಮಾಡಿದಿರ . ಈಗ ಅವೆಲ್ಲ ಎಲ್ಲಿಗೆ ಹೋದವು . ಈ ರೀತಿ ಜನರನ್ನು ಯಾಮರಿಸಲು ಹೇಗೆ ಮನಸ್ಸು ಬಂತು ಎಂದು ಪ್ರಶ್ನಿಸಿದರು . ಕೆಸಿ ವ್ಯಾಲಿ ಯೋಜನೆಯಲ್ಲಿ ರಮೇಶ್‌ ಕುಮಾರ್‌ ಪಾತ್ರವೇನು ಇಲ್ಲ . ಶಂಕುಸ್ಥಾಪನೆ ಕಾರ್ಯಕ್ರಮ ದಲ್ಲಿ ಭಾಗಿಯಷ್ಟೆ ಈ ಯೋಜನೆ ಯನ್ನು ಪರಿಚಯಿಸಿದ್ದು ಅಂದಿನ ಜಿಲ್ಲಾಧಿಕಾರಿ ದಿವಂಗತ ಡಿ.ಕೆ.ರವಿ ಯವರು . ಮೂರನೇ ಭಾರಿ ಶುದ್ದೀಕರಣ ಮಾಡಲು ಒತ್ತಾಯ ಮಾಡತ್ತಿದ್ದರು ಗಮನ ಹರಿಸುತ್ತಿಲ್ಲ . ಇವರಿಗೆ ಇದೆಲ್ಲ ಬೇಕಾಗಿಲ್ಲ ಟೆಂಡರ್ ಪಾರ್ಟಿಗಳು ಎಂದು ಕಿಡಿಕಾರಿದರು .