
ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರ ನಿಯೋಗದಿಂದ ಸನ್ಮಾನ

ಮಂಗಳೂರು ;ವಿಧಾನ್ ಪರಿಷತ್ ಕಲಾಪದಲ್ಲಿ ಅಲ್ಪಸಂಖ್ಯಾತರ ಪರವಾಗಿ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದ MLC ಐವನ್ ಡಿಸೋಜಾ ಮಂಗಳೂರು ಇವರನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ವತಿಯಿಂದ ಅಭಿನಂದಿಸುವ ಕಾರ್ಯಕ್ರಮವು ಮಂಗಳೂರಿನಲ್ಲಿ ನಿನ್ನೆ ಮಾರ್ಚ್ 22ರಂದು ಶನಿವಾರ ನಡೆಯಿತು.
“ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ವಿಧೇಯಕ” ತಿದ್ದುಪಡಿ 2025 ರಲ್ಲಿ ಪ್ರವರ್ಗ-2ಬಿ ನಲ್ಲಿ – ಕರ್ನಾಟಕ ಸರಕಾರವು, ತನ್ನ ನಿರ್ಮಾಣದ ಕೆಲಸ ಕಾರ್ಯಗಳಿಗೆ ಕಾಂಟ್ರಾಕ್ಟ್ ಗಳನ್ನು ನೀಡುವಾಗ ಅದರಲ್ಲಿನ 4% ಕಾಂಟ್ರಾಕ್ಟ್ ಗಳನ್ನು ಅಲ್ಪಸಂಖ್ಯಾತ ವರ್ಗದವರಿಗೆ ಮೀಸಲಾತಿಯನ್ನು ನೀಡಬೇಕು ಎಂಬ ಹೊಸ ಪ್ರಸ್ತಾವನೆಯನ್ನು ಮಾರ್ಚ್ 21ರಂದು ಶುಕ್ರವಾರ ಕರ್ನಾಟಕ ಸರಕಾರಕ್ಕೆ ಸಲ್ಲಿಸಿದ್ದರು. ಇದರಿಂದಾಗಿ ಅಲ್ಪಸಂಖ್ಯಾತ ಕಥೋಲಿಕ ಧರ್ಮದವರಿಗೂ 4% ಕಾಂಟ್ರಾಕ್ಟ್ ಗಳು ದಕ್ಕುತ್ತವೆ ಹಾಗೂ ಕಥೊಲಿಕ ಕ್ರಿಶ್ಚಿಯನ್ನರನ್ನು ಪ್ರವರ್ಗ 2ಬಿ ಇದರಲ್ಲಿಯೇ ಸೇರಿಸಬೇಕು ಎಂದು ಒತ್ತಯಿಸಿದರು.
ಈ ಒಳ್ಳೆಯ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರವರಿಗೆ ಸಮಸ್ತ ಕ್ರೈಸ್ತ ಬಾಂಧವರ ಪರವಾಗಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಪದಾಧಿಕಾರಿಗಳಾದ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್, ಕಾರ್ಯದರ್ಶಿ ಆಲ್ವಿನ್ ಪ್ರಶಾಂತ್ ಮೊಂತೇರೊ, ನಿಕಟ ಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೊ, ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತ, ಮಾಜಿ ಕೇಂದ್ರೀಯ ಕಾರ್ಯದರ್ಶಿ ವಿಲ್ಮ ಮೊಂತೇರೊ, ವಲಯ ಅಧ್ಯಕ್ಷರುಗಳಾದ ಸಂತೋಷ್ ಡಿಸೋಜ ಬಜ್ಪೆ, ಲೋರೆನ್ಸ್ ಡಿಸೋಜ ಸುರತ್ಕಲ್, ಅರುಣ್ ಡಿಸೋಜ ಶಕ್ತಿನಗರ, ಆಲ್ವಿನ್ ಡಿಸೋಜ ಮೂಡಬಿದಿರೆ ಮತ್ತು ಮೂಡಬಿದಿರೆ ಘಟಕ ಅಧ್ಯಕ್ಷ ರೊನಾಲ್ಡ್ ಸೆರಾವೊ ನಿಯೋಗ ಭೇಟಿ ಮಾಡಿ ಕೃತಜ್ಞತೆಗಳನ್ನು ಸಲ್ಲಿಸಿ ಸನ್ಮಾನಿಸಿ ಅಭಿನಂದನೆಯನ್ನು ಸಲ್ಲಿಸಿದರು.














