ಶ್ರೀನಿವಾಸಪುರ : ಏ.26 ರ ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತದಾನದೊಂದು ನಡೆಸಬಹುದಾದ ಎಲ್ಲಾ ನಮೂನೆಗಳ ಬಗ್ಗೆ ಮಾಹಿತಿ, ಬ್ಯಾಲೆಟ್ ಯೂನಿಟ್ , ಕಂಟ್ರೋಲ್ ಯೂನಿಟ್, ಹಾಗು ಮತಯಂತ್ರಗಳ ಬಗ್ಗೆ ಮಾಸ್ಟರ್ ಅಧಿಕಾರಿಗಳಿಂದ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮೊದಲ ತರಬೇತಿ ನೀಡಲಾಗುತ್ತಿದೆ ಎಂದು ಎಆರ್ ಓ, ಎಂ.ಆರ್.ಸುಮಾ ತಿಳಿಸಿದರು.
ಪಟ್ಟಣ ಹೊರವಲಯದ ಬೈರವೇಶ್ವರ ವಿದ್ಯಾನಿಕೇತನದಲ್ಲಿ ಸೋಮವಾರ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸಂಬಂದಿಸಿದಂತೆ ತಾಲೂಕಿನ ಪಿಆರ್ ಓ, ಎಪಿಆರ್ ಓಗಳಿಗೆ ಗಳಿಗೆ ಒಂದು ದಿನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಟ್ಟು ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ 284 ಮತಗಟ್ಟೆಗಳು ಇದ್ದು, ಸೂಕ್ಷ್ಮ ಮತಗಟ್ಟೆಗಳು 77, ಅತಿಸೂಕ್ಷ್ಮ 09, ಉಳಿದವು ಸಾಮಾನ್ಯ ಮತಗಟ್ಟೆಗಳು ಆಗಿರುತ್ತವೆ. ಮತದಾರರ ಸಂಖ್ಯೆ ಒಟ್ಟು 2.19 ಲಕ್ಷ, ಗಂಡಸರು 1.8 ಲಕ್ಷ, ಹೆಂಗಸರು 1.11ಲಕ್ಷ ಇದ್ದಾರೆಂದು ಮಾಹಿತಿ ನೀಡಿದರು.
ಬೈರವೇಶ್ವರ ವಿದ್ಯಾನಿಕೇತನದಲ್ಲಿನ 13 ಕೊಠಡಿಗಳಲ್ಲಿ ಪಿಆರ್ ಓ, ಎ ಪಿಆರ್ ಓ ಅಧಿಕಾರಿಗಳಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಮಯದಲ್ಲಿ ತರಬೇತಿಗೆ ಬಂದಿದ್ದ ಅಧಿಕಾರಿಗಳಿಗೆ ಮಧ್ಯಾಹ್ನ ಊಟ ವ್ಯವಸ್ಥೆ ಮಾಡಲಾಗಿತ್ತು.