ಶ್ರೀನಿವಾಸಪುರ : ಕಷ್ಟಗಳು ಎಂಬುದು ಎಲ್ಲರಿಗೂ ಬರುತ್ತದೆ ಆದರೆ ದುಶ್ಚಟಗಳಿಗೆ ಮೊರೆಹೋಗುವುದು ತಪ್ಪು ಎಂದು ಹೇಳಿ , ಕಷ್ಟ ಪಟ್ಟು ದುಡಿಮೆ ಮಾಡಿ ಕುಟುಂಬವನ್ನ ಪಾಲಿಸುವಂತೆ ಶಾಸಕ ಜಿ.ಕೆ.ವೆಂಟಶಿವಾರೆಡ್ಡಿ ಸಲಹೆ ನೀಡಿದರು.
ತಾಲೂಕಿನ ಗುರವಲ್ಲೋಳ್ಳಗಡ್ಡ ಗ್ರಾಮಕ್ಕೆ ಬುಧವಾರ ಮೃತ ಕುಟುಂಬದ ಮನೆಗೆ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನವನ್ನ ತಿಳಿಸಿ ಮಾತನಾಡಿದರು.
ಮೃತರ ಅಂತ್ಯ ಸಂಸ್ಕಾರಕ್ಕಾಗಿ ಐವತ್ತು ಸಾವಿರ ರೂಗಳನ್ನು ನೀಡಿ , 1 ಲಕ್ಷರೂಗಳನ್ನು 11 ದಿವಸದೊಳಗೆ ಕುಟುಂಬಕ್ಕೆ ನೀಡುವುದಾಗಿ ಭರವಸೆ ನೀಡಿದರು.
ಶ್ರೀನಿವಾಸಪುರ ಠಾಣೆಯ ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ, ಮುಖಂಡರಾದ ಸಿಮೆಂಟ್ ನಾರಾಯಣಸ್ವಾಮಿ, ಸುಧಾಕರ, ಶ್ರೀರಾಮರೆಡ್ಡಿ ಇದ್ದರು.