ಶ್ರೀನಿವಾಸಪುರ, ಆ-23, ಬರದಿಂದ ಬಸವಳಿದಿರುವ ಕೃಷಿ, ನೀರಾವರಿ ಪಂಪ್‍ಸೆಟ್‍ಗಳಿಗೆ ಸಮರ್ಪಕ ವಿದ್ಯುತ್ ನೀಡದ ಬೆಸ್ಕಂ ಅಧಿಕಾರಿಗಳ ರೈತ ವಿರೋಧಿ ದೋರಣೆ ಖಂಡಿಸಿ ಗುಣಮಟ್ಟದ 12 ತಾಸು ವಿದ್ಯುತ್ ನೀಡುವಂತೆ ರೈತ ಸಂಘದಿಂದ ಬೆಸ್ಕಂ ಕಚೇರಿ ಮುಂದೆ ತಲೆ ಮೇಲೆ ಕಲ್ಲು ಒತ್ತು ಕಣ್ಣಿಗೆ ಕಪ್ಪು ಕಟ್ಟಿಕೊಂಡು ಹೋರಾಟ ಮಾಡಿ ಬೆಸ್ಕಂ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮುಂಗಾರು ಮಳೆ ಅಭಾವ ನೆಪದಲ್ಲಿ ಬೆಸ್ಕಂ ಅಧಿಕಾರಿಗಳು ಕೃಷಿ ಚಟುವಟಿಕೆಗಳಿಗೆ ಅಗತ್ಯ ವಿರುವ 12 ತಾಸು ವಿದ್ಯುತ್ ನೀಡದೆ ಲೋಡ್ ಷೆಡ್ಡಿಂಗ್ ಹೆಸರಿನಲ್ಲಿ ರೈತರ ಜೀವದ ಜೊತೆ ಚಲ್ಲಾಟವಾಡುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ಬೆಳೆ ನಷ್ಟವಾದರೆ ಬೆಸ್ಕಂ ಅಧಿಕಾರಿಗಳ ಆಸ್ತಿ ಹರಾಜು ಹಾಕಿ ನಷ್ಟ ಪರಿಹಾರ ನೀಡಬೇಕೆಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಸರ್ಕಾರವನ್ನು ಒತ್ತಾಯಿಸಿದರು.
ಉಚಿತ 200 ಯುನಿಟ್ ವಿದ್ಯುತ್ ನೀಡಿ ರೈತರಿಗೆ ಕೊಡುವ ಕೃಷಿ ಪಂಪ್‍ಸೆಟ್ ಹಾಗೂ ನಿರಂತರ ಜ್ಯೋತಿ ವಿದ್ಯುತ್‍ನ್ನು ಖಡಿತ ಮಾಡುವುದು ಯಾವ ನ್ಯಾಯ ವಿದ್ಯುತ್ ಅಭಾವ ಇದ್ದರೆ, ಖರೀದಿ ಮಾಡಿ ಸಮರ್ಪಕವಾದ ವಿದ್ಯುತ್ ನೀಡಬೇಕಾದ ಜವಾಭ್ದಾರಿ ಸರ್ಕಾರದ್ದು ಅದನ್ನು ಬಿಟ್ಟು ತಮಗೆ ಇಷ್ಟ ಬಂದ ರೀತಿ ವಿದ್ಯುತ್ ಖಡಿತ ಜನ ಸಾಮಾನ್ಯರು ರೈತರ ಜೊತೆ ಚಲ್ಲಾಟವಾಡುವಂತೆ ಸರ್ಕಾರ ಏನಾದರೂ ಆದೇಶ ಮಾಡಿದೆ ಎಂದು ಪ್ರಶ್ನೆ ಮಾಡಿದರು.
ಒಂದ ಎಕರೆ ಕೃಷಿ ಭೂಮಿಗೆ ನೀರು ಹಾಯಿಸಬೇಕಾದರೆ ದಿನದ 24 ಗಂಟೆ ಕೊಳವೆಬಾವಿಯ ಹತ್ತಿರ ಜೀವನ ಮಾಡಬೇಕಾದ ಪರಿಸ್ಥಿತಿ ಇದೆ. ಕೊಡುವ ವಿದ್ಯುತ್ ಸಹ ಗುಣಮಟ್ಟ ವಿಲ್ಲದೆ ನೂರೊಂದು ಬಾರಿ ಹೋಗಿ ಬರುವ ವಿದ್ಯುತ್‍ನಿಂದ ಪಂಪ್‍ಸೆಟ್‍ಗಳಲ್ಲಿನ ಮೋಟರ್‍ಗಳು ಸುಟ್ಟು ಅದು ಸಹ ರೈತರ ತಲೆ ಮೇಲೆ ಬೆಸ್ಕಂ ಅಧಿಕಾರಿಗಳು ಹಾಕುತ್ತಿದ್ದಾರೆಂದು ಆರೋಪ ಮಾಡಿದರು.
ತಾಲ್ಲೂಕು ಅಧ್ಯಕ್ಷ ಆಂಜಿನಪ್ಪ ಮಾತನಾಡಿ ಬಿಸಲು ಮಳೆ ಗಾಳಿ ಎನ್ನದೆ ರಾತ್ರಿ ಹಗಲು ಬೆವರು ಸುರಿಸಿ ದುಡಿದು ಬೆಳೆದ ಬೆಳೆಯನ್ನು ರೈತರೇ ತಿನ್ನುವುದಿಲ್ಲ. ಎಲ್ಲಾ ಅಧಿಕಾರಿಗಳು ಜನ ಪ್ರತಿನಿಧಿಗಳು ರೈತರು ಬೆಳೆದ ಅನ್ನವನ್ನೇ ತಿನ್ನುತ್ತಾರೆ. ಆದರೆ ಅನ್ನ ತಿನ್ನುವ ಮೊದಲು ಕಷ್ಟದಲ್ಲಿ ದೇವರನ್ನು ನೆನೆಯುವಂತೆ ತಟ್ಟೆಯಲ್ಲಿರುವ ಅನ್ನ ನೋಡಿ ರೈತರನ್ನು ನೆನದು ರೈತರ ಕಷ್ಟಕ್ಕೆ ಸ್ಪಂಧಿಸದ ಅಧಿಕಾರಿಗಳಿಗೆ ರೈತರ ಕಷ್ಟದ ಹರಿವಲ್ಲವೆಂದು ಕಿಡಿಕಾರಿದರು.
ಕಾಡು ಪ್ರಾಣಿಗಳು ಜೊತೆ ರೈತರ ವಾಸ ಬಹುತೇಕ ರೈತರು ತೊಟದ ಮನೆಗಳಲ್ಲಿ ವಾಸವಿರುವುದರಿಂದ ನಿರಂತರ ಜ್ಯೋತಿ ಆ ಮನೆಗಳಿಗು ವಿದ್ಯುತ್ ಕೊಡಬೇಕೆಂಬ ಬೇಡಿಕೆ ಇದೆ. ಆದರೆ ರಾತ್ರಿವೇಳೆ ವಿದ್ಯುತ್ ಕಡಿತ ಮಾಡುವುದರಿಂದ ರೈತರ ತೋಟಗಳಿಗೆ ನೀರು ಆಯಿಸುವುದು ಕಷ್ಟಕರ ಜೊತೆಗೆ ಚಿರತೆ, ಕರಡಿ, ಹಾವುಗಳ ಜೊತೆ ರೈತರು ಜೀವನ ಮಾಡಬೇಕಾದ ಮಟ್ಟಕ್ಕೆ ಬೆಸ್ಕಂ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.
24 ಗಂಟೆಯಲ್ಲಿ ರೈತರ ಕೃಷಿ ಪಂಪ್‍ಸೆಟ್‍ಗಳಿಗೆ 10 ರಿಂದ 12 ತಾಸು 3ಪೇಸ್ ವಿದ್ಯುತ್ 24 ಗಂಟೆ ನಿರಂತರ ಜ್ಯೋತಿ ನೀಡುವ ಮುಖಾಂತರ ರೈತ ಪರ ನಿಲ್ಲಬೇಕು. ಇಲ್ಲವಾದರೆ ರೈತರ ಬೆಳೆ ಜಾನುವಾರುಗಳ ಸಮೇತ ಸಂಬಂಧಪಟ್ಟ ಅಧಿಕಾರಿಗಳ ಮನೆ ಮುಂದೆ ನಿರಂತರ ದರಣಿ ಬುಡ್ಡಿ ದೀಪಗಳೊಂದಿಗೆ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಇಇ ರವರು ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆ ಹರಿಸುವ ಬರವಸೆಯನ್ನು ನೀಡಿದರು.
ಹೋರಾಟದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷರು ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಆಲವಾಟ ಶಿವು, ಸಹದೇವಣ್ಣ, ಶೇಕ್ ಷಪಿವುಲ್ಲಾ, ಕಾಡದ್ಯಾವಂಡಹಳ್ಳಿ ರಾಜೇಂದ್ರಣ್ಣ, ಸುಪ್ರಿಂ ಚಲ, ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಮುಂತಾದವರು ಇದ್ದರು.