ಕುಂದಾಪುರ : ಡಿಸೆಂಬರ್ 29ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ, ಹಾಲಾಡಿಯಲ್ಲಿ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ 2022-23 ಇದರ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಡಾ. ಶುಭಕರಾಚಾರಿ ವಹಿಸಿದ್ದು ಇವರು ಶಿಬಿರವನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳು ಆಗಿರುವ ಅರುಣ ಎ. ಎಸ್,ರಾಮಚಂದ್ರ ಆಚಾರ್ ಮತ್ತು ಅಣ್ಣಪ್ಪ ಇವರಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ ಇವರ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರಕಾರ್ಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ. ಎಂ. ಗೊಂಡ,ಅನೂಪ್ ಕುಮಾರ್ ಶೆಟ್ಟಿ, ಸಮೂಹ ಸಂಪನ್ಮೂಲ ಕೇಂದ್ರ ಹಾಲಾಡಿ, ಜನಾರ್ದನ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಹಾಲಾಡಿ,ಗುರುಪ್ರಸಾದ್ ಸದಸ್ಯರು ಗ್ರಾಮ ಪಂಚಾಯತ್ ಹಾಲಾಡಿ, ನಾಗರಾಜ್ ಗೋಳಿ ಸದಸ್ಯರು ಗ್ರಾಮ ಪಂಚಾಯತ್ ಹಾಲಾಡಿ, ಗಣೇಶ ಎಮ್ ಅಧ್ಯಕ್ಷರು ಎಸ್ ಡಿ ಎಂ ಸಿ,ಸ.ಹಿ.ಪ್ರಾ.ಶಾಲೆ ಮುದೂರಿ, ಸಂಜೀವ ಮುಖ್ಯೋಪಾಧ್ಯಾಯರು ಸ ಹಿ ಪ್ರಾ ಶಾಲೆ ಮೂದೂರಿ ಮತ್ತು ರಮೇಶ್ ನಾಯ್ಕ್ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಮುದೂರಿ ಉಪಸ್ಥಿತರಿದ್ದರು.
ಶಿಬಿರಾರ್ಥಿಯರಾದ ಚಿತ್ರ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾದ ರಾಮಚಂದ್ರ ಆಚಾರ್ ವಂದಿಸಿ ಮತ್ತು ರೋಜಾ ನಿರೂಪಿಸಿ ಕಾರ್ಯಕ್ರಮ ನಿರ್ವಹಿಸಿದರು.