ಹೊನ್ನಾವರ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಹಾಗೂ ಸಂತ ಮದರ್ ತೆರೆಸಾ ಬ್ರಾಸ್ ಬ್ಯಾಂಡ್ ಹಡಿನ್ ಬಾಳ್ ಇದರ ಸಹಭಾಗಿತ್ವದಲ್ಲಿ ಹೊನ್ನಾವರದ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತ ಹಾಲ್ ನಲ್ಲಿ ಸತತವಾಗಿ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 6ರವರೆಗೆ ನೆಡೆದ ನಾಟಕ ಕಾರ್ಯಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು*.
*ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಶ್ರೀಯುತ ಜೋಕಿo ಸ್ಟ್ಯಾನಿ ಆಲ್ವಾರೀಸ್ ರವರು ವಹಿಸಿದರು*.
*ಮುಖ್ಯ ಅತಿಥಿಯಾಗಿ ಆರೋಗ್ಯ ಮಾತಾ ಚರ್ಚ್ ಗುಂಡಿಬಾಳ್ ಇದರ
ಫಾದರ್ ಥೋಮಸ್ ಫರ್ನಾಂಡಿಸ್ , ಅತಿಥಿಗಳಾದ ಶ್ರೀ ದಯಾನಂದ ಅನಂತ್ ಭಟ್, ಚಿಕ್ಕೋನಕೋಡ್ – ಹೊನ್ನಾವರ್ , ಶಿಬಿರದ ಮುಖ್ಯ ತರಬೇತಿಗಾರರಾದ ಶ್ರೀ ಮನೀಶ್ ಪಿಂಟೊ ಕಲಾಕುಲ್, ಶಿಬಿರ ಸಂಚಾಲಕ ಮತ್ತು ಕೊಂಕಣಿ ಅಕಾಡಮಿಯ ಸದಸ್ಯರಾದ ಶ್ರೀ ಜೇಮ್ಸ್ ಪೆದ್ರು ಲೂಪೀಸ್ , ಕೊಂಕಣಿ ಅಕಾಡೆಮಿಯ ಸದಸ್ಯ ನವೀನ್ ಲೋಬೊ ,ಶ್ರೀ ಮಾಮ್ದು ಇಬ್ರಾಹಿಂ, ಮದರ್ ತೆರೇಸಾ ಬ್ರಾಸ್ ಬ್ಯಾಂಡ್ ಇದರ ಮುಖ್ಯಸ್ಥರಾದ ಮರಿಯಾಣ್ ಮಿರಾoದ ಮತ್ತಿತರು ಉಪಸ್ಥಿತರಿದ್ದರು*.
*ಸತತ 7 ದಿನಗಳಿಂದ ನಾಟಕದ ವಿವಿಧ ಆಯಾಮಗಳ ತರಬೇತಿಯನ್ನು ಶಿಬಿರಾರ್ಥಿಗಳಿಗೆ ನೀಡಲಾಯಿತು.ಇದರ ಭಾಗವಾಗಿ ಶಿಬಿರಾರ್ಥಿಗಳಿಂದ ಸಣ್ಣ ನಾಟಕವನ್ನು ಪ್ರದರ್ಶಿಸಿದರು.