ಶಿಕ್ಷಕರ ಗಣಕೀಕೃತ ವರ್ಗಾವಣೆ ಕೌನ್ಸಿಲಿಂಗ್ ಜೂ.20 ರಿಂದ ಇಲಾಖೆಯ ಉಪನಿರ್ದೇಶಕರ ಕಚೇರಿ ಎಸ್‍ಎಸ್‍ಎ ನಡೆಯಲಿದೆ

ಕೋಲಾರ:- 2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-2 ಮತ್ತು ಪ್ರೌಢ ಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಮತ್ತು ವಿಶೇಷ ಶಿಕ್ಷಕರ ಹೆಚ್ಚುವರಿ ವರ್ಗಾವಣೆ ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆಗಳು ಹಾಗೂ ನಿರ್ಧಿಷ್ಟ ಪಡಿಸಿದ ವೃಂದದ (ಕನಿಷ್ಠ 03 ರಿಂದ 05 ವರ್ಷದೊಳಗಡೆ) ಶಿಕ್ಷಕರ ಗಣಕೀಕೃತ ವರ್ಗಾವಣೆ ಕೌನ್ಸಿಲಿಂಗ್ ಜೂ.20 ರಿಂದ ಇಲಾಖೆಯ ಉಪನಿರ್ದೇಶಕರ ಕಚೇರಿ ಎಸ್‍ಎಸ್‍ಎ ಇಲ್ಲಿ ನಡೆಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈ ಸಂಬಂಧ ಶಿಕ್ಷಕರ ವರ್ಗಾವಣೆಯ ಗಣಕೀಕೃತ ಕೌನ್ಸಿಲಿಂಗ್‍ನ ವೇಳಾಪಟ್ಟಿ ಬಿಡುಗಡೆ ಮಾಡಿರುವ ಅವರು, ಜೂ.20 ರಂದು ಪೂರ್ವಾಹ್ನ ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ ವರ್ಗಾವಣೆಗೆ ಸಂಬಂಧಿಸಿದಂತೆ ಬಂಗಾರಪೇಟೆ , ಕೆ.ಜಿ.ಎಫ್, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ಬ್ಲಾಕ್ ಹಂತದ ಹೆಚ್ಚುವರಿ ಶಿಕ್ಷಕರಿಗೆ ಕೌನ್ಸಿಲಿಂಗ್ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜೂ.21ರ ಪೂರ್ವಾಹ್ನ ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ ವರ್ಗಾವಣೆ ಜಿಲ್ಲಾ ಹಂತದಲ್ಲಿ ಬ್ಲಾಕ್ ಹಂತದಲ್ಲಿನ ಉಳಿಕೆಯಾಗುವ ಎಲ್ಲಾ ಹೆಚ್ಚುವರಿ ಶಿಕ್ಷಕರಿಗೆ ಕೌನ್ಸಿಲಿಂಗ್ ನಡೆಯಲಿದ್ದು, ಈಗಾಗಲೇ ಹೆಚ್ಚುವರಿ ಪಟ್ಟಿಯಲ್ಲಿ ಹೆಸರಿರುವ ಎಲ್ಲಾ ಶಿಕ್ಷಕರು ಪಾಲ್ಗೊಂಡು ಸ್ಥಳ ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಜೂ.22 ರ ಪೂರ್ವಾಹ್ನ ಜಿಲ್ಲಾ ಹಂತದಲ್ಲಿ ಹೆಚ್ಚುವರಿ ಶಿಕ್ಷಕರ ಮರುಹೊಂದಣಿಕೆ ನಂತರ ಉಳಿಕೆಯಾಗುವ ಹೆಚ್ಚುವರಿ ಶಿಕ್ಷಕರನ್ನು ಜಿಲ್ಲೆಯೊಳಗೆ ಪಿ.ಟಿ.ಆರ್ ಪ್ರಕಾರ ಅತೀ ಹೆಚ್ಚಿನ ಮಕ್ಕಳ ದಾಖಲಾತಿ ಇರುವ ಶಾಲೆಗಳಲ್ಲಿ ಇಳಿಕೆ ಕ್ರಮಾಂಕದಲ್ಲಿ ಶಿಕ್ಷಕರ ಮರುಹೊಂದಣಿಕೆ ಕ್ರಮದಡಿ ಜಿಲ್ಲಾ ಹಂತದಲ್ಲಿನ ಉಳಿಕೆಯಾಗುವ ಎಲ್ಲಾ ಹೆಚ್ಚುವರಿ ಶಿಕ್ಷಕರಿಗೆ ಕೌನ್ಸಿಲಿಂಗ್ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜೂ.23 ರಂದು ಪೂವಾಹ್ನ ಗರಿಷ್ಠ 05 ವರ್ಷ ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಗರಿಷ್ಠ 05 ವರ್ಷ ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಶಿಕ್ಷಕರ ಅಂತಿಮ ಪಟ್ಟಿಯಂತೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಜೂ.26 ರ ಪೂರ್ವಾಹ್ನ ಜಿಲ್ಲಾ ಹಂತದಲ್ಲಿ ನಿರ್ದಿಷ್ಠ ಪಡಿಸಿದ ಹುದ್ದೆಗಳ ಕೌನ್ಸಿಲಿಂಗೆ ನಂತರ ಉಳಿಕೆಯಾಗುವ ಶಿಕ್ಷಕರನ್ನು ಜಿಲ್ಲೆಯೊಳಗೆ ಪಿ.ಟಿ.ಆರ್ ಪ್ರಕಾರ ಅತೀ ಹೆಚ್ಚಿನ ಮಕ್ಕಳ ದಾಖಲಾತಿ ಇರುವ ಶಾಲೆಗಳಲ್ಲಿ ಇಳಿಕೆ ಕ್ರಮಾಂಕದಲ್ಲಿ ಶಿಕ್ಷಕರ ಮರುಹೊಂದಣಿಕೆ ಕ್ರಮ ನಡೆಯಲಿದ್ದು, ಜಿಲ್ಲಾ ಹಂತದಲ್ಲಿನ ಉಳಿಕೆಯಾಗುವ ಎಲ್ಲಾ ನಿರ್ದಿಷ್ಠ ಪಡಿಸಿದ ಶಿಕ್ಷಕರಿಗೆ ಇಲ್ಲಿ ಕೌನ್ಸಿಲಿಂಗ್ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜುಲೈ 11 ರಿಂದ ಜು.12ರವರೆಗೂ ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ತಾಲ್ಲೂಕು ಒಳಗೆ ಹಾಗೂ ತಾಲ್ಲೂಕಿನ ಹೊರಗೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆಯೂ ಕೋರಿಕೆ ವರ್ಗಾವಣೆಯ ಅಂತಿಮ ಜೇಷ್ಟತಾ ಪಟ್ಟಿಯಂತೆ ನಡೆಯಲಿದೆ. ಹಾಗೆಯೇ ಜು.15 ರಂದು ಪೂರ್ವಾಹ್ನ ಪ್ರಾಥಮಿಕ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಪರಸ್ಪರ ವರ್ಗಾವಣೆಯ ಅಂತಿಮ ಜೇಷ್ಟತಾ ಪಟ್ಟಿಯಂತೆ ನಡೆಯಲಿದ್ದು, ಜು.17 ರಂದು ಕನಿಷ್ಠ(03 ರಿಂದ 05 ವರ್ಷದೊಳಗಡೆ) ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಕನಿಷ್ಠ(03 ರಿಂದ 05 ವರ್ಷದೊಳಗಡೆ) ಮುಗಿದ ನಿರ್ದಿಷ್ಠ ಪಡಿಸಿದ ಶಿಕ್ಷಕರ ಅಂತಿಮ ಪಟ್ಟಿಯಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪ್ರೌಢಶಾಲಾ ಶಿಕ್ಷಕರ ಹೆಚ್ಚುವರಿ ಕೌನ್ಸಿಲಿಂಗ್


ಜೂ. 20 ರ ಪೂವಾಹ್ನ ಪ್ರೌಢ ಶಾಲಾ ಶಿಕ್ಷಕರ ಹೆಚ್ಚುವರಿ ವರ್ಗಾವಣೆ ಬ್ಲಾಕ್ ಹಂತ ಹೆಚ್ಚುವರಿ ಶಿಕ್ಷಕರಿಗೆ ನಡೆಯಲಿದೆ, ಹಾಗೆಯೇ ಜೂ.21 ರಂದು ಪ್ರೌಢ ಶಾಲಾ ಶಿಕ್ಷಕರ ಹೆಚ್ಚುವರಿ ವರ್ಗಾವಣೆ ಜಿಲ್ಲಾ ಹಂತ ಜಿಲ್ಲಾ ಹಂತದಲ್ಲಿನ ಉಳಿಕೆಯಾಗುವ ಎಲ್ಲಾ ಹೆಚ್ಚುವರಿ ಶಿಕ್ಷಕರಿಗೆ ಸ್ಥಳ ಆಯ್ಕೆ ಕೌನ್ಸಿಲಿಂಗ್ ನಡೆಯಲಿದೆ ಎಂದು ಡಿಡಿಪಿಐ ಅವರು ತಿಳಿಸಿದ್ದಾರೆ.
ಜೂ.22 ರಂದು ಅಪರಾಹ್ನ ಜಿಲ್ಲಾ ಹಂತದಲ್ಲಿ ಹೆಚ್ಚುವರಿ ಶಿಕ್ಷಕರ ಮರುಹೊಂದಣಿಕೆ ನಂತರ ಉಳಿಕೆಯಾಗುವ ಹೆಚ್ಚುವರಿ ಶಿಕ್ಷಕರನ್ನು ಜಿಲ್ಲೆಯೊಳಗೆ ಪಿ.ಟಿ.ಆರ್ ಪ್ರಕಾರ ಅತೀ ಹೆಚ್ಚಿನ ಮಕ್ಕಳ ದಾಖಲಾತಿ ಇರುವ ಶಾಲೆಗಳಲ್ಲಿ ಇಳಿಕೆ ಕ್ರಮಾಂಕದಲ್ಲಿ ಶಿಕ್ಷಕರ ಮರುಹೊಂದಣಿಕೆ ಕ್ರಮದಂತೆ ಜಿಲ್ಲಾ ಹಂತದಲ್ಲಿನ ಉಳಿಕೆಯಾಗುವ ಎಲ್ಲಾ ಹೆಚ್ಚುವರಿ ಶಿಕ್ಷಕರಿಗೆ ಕೌನ್ಸಿಲಿಂಗ್ ಸ್ಥಳ ಆಯ್ಕೆ ಕೌನ್ಸಿಲಿಂಗ್ ನಡೆಯಲಿದೆ.
ಜೂ.23 ರಂದು ಅಪರಾಹ್ನ ಗರಿಷ್ಠ 05 ವರ್ಷ ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಗರಿಷ್ಠ 05 ವರ್ಷ ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಶಿಕ್ಷಕರ ಅಂತಿಮ ಪಟ್ಟಿಯಂತೆ ನಡೆಯಲಿದೆ. ಇದಾದ ನಂತರ ಜೂ.26 ರಂದು ಪೂವಾಹ್ನ ಜಿಲ್ಲಾ ಹಂತದಲ್ಲಿ ನಿರ್ದಿಷ್ಠ ಪಡಿಸಿದ ಹುದ್ದೆಗಳ ಕೌನ್ಸಿಲಿಂಗೆ ನಂತರ ಉಳಿಕೆಯಾಗುವ ಶಿಕ್ಷಕರನ್ನು ಜಿಲ್ಲೆಯೊಳಗೆ ಪಿ.ಟಿ.ಆರ್ ಪ್ರಕಾರ ಅತೀ ಹೆಚ್ಚಿನ ಮಕ್ಕಳ ದಾಖಲಾತಿ ಇರುವ ಶಾಲೆಗಳಲ್ಲಿ ಇಳಿಕೆ ಕ್ರಮಾಂಕದಲ್ಲಿ ಶಿಕ್ಷಕರ ಮರುಹೊಂದಣಿಕೆ ಕ್ರಮದಡಿ ಜಿಲ್ಲಾ ಹಂತದಲ್ಲಿನ ಉಳಿಕೆಯಾಗುವ ಎಲ್ಲಾ ನಿರ್ದಿಷ್ಠ ಪಡಿಸಿದ ಶಿಕ್ಷಕರಿಗೆ ಸ್ಥಳ ಆಯ್ಕೆ ಕೌನ್ಸಿಲಿಂಗ್ ನಡೆಯಲಿದೆ ಎಂದು ಡಿಡಿಪಿಐ ಮಾಹಿತಿ ನೀಡಿದ್ದಾರೆ.
ಜು.13 ರಿಂದ ಜುಲೈ 14 ರವರೆಗೂ ಪ್ರೌಢ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ತಾಲ್ಲೂಕು ಒಳಗೆ ಹಾಗೂ ತಾಲ್ಲೂಕಿನ ಹೊರಗೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆಯೂ ಕೋರಿಕೆ ವರ್ಗಾವಣೆಯ ಅಂತಿಮ ಜೇಷ್ಟತಾ ಪಟ್ಟಿಯಂತೆ ನಡೆಯಲಿದೆ. ಜುಲೈ 15ರ ಅಪರಾಹ್ನ ಪ್ರೌಢ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಪರಸ್ಪರ ವರ್ಗಾವಣೆಯ ಅಂತಿಮ ಜೇಷ್ಟತಾ ಪಟ್ಟಿಯಂತೆ ನಡೆಯಲಿದೆ, ಜುಲೈ 17 ಶುಕ್ರವಾರ ಕನಿಷ್ಠ(03 ರಿಂದ 05 ವರ್ಷದೊಳಗಡೆ) ಅವಧಿ ಮುಗಿದ ನಿರ್ದಿಷ್ಠ ಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆಯೂ ಕನಿಷ್ಠ 03 ರಿಂದ 05 ವರ್ಷದೊಳಗಡೆಯಂತೆ ಮುಗಿದ ನಿರ್ದಿಷ್ಠ ಪಡಿಸಿದ ಶಿಕ್ಷಕರ ಅಂತಿಮ ಪಟ್ಟಿಯಂತೆ ಸ್ಥಳ ಆಯ್ಕೆ ಕೌನ್ಸಿಲಿಂಗ್ ನಡೆಯಲಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

ಕೌನ್ಸಿಲಿಂಗ್‍ಗೆ ಬರುವ ಶಿಕ್ಷಕರಿಗೆ ಸೂಚನೆಗಳು


ವರ್ಗಾವಣೆ ಪಟ್ಟಿಯಲ್ಲಿರುವ ಶಿಕ್ಷಕರು ವೇಳಾ ಪಟ್ಟಿಯಲ್ಲಿ ಸೂಚಿಸಿರುವ ದಿನಾಂಕಗಳಂದು ಸೂಚಿಸಿರುವ ಸಮಯಕ್ಕೆ ಕೌನ್ಸಿಲಿಂಗ್‍ಗೆ ಹಾಜರಾಗುವುದು. ತಡವಾಗಿ ಬಂದಲ್ಲಿ ನಿಮ್ಮ ಕ್ರಮ ಸಂಖ್ಯೆ ಮುಂದೆ ಹೋಗಿದ್ದಲ್ಲಿ ಆನ್‍ಲೈನ್ ಕೌನ್ಸಿಲಿಂಗ್ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಕಾಶವಿರುವುದಿಲ್ಲ. ಪಟ್ಟಿಯಲ್ಲಿರುವ ಶಿಕ್ಷಕರು ಮಾತ್ರ ಕೌನ್ಸಿಲಿಂಗ್‍ಗೆ ಹಾಜರಾಗುವುದು. ಕೌನ್ಸಿಲಿಂಗ್ ಹಾಜರಾಗುವ ಶಿಕ್ಷಕರು ಸಾಂದರ್ಭಿಕ ರಜೆ ಪಡೆದು ಕೌನ್ಸಿಲಿಂಗ್‍ಗೆ ಹಾಜರಾಗುವುದು. ಯಾವುದೇ ಕಾರಣಕ್ಕೂ ಅನ್ಯ ಕಾರ್ಯ ನಿಮಿತ್ತ ಒಒಡಿ ಎಂದು ಪರಿಗಣಿಸುವುದಿಲ್ಲ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.