ಹಿಪ್ಪುನೇರಳೆಯಲ್ಲಿ ಮೈಟ್ಸ್,ಥ್ರಿಪ್ಸ್ ನುಸಿ ಪೀಡೆಗಳ ಸಮಗ್ರ ನಿರ್ವಹಣೆ ಹಾಗೂ ದ್ವಿತಳಿ ರೇಷ್ಮೆಗೂಡಿನ ಉತ್ಪಾದನೆಗೆ ಆಧುನಿಕ ತಾಂತ್ರಿಕತೆಗಳು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

filter: 0; fileterIntensity: 0.0; filterMask: 0; module: h; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (12, -1); aec_lux: 244.64684; hist255: 0.0; hist252~255: 0.0; hist0~15: 0.0;

ಕೋಲಾರ, ಹಿಪ್ಪುನೇರಳೆಯಲ್ಲಿ ಮೈಟ್ಸ್ ಹಾಗೂ ಥ್ರಿಪ್ಸ್ ನುಸಿ ಪೀಡೆಗಳ ಸಮಗ್ರ ನಿರ್ವಹಣೆ ಹಾಗೂ ದ್ವಿತಳಿ ರೇಷ್ಮೆಗೂಡಿನ ಉತ್ಪಾದನೆಗೆ ಆಧುನಿಕ ತಾಂತ್ರಿಕತೆಗಳು-ಸಾಮಥ್ರ್ಯ ವೃದ್ಧಿ ಕಾರ್ಯಕ್ರಮವನ್ನು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರ, ರೇಷ್ಮೆ ಇಲಾಖೆ, ಕೋಲಾರ ಹಾಗೂ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಮಡಿವಾಳ, ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 18.08.2021 ರಂದು ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ರೇಷ್ಮೆ ಸಹಾಯಕ ನಿರ್ದೇಶಕರು, ಕೋಲಾರ ವಿಭಾಗದ ಶ್ರೀ. ಮಂಜುನಾಥ್, ಎಂ. ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಹಿಪ್ಪುನೇರಳೆ ಹಾಗೂ ದ್ವಿತಳಿ ರೇಷ್ಮೆಗೂಡಿನ ಉತ್ಪಾದನೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಗ್ಗೆ ರೇಷ್ಮೆ ಬೆಳೆಗಾರರು ತಿಳಿದುಕೊಂಡಿರಬೇಕು. ಕೀಟಗಳ ಹಾವಳಿ ಹಾಗೂ ರೋಗಗಳ ಬಗ್ಗೆ ಸಮಸ್ಯೆ ಇದ್ದರೆ ತಕ್ಷಣವೇ ವಿಜ್ಞಾನಿಗಳನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಬಹುದು ಅಲ್ಲದೇ ತೋಟದ ಫೋಟೊ ತೆಗೆದು ವಾಟ್ಸ್‍ಪ್‍ನ ಮುಖಾಂತರ ಕಳುಹಿಸಿದರೆ, ಯಾವ ಔಷಧಿ ಬಳಸಬೇಕೆಂಬ ಮಾಹಿತಿಯನ್ನು ತಕ್ಷಣವೇ ನೀಡುವ ವ್ಯವಸ್ಥೆ ಇದ್ದು ಇದರ ಪ್ರಯೋಜನ ಪಡೆಯಲು ರೇಷ್ಮೆ ಬೆಳೆಗಾರರಿಗೆÉ ತಿಳಿಸಿದರು.
ರೇಷ್ಮೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್, ಕೋಲಾರದ ಶ್ರೀ. ಟಿ.ಎಂ. ಕಾಳಪ್ಪ ರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿ ಕೋಲಾರದಲ್ಲಿ 19526 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯುತ್ತಿದ್ದು, ಹೆಚ್ಚಿನ ಸಂಖ್ಯೆಯ ರೈತರು ರೇಷ್ಮೆ ಮೇಲೆಯೇ ಅವಲಂಬಿತರಾಗಿದ್ದಾರೆ. ರೇಷ್ಮೆ ಬೆಲೆಯಲ್ಲಿ ಏರುಪೇರು ಇದ್ದೇ ಇರುತ್ತದೆ, ಎದೆಗುಂದದೆ ಗುಣಮಟ್ಟದ ದ್ವಿತಳಿ ರೇಷ್ಮೆಗೂಡಿನ ಉತ್ಪಾದನೆಗೆ ಆಧುನಿಕ ತಾಂತ್ರಿಕತೆಗಳನ್ನು ಬಳಸಿಕೊಂಡು ರೇಷ್ಮೆಯನ್ನು ಬೆಳೆದು ಒಳ್ಳೆಯ ಇಳುವರಿಯನ್ನು ಪಡೆಯಲು ಸೂಚಿಸಿದರು. ಪ್ರಸ್ತುತ ಕೆ.ಸಿ. ವ್ಯಾಲಿಯ ನೀರನ್ನು ಕೆರೆಗಳಿಗೆ ತುಂಬಿಸುತ್ತಿದ್ದು, ಅಂತರ್ ಜಲ ಮಟ್ಟ ಹೆಚ್ಚುತ್ತಿರುವುದರಿಂದ ರೇಷ್ಮೆ ಬೆಳೆಗಾರರು ಹಿಪ್ಪುನೇರಳೆ ವಿಸ್ತೀರ್ಣವನ್ನು ಹೆಚ್ಚಿಸಿಕೊಳ್ಳುವ ಮೂಲಕ ಗೂಡಿನ ಇಳುವರಿಯನ್ನು ವೃದ್ಧಿಗೊಳಿಸಬೇಕೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀ. ಕೆ. ತುಳಸಿರಾಮರವರು ಮಾತನಾಡಿ, ಹಿಪ್ಪುನೇರಳೆಯನ್ನು ಬೆಳೆಯುವಾಗ ರೇಷ್ಮೆ ಬೆಳೆಗಾರರು ಆದಷ್ಟು ಕೀಟನಾಶಕಗಳ, ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಬೇಕು ಹಾಗೂ ಸಾವಯವ ಬೆಳೆಯ ಕಡೆಗೆ ಹೆಚ್ಚಿನ ಆದ್ಯತೆ ಕೊಡುವುದರ ಜೊತೆಗೆ ಆರೋಗ್ಯಕರ ಭೂಮಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ರೇಷ್ಮೆ ಬೆಳೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕೆ ವಿಜ್ಞಾನಿಗಳನ್ನು ಭೇಟಿ ಮಾಡಲು ಸಲಹೆ ನೀಡಿದರು.
ಸದರಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರ, ಮಡಿವಾಳದ ವಿಜ್ಞಾನಿಗಳಾದ ಡಾ. ಜೆ. ಬಿ. ನರೇಂದ್ರಕುಮಾರ್‍ರವರು ಹಿಪ್ಪುನೇರಳೆಯಲ್ಲಿ ಪ್ರಮುಖ ಪೀಡೆಗಳ ನಿರ್ವಹಣೆ ಬಗ್ಗೆ ವಿವರಿಸುತ್ತ, ಪ್ರಸ್ತುತ ಹಿಪ್ಪುನೇರಳೆ ತೋಟಗಳಲ್ಲಿ ಥ್ರಿಪ್ಸ್ ಹಾಗೂ ಮೈಟ್ಸ್ ನುಸಿಗಳ ಹಾವಳಿ ಹೆಚ್ಚಾಗಿದ್ದು ಶೇ. 40-50 ರಷ್ಟು ಸೊಪ್ಪಿನ ಇಳುವರಿ ಕುಂಠಿತಗೊಂಡಿದೆ. ಈ ಕೀಟಗಳು ಕಡಿಮೆ ಅವಧಿಯಲ್ಲಿ ಜೀವನ ಚಕ್ರ ಮುಗಿಸುವದರ ಜೊತೆಗೆ ತಾಪಮಾನ ಹೆಚ್ಚಾಗಿರುವ ತಿಂಗಳಲ್ಲಿ ಹೆಚ್ಚು ಹಾನಿ ಮಾಡುವುದರಿಂದ ಹಿಪ್ಪುನೇರಳೆ ಬೆಳೆಯ ಎಲ್ಲ ಹಂತಗಳಲ್ಲೂ ಕಂಡು ಬರುತ್ತಿದೆ. ಇದರ ಹತೋಟಿಗೆ ತೋಟ ಕಟಾವಾದ 7 ದಿನಗಳೊಳಗೆ ಡೈಮಿಥೊಯೆಟ್ 30 ಇ.ಸಿ 3 ಎಂ.ಎಲ್ ಪ್ರತಿ ಲೀಟರ್ ನೀರಿಗೆ 150 ಲೀ. ದ್ರಾವಣ ಸಿದ್ದಪಡಿಸಿ 1 ಎಕರೆಗೆ ಸಿಂಪಡಿಸುವುದು. ನಂತರ 10 ದಿನಗಳ ಅಂತರದಲ್ಲಿ ಕ್ಲೋರೊಪೆನ್‍ಪೈರ್ 10 ಎಸ್.ಸಿ. @ 1.5 ಎಂ.ಎಲ್/ಲೀ ಅಥವಾ ಮ್ಯಾಜಿಸ್ಟರ್ 1.5 ಎಂ.ಎಲ್/ಲೀಟರ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಕುಡಿ ಹುಳು ಹಾಗೂ ರಸ ಹೀರುವ ಕೀಟಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಬಹುದು ಎಂದು ತಿಳಿಸಿದರು.
ನಂತರ ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯ, ರೇಷ್ಮೆ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ರಾಮಕೃಷ್ಣ ನಾಯ್ಕರವರು ರೇಷ್ಮೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಗ್ಗೆ ತಿಳಿಸುತ್ತ, ರೇಷ್ಮೆ ಹುಳು ಸಾಕುಮನೆಯ ವಾಸ್ತು ಹಾಗೂ ಅಳತೆಯನ್ನು ನಿರ್ಧರಿಸಿ ನಿರ್ಮಾಣ ಮಾಡುವುದು, ಗಾಳಿ ಸಂಚಾರಕ್ಕೆ ವೆಂಟಿಲೇಟರ್‍ಗಳ ಬಳಕೆ, ಹುಳು ಸಾಕುಮನೆಯ ಸೊಂಕು ನಿವಾರಣೆ, ಸೂಕ್ತ ಸೊಂಕು ನಿವಾರಕಗಳ ಬಳಕೆ, ಚಾಕಿ ಹಾಗೂ ಪ್ರೌಢ ಹುಳುವಿನ ನಿರ್ವಹಣೆ ಹಾಗೂ ರೇಷ್ಮೆ ಹುಳುವಿನ ರೋಗ ನಿರ್ವಹಣೆ ಬಗ್ಗೆ ಸವಿವರವಾಗಿ ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನದ ವಿಜ್ಞಾನಿಗಳಾದ ಡಾ. ಅನಿಲಕುಮಾರ್ ಎಸ್ ರವರು ದ್ವಿತಳಿ ರೇಷ್ಮೆಕೃಷಿಯ ತಾಂತ್ರಿಕತೆಗಳ ಬಗ್ಗೆ ತಿಳಿಸುತ್ತ ಮಣ್ಣಿನ ಫಲವತ್ತತೆ ನಿರ್ವಹಣೆಗಾಗಿ ಪ್ರತಿಯೊಬ್ಬ ರೇಷ್ಮೆ ಬೆಳೆಗಾರರು 2 ವರ್ಷಕ್ಕೋಮ್ಮೆ ಕಡ್ಡಾಯವಾಗಿ ಮಣ್ಣು ಪರೀಕ್ಷೆಯನ್ನು ಮಾಡಿಸಿ ಶಿಫಾರಿತ ಪ್ರಮಾಣದ ರಸಗೊಬ್ಬರ ಮತ್ತು ಸಾವಯವ ಗೊಬ್ಬರ ಬಳಸಬೇಕೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ರೇಷ್ಮೆಕೃಷಿ ವಿಜ್ಞಾನಿಗಳಾದ ಡಾ. ಕೆ. ಆರ್. ಶಶಿಧರ್ ರವರು ಕಾರ್ಯಕ್ರಮದ ಸ್ವಾಗತವನ್ನು ಕೋರಿದರು. ರೇಷ್ಮೆ ವಿಸ್ತರಣಾಧಿಕಾರಿಗಳಾದ ಶ್ರೀ. ಜಯಶಂಕರ್‍ರವರು ವಂದನಾರ್ಪಣೆಯನ್ನು ಸಲ್ಲಿಸಿದರು.
ಸದರಿ ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆ ಕೋಲಾರದ ಎಲ್ಲ ಸಿಬ್ಬಂದಿಗಳು ಹಾಗೂ ಸುಮಾರು 70 ರೇಷ್ಮೆ ಬೆಳೆಗಾರರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಡರು.