ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಜುಲೈ 1 ರಂದು ನಡೆಯುವ ಪತ್ರಿಕಾ ದಿನಾಚರಣೆ ಹಿನ್ನಲೆಯಲ್ಲಿ ಕೋಲಾರ ಜಿಲ್ಲೆಯ ಪತ್ರಕರ್ತರು ಮತ್ತು ಅವರ ಕುಟುಂಬದವರಿಗೆ ವಿವಿಧ
ಸ್ಪರ್ಧೆಗಳನ್ನು 26-6-2022 ರಂದು ಭಾನುವಾರ ಕೋಲಾರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಸಲಾಗುವುದು.
ಪತ್ರಕರ್ತರಿಗಾಗಿ ಕ್ರಿಕೇಟ್, ಕಬಡ್ಡಿ ಪಂದ್ಯಗಳು ನಡೆಯಲಿವೆ. ಪತ್ರಕರ್ತರ ಕುಟುಂಬದವರಿಗಾಗಿ ಮ್ಯೂಸಿಕಲ್ ಚೇರ್ ಸ್ಪರ್ಧೆ ನಡೆಯಲಿದೆ.
ಪತ್ರಕರ್ತರ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಬಂಧ ಸ್ಪರ್ಧೆಯು 5 ರಿಂದ 7ನೇ ತರಗತಿ, 8 ರಿಂದ 10ನೇ ತರಗತಿ ಹಾಗೂ ಪಿ.ಯು.ಸಿ ಮೇಲ್ಪಟ್ಟ ವಿದ್ಯಾರ್ಥಿಗಳ ಹಂತದಲ್ಲಿ ನಡೆಸಲಾಗುವುದು.
ಪ್ರಬಂಧ ಸ್ಪರ್ಧೆಯ ವಿಷಯಗಳು:
1) 5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ “ನಾನು ಪ್ರೀತಿಸುವ ವ್ಯಕ್ತಿ” ಗರಿಷ್ಟ ಎರಡು ಪುಟಗಳಿಗೆ ಅವಕಾಶ.
2) 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ “ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು-ಪರಿಹಾರ
3) ಪಿ.ಯು.ಸಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ “ನನ್ನ ಕಲ್ಪನೆಯಲ್ಲಿ ನಾನು ಬಯಸುವ ಭವಿಷ್ಯದ ಸಮಾಜ”
ಈ ಎಲ್ಲಾ ಸ್ಪರ್ದೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಜೂನ್ 24ರೊಳಗೆ ಸಂಘದ ಖಜಾಂಚಿಎ.ಜಿ.ಸುರೇಶ್ಕುಮಾರ್ ದೂರವಾಣಿ ಸಂಖ್ಯೆ 9480234347 ಅಥವಾ ಬಿ.ಎಸ್.ಗಂಗಾಧರ್ 9110930279 ಅವರನ್ನು ಸಂಪರ್ಕಿಸಿ ನೊಂದಾಯಿಸಕೊಳ್ಳಬಹುದು.
ಜುಲೈ 1 ರಂದು ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ಪ್ರತಿ ವರ್ಷ ಪತ್ರಕರ್ತರಿಗೆ ನೀಡುವ 9 ಪ್ರಶಸ್ತಿಗಳ ಪೈಕಿ 4 ಪ್ರಶಸ್ತಿಗಳನ್ನು ಅತ್ಯುತ್ತಮ
ಲೇಖನ ಬರೆದಿರುವ ಪತ್ರಕರ್ತರಿಗೆ ನೀಡಲು ಸಂಘವು ನಿರ್ಧರಿಸಿದೆ. ಜನವರಿ 1, 2022 ರಿಂದ ಜೂನ್ 25, 2022ರ ಅವಧಿಯಲ್ಲಿ
ಬೈಲೈನ್ ಸಮೇತ ಪ್ರಕಟವಾದ ತಮ್ಮ ವಿಶೇಷ ಲೇಖನಗಳ ತುಣುಕುಗಳನ್ನು ಜೂನ್ 25ರೊಳಗೆ ಪತ್ರಕರ್ತರ ಭವನದ ಗಂಗಾಧರ್ ಅವರಿಗೆ ನೀಡುವ ಮೂಲಕ ಪ್ರಶಸ್ತಿಗೆ ನೊಂದಾಯಿಸಿಕೊಳ್ಳಲು ಸರ್ವ ಸದಸ್ಯರಿಗೂ ಅವಕಾಶ ಕಲ್ಪಿಸಿದೆ.