ಕುಂದಾಪುರದಲ್ಲಿ ಅಗಲಿದ ವಿಶ್ವಾಸಿಗಳ ನೆನಪಿನ ದಿನದ ಆಚರಣೆ


ಕುಂದಾಪುರ, ನ.2: ಕುಂದಾಪುರ ರೋಸರಿ ಮಾತಾ ಚರ್ಚಿನಲ್ಲಿ ಅಗಲಿದ ವಿಶ್ವಾಸಿಗಳ ನೆನಪಿನ ದಿನವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಈ ಆಚರಣೆಯು ವಿಶ್ವಾದಾದ್ಯಂತ ಕಥೊಲಿಕ್ ಕ್ರೆಸ್ತರು ಆಚರಿಸುತ್ತಾರೆ. ಮೊದಲಿಗೆ ಹೋಲಿ ರೋಸರಿ ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ಪ್ರಧಾನ ಧರ್ಮಗುರು |ವಂ| ಸ್ಟ್ಯಾನಿ ತಾವ್ರೊ ಬಲಿದಾನದ ಪ್ರಧಾನ ಯಾಜಕರಾಗಿದ್ದು “ನಮ್ಮನ್ನು ಅಗಲಿ ಹೋದ ವಿಶ್ವಾಸಿಗಳಿಗೆ ನಮ್ಮ ಪ್ರಾರ್ಥನೇಯ ಅಗತ್ಯವಿದೆ, ನಾವು ದೇವರಲ್ಲಿ ಪ್ರಾಥಿಸಿದರೆ ಅವರಿಗೆ ಸದ್ಗತಿ ದೊರಕಬಲ್ಲದು, ನಾವು ನಮ್ಮ ಕುಟುಂಬದ ಆತ್ಮಗಳಿಗಾಗಿ ಮತ್ತು ಅನಾಥ ಆತ್ಮಗಳಿಗಾಗಿಯೂ ಪ್ರಾರ್ಥನೆ ಸಲ್ಲಿಸಬೇಕು, ಪ್ರಭು ಯೇಸು ಸ್ವಾಮಿಗೆ ನಮ್ಮಲ್ಲಿ ಯಾರನ್ನೂ ಕಳೆದುಕೊಳ್ಳಲು ಮನಸಿಲ್ಲ, ನಾವು ಜೀವಿತದಲ್ಲಿ ಸದ್ಗತಿ ಪಡೆಯಲು ಉತ್ತಮ ಜೀವನ ನಡೆಸಬೇಕು” ಎಂದು ತಿಳಿಸಿದರು.
ನಂತರ ಮ್ರತಪಟ್ಟ ಸಮಾಧಿ ಭೂಮಿಗೆ ತೆರಳಿ ಅಗಲಿದವರ ಸದ್ಗತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಮತ್ತು ಸಮಾಧಿ ಮಾಡಲ್ಪಟ ಗೋರಿಗಳನ್ನು ಪವಿತ್ರ ಜಲದಲ್ಲಿ ಪವಿತ್ರಿಕರಿಸಲಾಯಿತು. ಈ ಪ್ರಾರ್ಥನ ವಿಧಿಯಲ್ಲಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಸಹಕರಿಸಿದರು.

ಅಗಲಿದ ವಿಶ್ವಾಸಿಗಳ ನೆನಪಿನ ದಿನದ ಆಚರಣೆಯ ಹಿಂದಿನ ಸಂಜೆ, ಕುಂದಾಪುರ ಹೋಲಿ ರೋಸರಿ ಚರ್ಚಿನ ಸಮಾಧಿ ಭೂಮಿಯಲ್ಲಿ, ತಮ್ಮ ಕುಟುಂಬದ ಅಗಲಿದ ಸದಸ್ಯರ ಗೋರಿಗಳನ್ನು ಮುಂಬತ್ತಿ ಮತ್ತು ಹೂವುಗಳಿಂದ ಅಲಕ್ರಂತಗೊಂಡ ದ್ರಶ್ಯವಿದು.