

ಕುಂದಾಪುರ, ಅ.4: ಸ್ಥಳೀಯ ಪವಿತ್ರ ರೋಜರಿ ಮಾತಾ ಇಗರ್ಜಿಯಲ್ಲಿ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಸೆಕ್ಯೂಲರ ಮೇಳದ ಧರ್ಮಗುರುಗಳ ಪಾಲಕ ಸಂತ ಜೋನ್ ಬ್ಯಾಪ್ಟಿಸ್ಟ್ ಮಾರೀ ವಿಯಾನ್ನಿ ಇವರು ಇಹ ಲೋಕ ತ್ಯಜಿಸಿದ ದಿನ ಅಗೋಸ್ತ್ 4 ರಂದು ಅವರ ನೆನಪಿಗಾಗಿ ಧರ್ಮಗುರುಗಳ ಸ್ಮರಣೆಯನ್ನು ಆಚರಿಸಿ ಇಗರ್ಜಿಯ ಧರ್ಮಗುರುಗಳಿಗೆ ಅಭಿನಂದಿಸಲಾಯಿತು.
ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಪವಿತ್ರ ಬಲಿದಾನವನ್ನು ಅರ್ಪಿಸಿ “ನಮಗಾಗಿ ನಿಮ್ಮ ಪ್ರಾರ್ಥನೆಗಳು ಅಗತ್ಯವಾಗಿವೆ, ನಾವು ನಮ್ಮ ಗುರು ದಿಕ್ಷೆಯನ್ನು ಸರಿಯಾಗಿ ಮುನ್ನೆಡ್ಸಿಕೊಂಡು ಹೋಗಲು, ನಮಗೆ ಪ್ರಾರ್ಥನೆ ಅಗತ್ಯವಿದೆಯೆಂದು” ತಿಳಿಸಿದರು. ಸಹಾಯಕ ಧರ್ಮಗುರು ವಂ| ಅಶ್ದಿನ್ ಆರಾನ್ಹಾ ಸಹ ಬಲಿದಾನವನ್ನು ಅರ್ಪಿಸಿದರು.
ನಿವ್ರತ್ತ ಅಧ್ಯಾಪಕ ಲುವಿಸ್ ಜೆ.ಫೆರ್ನಾಂಡಿಸ್ ಧರ್ಮಗುರುಗಳಿಗೆ ಶುಭ ಕೋರಿದರು. ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥರಾದ ಸಿಸ್ಟರ್ ಸಂಗೀತ, ಇನ್ನಿತರ ಧರ್ಮ ಭಗಿನಿಯರು, ಪಾಲನ ಮಂಡಳಿ ಆಶಾ ಕರ್ವಲ್ಲೊ,18 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಧರ್ಮ ಭಗಿನಿಯರು ಹಾಗೂ ಭಕ್ತಾಧಿಗಳು ಕಾರ್ಯಕ್ರಮಕ್ಕೆ ಹಾಜರಿದ್ದು ಧರ್ಮಗುರುಗಳನ್ನು ಅಭಿನಂದಿಸಿದರು.






