JANANUDI.COM NETWORK

ಮೈಸೂರು: ಮಕ್ಕಳು ಕ್ರಿಕೆಟ್ ಆಡುವಾಗ ಒಮ್ಮೇಲೆ ತೆಂಗಿನ ಮರ ಉರುಳಿದ್ದು, ಅದು 6 ವರ್ಷದ ಬಾಲಕನ ಮೈಮೇಲೆ ಬಿದ್ದು ಬಾಲಕ ಮೃತಪಟ್ಟಿರುವ ದುಖಕರ ಘಟನೆ ಮೈಸೂರು ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಪಟ್ಟ ಬಾಲಕ 6 ವರ್ಷದ ಅಭಯ್ ಎಂದು ತಿಳಿದು ಬಂದಿದೆ. ಅಭಯ್ ತೋಟದಲ್ಲಿ ಕ್ರಿಕೆಟ್ ಆಡುವಾಗ ಧಿಡೀರ್ ನೆ ತೆಂಗಿನ ಮರವೊಂದು ಬುಡ ಸಮೇತ ಉರುಳಿ ಬಿದ್ದು ಅನಿರೀಕ್ಷಿತ ದುರ್ಘಟನೆ ನಡೆಯಿತು. ಈ ಘಟನೆಯಲ್ಲಿ ಅಭಯ್ ಜತೆಗಿದ್ದ ಬಾಲಕಿಗೆ ಗಾಯವಾಗಿದ್ದು ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಳಿಗೆರೆ ಪೊಲೀಸ್ ಠಾಣಾದ ಪೊಲೀಸರು ಪ್ರಕರಣವನ್ನು ದಾಖಲಾಗಸಿಕೊಂಡಿದ್ದಾರೆ.