ಮಕ್ಕಳ ಅಭಿವೃದ್ಧಿಗೆ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳು ಮುಖ್ಯ – ತಿಮ್ಮಸಂದ್ರ ನಾಗರಾಜ್

ಕೋಲಾರ ಜು.30 : ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗೆ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳು ಮುಖ್ಯವೆಂದು ತಿಮ್ಮಸಂದ್ರ ನಾಗರಾಜ್ ಅಭಿಪ್ರಾಯಪಟ್ಟರು.
ಟಮಕ ದೇವರಾಜ್ ಅರಸ್ ಮೆಡಿಕಲ್ ಕಾಲೇಜು ಹಿಂಭಾಗ ಅಂತರರಾಷ್ಟ್ರೀಯ ಕ್ರೀಡಾಪಟು ಮತ್ತು ಅಥ್ಲೆಟಿಕ್ಸ್ ಕೋಚ್ ಆದ ದೊರೆಸ್ವಾಮಿ ಅವರ ಮಾರ್ಗದರ್ಶನದಲ್ಲಿ ಪಿ. ಗೋಪಾಲನ್ ಸ್ಪೋಟ್ರ್ಸ್ ಅಕಾಡೆಮಿ, ಇಂಡಿಯನ್ ಸ್ಪೋಟ್ರ್ಸ್ ಮತ್ತು ಮಾರ್ಷಲ್ ಆಟ್ರ್ಸ್ ಅಕಾಡೆಮಿಯ ಕಾರ್ಯದರ್ಶಿಗಳಾದ ಶಿವಕುಮಾರ್ ರವರ ಸಾರಥ್ಯದಲ್ಲಿ ಪ್ರತಿ ಭಾನುವಾರ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳಾದ ಟೇಬಲ್ ಟೆನಿಸ್, ಸ್ಕೇಟಿಂಗ್, ಕರಾಟೆ, ಬಾಕ್ಸಿಂಗ್, ಬ್ಯಾಸ್ಕೆಟ್ಬಾಲ್, ಕ್ರಿಕೆಟ್, ಕೇರಂ, ಯೋಗ ಇತ್ಯಾದಿ ಕ್ರೀಡೆಗಳನ್ನು ತರಬೇತುದಾರರಿಂದ ತರಬೇತಿ ನೀಡುತ್ತ ಬಂದಿದ್ದಾರೆ. ಈ ತರಬೇತಿ ಕೇಂದ್ರದಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳಾಗಿ ತಯಾರು ಮಾಡಲಿ ಎಂದರು.
ಅಕಾಡೆಮಿಯ ಕಾರ್ಯದರ್ಶಿಗಳಾದ ಶಿವಕುಮಾರ್ ಮಾತನಾಡುತ್ತಾ ಮಕ್ಕಳ ದೈಹಿಕವಾಗಿ ಮಾನಸಿಕವಾಗಿ ಮತ್ತು ಬೌದ್ಧಿಕವಾಗಿರಲು ಕ್ರೀಡಾ ಚಟುವಟಿಕೆಗಳು ಅಗತ್ಯವಾಗಿ ಬೇಕಾಗಿದೆ. ಶಾಲೆಯಲ್ಲಿ ಮಕ್ಕಳು ಪಠ್ಯ ಚಟುವಟಿಕೆಗಳೊಂದಿಗೆ ಮುಂದೆ ಬಂದರೆ ಸಾಲದು, ಉತ್ತಮ ಆರೋಗ್ಯವಂತರಾಗಲು ವ್ಯಾಯಾಮ ಯೋಗ ಮತ್ತು ಕ್ರೀಡಾ ಚಟುವಟಿಕೆಗಳು ಮುಖ್ಯ ಆದುದರಿಂದ ಆಸಕ್ತ ಮಕ್ಕಳಿಗೆ ನಮ್ಮ ಸ್ಪೋಟ್ರ್ಸ್ ಅಕಾಡೆಮಿಯಿಂದ ತರಬೇತಿಯನ್ನು ನೀಡಲಾಗುತ್ತಿದೆ ನಿಮ್ಮ ಹೆಚ್ಚು ಹೆಚ್ಚು ಆಸಕ್ತಿ ಮಕ್ಕಳು ಬಂದರೆ ಸೇರಿಸಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕೋಚ್‍ಗಳಾದ ಲಿಖಿತ್ ಕುಮಾರ್ ಮತ್ತು ತಿಲಕ್‍ರವರು ತರಬೇತಿ ಪಡೆಯಲು ಬಂದ ಮಕ್ಕಳು ಉಪಸ್ಥಿತರಿದ್ದರು.