ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : ನಗರದ ರೋಟರಿ ಸೆಂಟ್ರಲ್ ವತಿಯಿಂದ ಭಾನುವಾರ ನಗರದ ಎಪಿಎಂಸಿ ಟೊಮೇಟೋ ಮಾರುಕಟ್ಟೆಯಲ್ಲಿ ರೈತರು , ಕೂಲಿ ಕಾರ್ಮಿಕರಿಗೆ ಪೌಷ್ಠಿಕ ಪಾನೀಯವನ್ನು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹಾಗೂ ಕಾರ್ಯದರ್ಶಿ ಎಸ್.ಸುಧಾಕರ್ ವಿತರಿಸಿದರು . ವಿಷ್ಯಾದ ಅತಿ ದೊಡ್ಡ ಎರಡನೇ ಟೊಮೇಟೋ ಮಾರುಕಟ್ಟೆ ಎಂದು ಹೆಸರಾಗಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಲ್ಲಿ ನಿತ್ಯವೂ ನೂರಾರು ಟನ್ ಟೊಮೆಟೋ ಆವಕವಾಗಿ , ಇದನ್ನು ನಿತ್ಯ ಬೆಳಿಗ್ಗೆ ಹರಾಜು ಮಾಡಿಹೊರ ರಾಜ್ಯ ಮತ್ತು ದೇಶಗಳಿಗೆ ಕಳುಹಿಸಲಾಗುತ್ತದೆ , ಇಲ್ಲಿಗೆ ಬರುವ ರೈತರು , ಕೂಲಿಗಳಿಗೆ ನೆರವಾಗುವ ದೃಷ್ಟಿಯಿಂದ ಈ ಕಾರ್ಯ ಮಾಡುತ್ತಿರುವುದಾಗಿ ತಿಳಿಸಿದರು . ಈ ಹೊತ್ತಿನಲ್ಲಿ ಸಾವಿರಾರು ಮಂದಿ ರೈತರು , ಕೃಷಿ ಕೂಲಿ ಕಾರ್ಮಿಕರು , ವ್ಯಾಪಾರಿಗಳು , ದಲ್ಲಾಳರು ಎಪಿಎಂಸಿ ಮಾರುಕಟ್ಟೆಯಲ್ಲಿ ಜಮಾಯಿಸಿದ್ದು , ಪೌಷ್ಠಿಕ ಪಾನೀಯ ವಿತರಿಸುವ ಕಾರ್ಯಕ್ರಮ ಏರ್ಪಡಿಸಿದ್ದರು . ಟೊಮೆಟೋ ಹರಾಜು ಹೆಚ್ಚಾಗಿ ನಡೆಯುವ ಮಂಡಿಗಳ ಮುಂದೆ ಮಾವಿನ ಹಣ್ಣಿನ ಮಿಲ್ಕ್ ಶೇಕ್ ಅನ್ನು ಉಚಿತವಾಗಿ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿಗೆ ವಿತರಿಸಲಾಯಿತು . ರೈತರು , ವರ್ತಕರು , ದಲ್ಲಾಳರು , ಕೃಷಿ ಕೂಲಿ ಕಾರ್ಮಿಕರು ಪೌಷ್ಠಿಕ ಪಾನೀಯವನ್ನು ಸಾಲುಗಟ್ಟಿ ನಿಂತು ಸ್ವೀಕರಿಸಿದರು . ಇದೇ ಸಂದರ್ಭದಲ್ಲಿ ಮಾತನಾಡಿದ ಸಿ.ಎಂ.ಆರ್.ಶ್ರೀನಾಥ್ , ಎಲ್ಲಾ ವರ್ಗದ ಕೂರೂನಾ ಯೋಧರಿಗೆ ರೋಟರಿ ಸೆಂಟ್ರಲ್ನಿಂದ ಈಗಾಗಲೇ ವಿತರಿಸಲಾಗಿದೆ . ಟೊಮೇಟೋ ಮಂಡಿಯಲ್ಲಿ ಸಾವಿರಾರುಮಂದಿ ರೈತರಿಗೂ ಈ ಪೌಷ್ಠಿಕ ಪಾನೀಯ ಸಿಗಲೆಂಬ ಉದ್ದೇಶದಿಂದ ಟೊಮಟೋ ಮಂಡಿಯ ಸಮಸ್ತರಿಗೂ ರೋಟರಿ ಸೆಂಟ್ರಲ್ನಿಂದ ಕಾರ್ಯಕ್ರಮ ಆಯೋಜಿಸಿ ಅನುಷ್ಠಾನಗೊಳಿಸಲಾಗಿದೆಯಂದು ವಿವರಿಸಿದರು .
ಇದೇ ಸಂದರ್ಭದಲ್ಲಿ ರೋಟರಿ ಸೆಂಟ್ರಲ್ ನಿರ್ದೇಶಕ ಪ್ರಕಾಶ್ , ಭಾರತ ಸೇವಾದಳ ಅಧ್ಯಕ್ಷ ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ
ಕೆ.ಎಸ್.ಗಣೇಶ್ , ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮತ್ತು ಸಿಎಂಆರ್ ಟಮೋಟೋ ಮಂಡಿ ಸಿಬ್ಬಂದಿ ಹಾಜರಿದ್ದರು .