ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ : – ಮುಂದಿನ ಸೋಮವಾರ ಪೋಲೀಸ್ , ನಗರಸಭೆ ಅಧಿಕಾರಿಗಳು ಹಾಗೂ ಕಾರು ಚಾಲಕರ ಸಂಘದ ಪದಾಧಿಕಾರಿಗಳ ಸಭೆ ಕರೆದು ನಗರದಲ್ಲಿ ಕಾರು ನಿಲ್ದಾಣ ಜಾಗದ ಸಮಸ್ಯೆಯನ್ನು ಬಗೆಹರಿಸುವುದಾಗಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು . ನಗರದ ಕಾರು ನಿಲ್ದಾಣದಲ್ಲಿ ಸೋಮವಾರ ಜಿಲ್ಲಾ ರೋಟರಿ ಸೆಂಟ್ರಲ್ ಹಾಗೂ ಸಿಎಂಆರ್ . ಫೌಂಡೇಶನ್ ವತಿಯಿಂದ ಖಾಸಗಿ ಕಾರು ಚಾಲಕರಿಗೆ ಹಾಗೂ ಮಾಲೀಕರಿಗೆ ಆಹಾರ ಕೀಟ್‌ಗಳನ್ನು ವಿತರಿಸಿ ಮಾತನಾಡಿದರು . ಕೊರೋನಾದಿಂದ ಇಡೀ ವಿಶ್ವವೇ ತತ್ತರಿಸಿದ್ದು , ಅದರಲ್ಲೂ ಪ್ರವಾಸೋದ್ಯಮ ಕ್ಷೇತ್ರವನ್ನೇ ನಂಬಿ ಕೆಲಸ ಮಾಡುವ ಕಾರು ಚಾಲಕರು ಜೀವನ ಸಾಗಿಸಲು ತುಂಬಾ ಕಷ್ಟವಾಗುತ್ತಾ ಇದ್ದು ಇಂತಹವರಿಗೆ ದಾನಿಗಳು ಸಹಾಯ ಮಾಡುತ್ತಿರುವುದು ಶ್ಲಾಘನೀಯ ಕೆಲಸ ಎಂದರು . ಕೂರೂನಾ ಸಂದರ್ಭದಲ್ಲಿ ಲಾಕ್ ಡೌನ್ ಆಗಿತ್ತು ಕೆಲಸವಿಲ್ಲದೇ ಇಎಂಐ ಕಟ್ಟಲು ಸಾಧ್ಯವಿಲ್ಲವಾಗಿತ್ತು ಕೊರೊನಾ ಕಡಿಮೆಯಾಗುತ್ತಾ ಇದ್ದು ಅತಿಥಿಗಳನ್ನು ಕರೆದುಕೊಂಡು ಹೋಗುವಾಗ ಎಚ್ಚರಿಕೆಯಿಂದ ವರ್ತಿಸಬೇಕು ಎಂದರು . ಜಿಲ್ಲೆಯಲ್ಲಿ ಶೇ .೬೭ ಕೋಡ್ ಅಸಿಕ ಪಡೆದಿದ್ದು ಇನ್ನೂ ಉಳಿಕೆಯವರಿಗೆ ಆದಷ್ಟು ಬೇಗ ಲಸಿಕೆ ನೀಡಲು ಸರಕಾರ ಮತ್ತು ಜಿಲ್ಲಾಡಳಿತ ಮುಂದೆ ಬಂದಿದ್ದು ಲಸಿಕೆ ಪಡೆದರೆ ಅಷ್ಟೇ ಮೂರನೇ ಅಲೆ ಬಂದರೂ ಧೈರ್ಯದಿಂದ ಇರಲು ಸಾಧ್ಯವಾಗುತ್ತದೆ . ಈ ನಿಟ್ಟಿನಲ್ಲಿ ಕಾರು ಚಾಲಕರು ಮತ್ತು ಕುಟುಂಬದವರು ಲಸಿಕೆ ಹಾಕಿಸಿಕೊಳ್ಳಲು ತಮ್ಮ ನಿಲ್ದಾಣದಲ್ಲಿ ಒಂದು ದಿನಕ್ಕೆ ಲಸಿಕಾ ಅಭಿಯಾನ ಮಾಡಲಿದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು .
ನಗರದ ಕಾರು ನಿಲ್ದಾಣದ ಸ್ಥಳದ ಬಗ್ಗೆ ನಗರಸಭೆಯಿಂದ ತೊಂದರೆಗಳನ್ನು ನೀಡುತ್ತಾರೆ ಎಂಬ ಸಾಕಷ್ಟು ದೂರುಗಳು ಇದ್ದು ಮುಂದಿನ ಸೋಮವಾರ ನಗರಸಭೆ ಮತ್ತು ಪೋಲಿಸ್ ಇಲಾಖೆಯೊಂದಿಗೆ ನಿಮ್ಮ ಜೊತೆಯಲ್ಲಿ ಸಭೆ ಮಾಡಿ ಸರ್ವೆ ಮಾಡಿ ಜಾಗವನ್ನು ಗುರುತಿಸಲು ಸೂಚಿಸಲಾಗುತ್ತದೆ ಕೊರೋನಾ ಹೋಗುವರಗೂ ಸರಕಾರದ ಮತ್ತು ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ ಎಂದರು . ರೋಟರಿ ಸೆಂಟ್ರಲ್ ಜಿಲ್ಲಾ ಅಧ್ಯಕ್ಷ ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ , ಕೊರೋನಾದಿಂದ ಎಲ್ಲಾ ಕ್ಷೇತ್ರದಲ್ಲಿ ಆರ್ಥಿಕವಾಗಿ ಮುಗ್ಗಟ್ಟು ಅನುಭವಿಸಬೇಕಾಗಿದೆ ಕಾರು ಚಾಲಕರು ಅದರಲ್ಲಿ ಹೊರತಾಗಿಲ್ಲ ಸುಮಾರು ೪೦ ವರ್ಷದಿಂದ ಪ್ರಾಮಾಣಿಕವಾಗಿ ಅತಿಥಿಗಳನ್ನು ಗೌರವದಿಂದ ಕಾಣುವರಿಗೆ ಸಹಾಯ ಎನ್ನದೇ ಗೌರವದಿಂದ ಕಾಣುವ ಸಣ್ಣ ಕೆಲಸ ಮಾಡುತ್ತಾ ಇದ್ದೇವೆ ಎಂದರು . ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷ ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್ ಗಣೇಶ್ ಮಾತನಾಡಿ , ಕೊರೊನಾ ಬಂದಾಗಿನಿಂದ ಪ್ರತಿಂರೊಬ್ಬ ವ್ಯಕ್ತಿಗೂ ಸಹಾಯ ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸಿದ ಸರಕಾರ ಸಮುದಾಯಗಳನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಾ ಇದೆ ಅದು ಸಾಲದೇ ಸಿಎಂಆರ್ ಫೌಂಡೇಶನ್ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಷ್ಟದಲ್ಲಿ ಇದ್ದವರಿಗೆ ಸಹಾಲರು ಮಾಡುತ್ತಾ ಇದ್ದಾರೆ ಎಂದರು . ಇದೇ ಸಂದರ್ಭದಲ್ಲಿ ಖಾಸಗಿ ಕಾರು ಚಾಲಕ ಸಂಘದ ಅಧ್ಯಕ್ಷ ರಮೇಶ್ ನಿಲ್ದಾಣದಲ್ಲಿನ ಸಮಸ್ಯೆಗಳ ಬಗ್ಗೆ ಜಿಲ್ಲಾಕಾರಿ ಗಮನಕ್ಕೆ ತಂದರು . ಈ ಸಂದರ್ಭದಲ್ಲಿ ರೋಟರಿ ಸಂಟಲ್ ಜಿಲ್ಲಾ ಕಾಂರ್ಗದರ್ಶಿ ಎಸ್ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು . ರೋಟರಿ ಸೆಂಟಲ್ ನಿರ್ದೇಶಕ ಸೋಮಶೇಖರ್ ಮುಂತಾದವರು ಇವರು