ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ-15, ಕೋಲಾರಮ್ಮನ ಕೆರೆಯಲ್ಲಿನ ನಿರುಪಯುಕ್ತ ಗಿಡಗಳನ್ನು ತೆರವುಗೊಳಿಸಿ ಶಿಥಿಲಗೊಂಡಿರುವ ಕೆರೆ ಕಟ್ಟೆಯನ್ನು ಅಭಿವೃದ್ದಿ ಪಡಿಸಬೇಕೆಂದು ರೈತ ಸಂಘದಿಂದ ಕೆರೆ ಕಟ್ಟೆ ಮುಂಭಾಗ ಹೋರಾಟ ಮಾಡಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪಕ್ಕಾಗಿ ಊರೆಲ್ಲ ಸುತ್ತಿದರೆಂಬ ಗಾದೆಯಂತೆ ದೇವರ ಕೃಪೆಯಿಂದ ವರುಣನ ಆರ್ಭಟಕ್ಕೆ ತುಂಬಿ ತುಳುಕುತ್ತಿರುವ ಕೋಲಾರಮ್ಮನ ಕೆರೆಯನ್ನು ನಿರುಪಯುಕ್ತ ಗಿಡಗಳಿಂದ ಮುಕ್ತಿಗೊಳಿಸಲು ಜನ ಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ವಿಫಲವಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪ ಮಾಡಿದರು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರವರು ನಗರದ ಹೃದಯ ಭಾಗದಲ್ಲಿರುವ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳ ನಿವಾಸಗಳ ಕೂಗಳತೆ ದೂರದಲ್ಲಿರುವ ಕೋಲಾರಮ್ಮನ ಕೆರೆ ತುಂಬಿ ಜನರ ಸಂತೋಷಕ್ಕೆ ಕಾರಣವಾಗಿರುವ ಕೆರೆ ಸ್ವರೂಪವನ್ನು ಹಾಳು ಮಾಡುತ್ತಿರುವ ಮತ್ತು ಕೆರೆಯ ನೀರನ್ನು ಕಲುಶಿತಗೊಳಿಸುತ್ತಿರುವ ಲಬ್ಬರ್‍ಗಿಡ ಪಿಶಾಚಿಕಮಲ ಮತ್ತು ಮತ್ತಿತರ ಗಿಡಗಳಿಂದ ಕೆರೆ ಸಂರಕ್ಷಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅನುದಾನದ ಕೊರತೆ ನೆಪದಲ್ಲಿ ಕೆರೆಯನ್ನು ಹಾಳು ಮಾಡುತ್ತಿದ್ದಾರೆಂದು ಅಧಿಕಾರಿಗಳ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ಮಳೆ ಇಲ್ಲದೆ ಬರಗಾಲ ಇದ್ದಾಗ ಮೋಡ ಬಿತ್ತನೆಗೆ ನೂರಾರು ಕೋಟಿ ಖರ್ಚು ಮಾ ಡುವ ಜಿಲ್ಲಾಡಳಿತ ಮತ್ತು ಜನ ಪ್ರತಿನಿಧಿಗಳಿಗೆ ಯಾವುದೇ ಹಣ ಖರ್ಚು ಮಾಡದೆ ತುಂಬಿರುವ ಕೆರೆ ನೀರನ್ನು ಸಂರಕ್ಷಣೆ ಮಾಡಲು ಶಿಥಿಲಗೊಂಡಿರುವ ಕೆರೆ ಕಟ್ಟನ್ನು ಅಭಿವೃದ್ದಿ ಪಡಿಸಲು ಇಚ್ಚಾಸಕ್ತಿ ಕೊರತೆ ಇದೆ ಎಂದು ಅಸಮದಾನ ವ್ಯಕ್ತಪಡಿಸಿದರು.
ಕೆರೆ ಕೋಡಿ ಹರಿಯದ ಮೊದಲು ಸಂಸದರು ಹಾಗೂ ಜನ ಪ್ರತಿನಿಧಿಗಳು ಕೋಲಾರಮ್ಮ ಕೆರೆಯನ್ನು ಸಿಂಗಪುರ್ ಕೆರೆಯನ್ನಾಗಿ ಮಾಡುತ್ತೇವೆ ಜನರಿಗೆ ಉಚಿತವಾಗಿ ತಾಜ್‍ಮಹಲ್‍ನ್ನು ತೋರಿಸುತ್ತೇವೆಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಾರ್ಯಕ್ರಮ ಪತ್ರಿಕಾ ಮತ್ತು ಮಾದ್ಯಮಕ್ಕೆ ಸೀಮತವಾಗಿದೆ. ಕೆರೆಯ ಅಂದವನ್ನು ಕೆಡಿಸಿರುವ ನಿರುಪಯುಕ್ತ ಸಸ್ಯಗಳಿಂದ ಮುಕ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅನುದಾನದ ಕೊರತೆ ಸುತ್ತಮುತ್ತಲ ಜನರಿಗೆ ಕೆರೆ ನೀರು ಕಲುಶಿತಗೊಳ್ಳುತ್ತಿದೆ ಎಂದು ಆತಂಕದಲ್ಲಿ ಜನ ಸಾಮಾನ್ಯರಿದ್ದಾರೆ.
ಜಿಲ್ಲಾಡಳಿತ ಜನ ಪ್ರತಿನಿಧಿಗಳು ಕೂಡಲೆ ಕೋಲಾರಮ್ಮನ ಕೆರೆಯ ಅಂದನ್ನು ಕೆಡಿಸುವ ಜೊತೆಗೆ ನೀರನ್ನು ಉಪಯೋಗಿಸದ ರೀತಿ ಬೆಳೆದು ನಿಂತಿರುವ ನಿರುಪಯುಕ್ತ ಗಿಡಗಳಿಂದ ಮುಕ್ತಿಗೊಳಿಸಿ ಜಾನುವಾರುಗಳಿಗೆ ಮತ್ತು ಕುಡಿಯಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯ ಮಾಡಿದರು. ಇಲ್ಲವಾದರೆ ಮುಂದಿನ ಸೋಮವಾರ ರಾತ್ರಿ 12 ಗಂಟಗೆ ಬುಡ್ಡಿ ದೀಪಗಳೊಂದಿಗೆ ಕೆರೆ ಸ್ವಚ್ಚತೆಗೆ ರೈತ ಸಂಘದಿಂದ ಮುಂದಾಗಿ ಹೋರಾಟದ ಮಾಡುವ ಎಚ್ಚರಿಕೆಯನ್ನು ನೀಡುತ್ತಿದ್ದೇವೆ
ಮನವಿ ಸ್ವೀಕರಿಸಿ ಮಾತನಾಡಿದ ಸಣ್ಣ ನೀರಾವರಿ ಇಲಾಖೆ ಹರಿಕೃಷ್ಣ ರವರು ಮತ್ತು ಕೆ.ಸಿ ವ್ಯಾಲಿ ಯೋಜನೆಯ ಅಧಿಕಾರಿಗಳು ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ವಿಲಿಯ್ಸಂ ರವರು ಕೋಲಾರಮ್ಮ ಕೆರೆಯಲ್ಲಿ ಬೆಳೆದಿರುವ ನಿರುಪಯುಕ್ತ ಗಿಡಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ಕೆರೆ ಸ್ವಚ್ಚತೆ ಮಾಡುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ, ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಮಂಗಸಂದ್ರ ನಾಗೇಶ್, ನಳಿನಿ.ವಿ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮಾಲೂರು ತಾಲ್ಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ, ಶ್ರೀನಿವಾಸಪುರ ತಾ.ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಹಸಿರು ಸೇನೆ ಜಿಲ್ಲಾದ್ಯಕ್ಷ ಕಿರಣ್, ಶಿವಾರೆಡ್ಡಿ, ಮಂಗಸಂದ್ರ ತಿಮ್ಮಣ್ಣ, ಮಾಸ್ತಿ ಹರೀಶ್, ಆಂಜಿನಪ್ಪ, ಹಸಿರು ಸೇನೆ ತಾ.ಅಧ್ಯಕ್ಷ ಶಿವನಾರಹಳ್ಳಿ ವೇಣು, ಮಾಲೂರು ಕುಡಿಯೂನೂರು ದೇವರಾಜ್, ಪಾರಂಡಹಳ್ಳಿ ಮಂಜುನಾಥ್, ನಾಗಭೂಷಣ, ಸುರೇಶ್‍ಬಾಬು , ವೇಣು ಗೋಪಾಲ, ಮನೋಹರ್, ಸಂದೀಪ್, ಮುನಿರಾಜು, ನವೀನ್, ಕೇಶವ, ಹೆಬ್ಬಣಿ ಆನಂದರೆಡ್ಡಿ , ಚಂದ್ರಪ್ಪ, ಮುಂತಾದವರಿದ್ದರು