ಶ್ರೀನಿವಾಸಪುರ,ಜ.2-ಮಾವಿನ ತೋಟಗಳಲ್ಲಿ ಹಳಸಿದ ಕಾಯಿಗಳು ಕ್ಲೀನಿಂಗ್ ಮಾಡಿ ತೋಟಗಳು ಸುರಕ್ಷತವಾಗಿ ಇಟ್ಟುಕೊಂಡರೆ ಬರುವ ಹೂವು ಕಾಯಿಗೆ ಕೀಟ ಬಾದೆ ಕಡಿಮೆಯಾಗುತ್ತದೆ. ತೋಟದಲ್ಲಿ ಉದುರಿರುವ ಕಾಯಿಗಳನ್ನು ತೆಗೆದು ಹಾಕಿ ತೋಟಗಳು ನಿರ್ವಹಣೆ ಮಾಡಿ ಅಗತ್ಯ ಪ್ರಮನದಲ್ಲಿ ಮಾತ್ರ ಕ್ರೀಮಿನಾಶಕ ಸಿಂಪಡಿಸಿದರೆ ಉತ್ತಮವಾಗಿ ಪಸಲು ಸಿಗುತ್ತದೆ ಎಂದು ಸಂಶೋದಕಿ ಡಾ.ಅಶ್ವಥನಾರಾಯಣರೆಡ್ಡಿ ಸಲಹೆ ಮಾಡಿದರು.
ಇಲ್ಲಿನ ಮಾರುತಿ ಸಭಾ ಭವನದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಮತ್ತು ಮಾವು ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಮಾವು ಬೆಳೆಗಾರ ಸಂಯುಕ್ತ ಹೋರಾಟ ಸಮಿತಿಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಭಾರತಿಯ ತೋಟಗಾರಿಕೆ ಸಂಯೋದನ ಸಂಸ್ಥೆ ಹೆಸರುಘಟ್ಟ ಹಾಗೂ ಕೃಷಿ ವಿಜ್ಞಾನ ಕೇಂಧ್ರ ಕೋಲಾರ ಅವರ ನುರಿತ ವಿಜ್ಞಾನಿಗಳಿಂದ ರೈತರಿಗೆ ಮಾವು ಬೆಳೆಯುವ ವಿಚಾರ ಸಂಕೀರಣ ಕಾರ್ಯಾಗಾರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾವಿನ ತೋಟಗಳಿಗೆ ಕೆಲವು ಕ್ರಿಮಿನಾಶಕ ಔಷದಿಗಳು ಹೆಚ್ಚಿನ ಪರಮಾಣದಲ್ಲಿ ಸಿಂಪಡಿಸುವುದರಿಂದ ದರೆ ಪ್ರಯೋಜನವಿಲ್ಲ. ಸಸಿಗಳಿಗೆ ಸಕಾಲಕ್ಕೆ ಸರಿಯಾಗಿ ನೀರು ಗೊಬ್ಬರ ಕೊಟ್ಟರೆ ರೋಗ ಬರುವುದು ಕಡಿಮೆ. ರಸಗೊಬ್ಬರ ಮತ್ತು ಕೊಟ್ಟಿಗೆ ಗೊಬ್ಬರ ಸಮರ್ಪಕವಾಗಿ ನೀಡಿದ್ದರೆ ಉತ್ತಮವಾಗಿ ಪಸಲು ಬರುತ್ತದೆ. ಪರಿಸರದಲ್ಲಿ ವಿವಿದ 496 ಕೀಟಾನುಗಳಿರುವುದು ನಮ್ಮಲ್ಲಿ ದಾಖಲೆ ಇದೆ. ಅವುಗಳಲ್ಲಿ ಕೆಲವು ಮಾತ್ರ ಪಸಲನ್ನು ನಷ್ಟ ಮಾಡುತ್ತವೆ. ಜಿಗುಟುಳ ಮೊಗ್ಗಿ ಎಳೆ ಕಾಯಿ ರಸ ಹೀರುತ್ತವೆ. ಇವು ಮರಕ್ಕೆ ಬಿದ್ದರೆ ಮರ ಸಹ ಒಣಗಿ ಹೋಗುತ್ತದೆ ಎನ್ನುವುದು ರೈತರು ಮರೆಯಬಾರದು. ಎಳೆಗಳ ಮೇಲೆ ಬೀಳುವ ಹುಳುಗಳು ಹೂವು ಎಳೆ ತಿನ್ನದೆ ರಸ ಹೀರಿಕೊಂಡು ಎಳೆಯನ್ನು ನಾಶ ಮಾಡಿ ಮರವೆ ಒಣಗಿಹೋಗುತ್ತ್ತದೆ. ಎಳೆಗಳಿಗೆ ಸೂರ್ಯನ ಶಕ್ತಿ ಹಿರಿಕೊಳ್ಳುವ ಶಕ್ತಿ ಇಲ್ಲದೆ ಸಸಿಗಳು ನಾಶವಾಗುತ್ತವೆ. ಕಾಲಕಾಲಕ್ಕೆ ಕೃಷಿ ಅಥವಾ ತೋಟಗಾರಿಕೆ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ತೋಟಗಳನ್ನು ರಕ್ಷಿಸಿಕೊಳ್ಳಬೇಕೆಂದು ತಿಳಿಸಿದರು.
ಭೂ ವಿಜ್ಞಾನಿ ಡಾ.ರೂಪಾ ಮಾತನಾಡಿ ಭೂಮಿಗೆ ಕಾರ್ಭನ್ಡೈ ಆಕ್ಸೈಡ್ ಸೇರಿ ಪೋಟ್ಯಾಷಿಯಂ ಕಡಿಮೆಯಾಗದಂತೆ ತೋಟಗಳಿಗೆ ಪೋಟಾಷಿಯಂ ಪೋಷಕಾಂಶ ಮಿಶ್ರಣ ಮಾಡಿ ಸಿಂಪಡಿಸಿ ತೋಟಗಳು ಹಳದಿಯಾಗುವುದು ಅಥವಾ ಎಳೆ ಮುದುಡುವುದು ಇರುವುದಿಲ್ಲ. ಭೂಮಿಗೆ ಅಗತ್ಯವಾದ ಪ್ರಮಾಣದಲ್ಲಿ ಮಾತ್ರ ಗೋಬ್ಬರ ಹಾಕಬೇಕು. ಆಗ ಸಮರ್ಪಕವಾದ ರೀತಿಯಲ್ಲಿ ಪಸಲಿ ದೊರೆಯುತ್ತದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನಿ ಡಾ.ಅನಿಲ್ ಕುಮಾರ್ ಪ್ರತಿಕ್ರಿಯಿಸಿ ಶ್ರೀನಿವಾಸಪುರ ಮುಳಬಾಗಿಲು ತಾಲ್ಲೂಕಲ್ಲಿ ಉತ್ತಕೃಷ್ಟವಾಗಿ ಮಾವು ಬೆಳೆಯಲಾಗುತ್ತಿದೆ. ತೋಟಗಳಿಗೆ ನೀರು ಹೆಚ್ಚು ಹುಣ್ಣಿಸಿದರೆ ತಂಪಿನಿಂದ ಹೂವು ಬರುವುದು ತಡವಾಗುತ್ತದೆ. ಜನವರಿ 28ರೊಳಗೆ ಹೂವು ಬರುತ್ತದೆ. ಆದರೆ ಒಂದು ಬಾರಿ 2.5 ಎಂಎಲ್ ಪ್ರಮಾನದಲ್ಲಿ ಮಾತ್ರ ಕ್ರಿಮಿನಾಶಕ ಸಿಂಪಡಿಸಿ. ರಂಜಕದಲ್ಲಿ ವ್ಯತ್ಯಾಸವಾದರೆ ಒಂದೇ ಸಲ ಹೂವು ಬಿಡುವುದಿಲ್ಲ. ಸರಿಯಾದ ಪ್ರಮಾಣದಲ್ಲಿ ಔಷದಿಗಳು ಸ್ಪ್ರೆ ಮಾಡಿದ್ದೆ ಆದಲ್ಲಿ ಗುಣಾತ್ಮಕವಾಗಿ ಮಾವು ಪಸಲು ಬರುತ್ತದೆ. ಈ ಬಗ್ಗೆ ಬೇಕಿದ್ದರೆ ಕಾಲ ಪಕ್ವದಲ್ಲಿ ನಮಗೆ ಕರೆ ಮಾಡಿ ನಿಮಗೆ ಅಗತ್ಯ ಸಲಹೆ ಸೂಚನೆಗಳು ಕೊಡುತ್ತೇವೆಂದು ತಿಳಿಸಿದರು. ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ್, ಜಿಲ್ಲಾ ಮಾವು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪರೆಡ್ಡಿ, ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್, ತೋಟಗಾರಿಕೆ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್, ರೈತರ ಸಂಘದ ಅಧ್ಯಕ್ಷ ಶ್ರೀರಾಮರೆಡ್ಡಿ, ಎನ್.ಈರಪ್ಪರೆಡ್ಡಿ ಹಾಜರಿದ್ದರು.
ಸನ್ಮಾನ: ಡಾ.ರಂಗರಾವ್, ತೋಟಗಾರಿಕೆ ಇಲಾಖೆ ಅಧಿಖಾರಿ ಬೈರಾರೆಡ್ಡಿ ಸೇರಿದಂತೆ ಎಲ್ಲಾ ವಿಜ್ಞಾನಿಗಳನ್ನು ಸನ್ಮಾನಿಸಲಾಯಿತು.