ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜು, ಕುಂದಾಪುರ ಪುರಸಭೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು, ಸೇವಾ ಸಂಸ್ಥೆಗಳ ಸಹಕಾರದಿಂದ ಈ ವರ್ಷ ಮಹಾತ್ಮ ಗಾಂಧಿಯವರ ಜನ್ಮದಿನಾಚರಣೆ ದಿನ ಅಕ್ಟೋಬರ್ 2 ರಂದು, ಅರ್ಥಪೂರ್ಣ ಸಮಾಜಮುಖಿ ಕಾರ್ಯಕ್ರಮ“ಸ್ವಚ್ಛಕುಂದಾಪುರ-ನಮ್ಮಕುಂದಾಪುರ”ಅಭಿಯಾನ ನಡೆಸಲು ನಿರ್ಧರಿಸಿದೆ. ಕಾಲೇಜಿನವಿದ್ಯಾರ್ಥಿಗಳು, ಬೋಧಕಮತ್ತುಬೋಧಕೇತರವರ್ಗದವರು ಬೃಹತ್“ಸ್ವಚ್ಛಕುಂದಾಪುರ-ನಮ್ಮಕುಂದಾಪುರ” ಎಂಬ ಜನಜಾಗೃತಿ ಕಾರ್ಯಕ್ರಮವನ್ನು ಸ್ಥಳೀಯ ಕುಂದಾಪುರದ 23 ವಾರ್ಡ್‍ಗಳಲ್ಲಿ ಹಮ್ಮಿಕೊಂಡಿದ್ದಾರೆ. ಜನರಲ್ಲಿ ಸ್ವಚ್ಛತೆಕುರಿತುಅರಿವು ಮೂಡಿಸುವಜನಜಾಗೃತಿಕಾರ್ಯಕ್ರಮಇದಾಗಿದ್ದು, ಕುಂದಾಪುರ ಪುರಸಭಾ ವ್ಯಾಪ್ತಿಯ ಸುಮಾರು 15000 ಕ್ಕೂ ಮಿಕ್ಕಿ ಮನೆಗಳ ಸಂಪರ್ಕ ಮಾಡುವುದು ಮತ್ತುಅವರಲ್ಲಿ ಮತ್ತುಜನರಲ್ಲಿ ಪರಿಸರದ ಸ್ವಚ್ಛತೆಯಕುರಿತುಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯಉದ್ದೇಶವಾಗಿದೆ.
ಈ ಜಾಗೃತಿಅಭಿಯಾನದ ಮುಖ್ಯಉದ್ದೇಶಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿಉತ್ತಮಆರೋಗ್ಯಕ್ಕಾಗಿ ಹಸಿ ಮತ್ತು ಒಣ ತ್ಯಾಜ್ಯಗಳ ವಿಲೇವಾರಿ, ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಪರಿಸರ ಮತ್ತು ಜಲಸಂರಕ್ಷಣೆಯಾಗಿದೆ.
ಸುಸ್ಥಿರ ಬದುಕಿಗೆ ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಅತ್ಯಗತ್ಯವಾಗಿರುವಉತ್ತಮ ಪರಿಸರವನ್ನು ಉಳಿಸುವ ಕುರಿತುಜನಜಾಗೃತಿ ಹಾಗೂ ಪರಿಸರ ಮಾಲಿನ್ಯವನ್ನುತಡೆಯುವುದರಕುರಿತು ವಿದ್ಯಾರ್ಥಿಗಳು ವಿವರಿಸಲಿದ್ದಾರೆ.
ಕುಂದಾಪುರದ ಸಹಾಯಕಆಯುಕ್ತರು, ಪುರಸಭಾ ಮುಖ್ಯಾಧಿಕಾರಿಗಳು, ಹಿರಿಯ ಅಧಿಕಾರಿಗಳು ಹಾಗೂ ಎಲ್ಲಾ ಪುರಸಭಾ ಸದಸ್ಯರು ಈ “ಸ್ವಚ್ಛಕುಂದಾಪುರ-ನಮ್ಮಕುಂದಾಪುರ”ಅಭಿಯಾನಕ್ಕೆಉತ್ತಮಬೆಂಬಲನೀಡುವಭರವಸೆನೀಡಿದ್ದಾರೆ.
ಈಗಾಗಲೇ ಕುಂದಾಪುರ ಪುರಸಭೆ ಪುರ ಸ್ವಚ್ಛತೆಕುರಿತುಉತ್ತಮವಾದ ಸೇವೆ ಸಲ್ಲಿಸುತ್ತಿದ್ದು, ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿದೆ. ಈ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದರೊಂದಿಗೆ ಮುಂದಿನ ಪೀಳಿಗೆಗೂ ಪರಿಸರ ಸ್ವಚ್ಛತೆಕುರಿತುಅರಿವು ಮೂಡಿಸುವುದು ಹಾಗೂ ಕುಂದಾಪುರವನ್ನು ಮಾದರಿ ನಗರವಾಗಿ ಬೆಳೆಸುವುದು ಭಂಡಾರ್‍ಕಾರ್ಸ್‍ಕಾಲೇಜಿನ ಈ ಅಭಿಯಾನದಉದ್ದೇಶವಾಗಿದೆ.
60 ಸಂವತ್ಸರವನ್ನು ಪೂರೈಸಿ 61ನೇ ವರ್ಷದಲ್ಲಿ ಮುನ್ನಡೆಯುತ್ತಿರುವಕುಂದಾಪುರದ ಭಂಡಾರ್‍ಕಾರ್ಸ್‍ಕಾಲೇಜು ಸುಮಾರು 3000 ವಿದ್ಯಾರ್ಥಿಗಳಿಗೆ ಈ ಜಾಗೃತಿ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೂ ಅನುವು ಮಾಡಿಕೊಡುತ್ತಿದೆ. ಕಾಲೇಜು ಈ ಹಿಂದೆಯೂಇಂತಹ ಸಮಾಜಮುಖಿಕಾರ್ಯಕ್ರಮವನ್ನು ಮಾಡಿಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಅಲ್ಲದೇಇಂತಹಕಾರ್ಯಕ್ರಮವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ.
ಈ ಅಭಿಯಾನದಲ್ಲಿಎಲ್ಲಾ ಪುರಸಭೆಯ ನಾಗರಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಭಂಡಾರ್‍ಕಾರ್ಸ್‍ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ವಿನಂತಿಸಿದ್ದಾರೆ.