

ಶ್ರೀನಿವಾಸಪುರ ಶಾಲಾ ಕಾಂಪೌಂಡ್ ನರೇಗಾ ಯೋಜನೆ ಅಡಿಯಲ್ಲಿ ಅಂದಾಜು 5ಲಕ್ಷ ಮೌಲ್ಯದಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ , ಶಾಲಾ ಜಾಗವನ್ನು ಒತ್ತುವರಿ ಆರೋಪ ಸರ್ವೇ ನಂತರ ಕಾಮಗಾರಿ ಮಾಡಲು ಜೆಡಿಎಸ್ ಕಾರ್ಯಕರ್ತರ ಪಟ್ಟು. ಹಿಡಿದಿದ್ದರು. ಆದರೆ ಕಾಂಗ್ರೆಸ್ ಕಾರ್ಯಕರ್ತರು ಸರ್ವೇ ಮಾಡಿಸದೇ ಕಾಮಗಾರಿ ಮಾಡಲು ಮುಂದಾಗಿದ್ದಾರೆಂದು ಆರೋಪ ಮಾಡಿದ್ದಾರೆ.
ಶ್ರೀನಿವಾಸಪುರ ತಾಲೂಕಿನ ಪಾಪಿಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಾಂಪೌಂಡ್ ನಿರ್ಮಾಣ ವಿಚಾರವಾಗಿ ಸೋಮವಾರ ಸಂಜೆ ಕಾಂಗ್ರೆಸ್ , ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ಕಾಮಗಾರಿ ನಿರ್ಮಾಣ ವಿಚಾರವಾಗಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಬಡಿದಾಟ ನಡೆದು ಕಾಂಗ್ರೆಸ್ ಕಾರ್ಯಕರ್ತರಾದ ನಾಗರಾಜ, ರಾಮಪ್ಪ, ಶ್ರೀನಿವಾಸ್ ಹಾಗು ಜೆಡಿಎಸ್ ಕಾರ್ಯಕರ್ತರಾದ ವಿನೋಧ್, ವೆಂಕಟರಾಮರೆಡ್ಡಿ, ರವಣಪ್ಪ ಗಾಯಗಳಾಗಿ ಶ್ರೀನಿವಾಸಪುರ ಹಾಗೂ ಗೌನಿಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು , ಗೌನಿಪಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವಿನೋಧ್ ಎಂಬುವವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ಕಳುಹಿಸಲಾಯಿತು.
ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಘಟನೆಯ ವಿವರಗಳನ್ನು ಪಡೆದು ಎರಡು ಪಕ್ಷದವರಿಂದ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
