ಉಡುಪಿ ಜಿಲ್ಲೆಯ ಗುಮ್ಮ ಹೊಲ ಬೆಳೆಯ ಸಂತ ಜೋಸೆಫ್ ಅಗ್ರಿಕಲ್ಹರಲ್ ಕಾಲನಿಯ ಜನರ ಖಂಡನಾ ಸಭೆಗೆ ಉಡುಪಿ ಧರ್ಮಪ್ರಾಂತ್ಯದ ಸ್ಪಷ್ಟೀಕರಣ

JANANUDI.COM NETWORK

ಉಡುಪಿ : 25-10-2021 ರಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಬಗ್ಗೆ ಉಡುಪಿ ಧರ್ಮಪ್ರಾಂತದ ವತಿಯಿಂದ ಸ್ಪಷ್ಟೀಕರಣ ನೀಡಿದೆ
2021 ಅಕ್ತೋಬರ್ 24 ರಂದು ಉಡುಪಿ ಜಿಲ್ಲೆಯ ಬೆಳ್ವೆ ಗುಮ್ಮ ಹೊಲದ ಸ0ತ ಜೋಸೆಫ್ ಅಗ್ರಿಕಲ್ಚರ್ ಕಾಲನಿಯ ಜನರು ಚರ್ಚಿನ ಧರ್ಮಗುರುಗಳ ಎರುದ್ಧ ಅನೇಕ ಆರೋಪಗಳನ್ನುಮಾಡಿ, ಅವರನ್ನು ತಕ್ಷಣ ಅಲ್ಲಿಂದ ವರ್ಗಾವಣೆ ಮಾಡಬೇಕೆಂಬ ಬೇಡಿಕೆಯಿಟ್ಟು ಮಾಡಿದ ಪ್ರತಿಭಟನೆಯ ವರದಿಗಳು ಅಕ್ತೋಬರ್ 25 ರಂದು ವಿವಿಧ ಮಾಧ್ಯಮಗಳು ವರದಿಮಾಡಿವೆ. ಇವುಗಳಲ್ಲಿ ಸತ್ಯಕ್ಕೆ ದೂರವಾದ ಅನೇಕ ವಿಷಯಗಳಿದ್ದು, ಅವುಗಳ ಹಿ0ದಿನ ಸತ್ಯವನ್ನು ಜನರ ಮುಂದಿರಿಸಲು ಉಡುಪಿ ಧರ್ಮಪ್ರಾಂತ ಬಯಸುತ್ತಿದೆ.
1) ಅಕ್ತೋಬರ್ 24 ಭಾನುವಾರ ಚಚ್ರ್ನಲ್ಲಿ ಎಂದಿನಂತೆ ಬೆಳಗ್ಗಿನ ಪೂಜೆ ಸುಸೂತ್ರವಾಗಿ ನಡೆದು ಕ್ರೈಸ್ತ ಭಕ್ತಾದಿಗಳು ಅದರಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ, ಗೇಟ್ಗೆ ಬೀಗ ಜಡಿದು ಭಕ್ತಾದಿಗಳಿಗೆ ಚರ್ಚನ್ನು ಪ್ರವೇಶಿಸದಂತೆ ತಡೆಯಲಾಯಿತು ಎ0ಬ ವರದಿ ಸತ್ಯಕ್ಕೆ ದೂರವಾದುದು. ಮಾಧ್ಯಮಗಳಲ್ಲಿ ಪ್ರಕಟಗೊಂಡ ಗೇಟಿನ ಚಿತ್ರ ಪೂಜೆಯ ನ0ತರ ತೆಗೆದ ಚಿತ್ರ.
2) 2021 ಜುಲೈ ತಿ0ಗಳಲ್ಲಿ ಬೆಳ್ವೆ ಕಾಲನಿಯ ಹೊಸ ನಿರ್ದೇಶಕರಾಗಿ ನೇಮಕಗೊ0ಡ ಧರ್ಮಗುರುಗಳು ಇಕ್ಕಟ್ಟಾಗಿದ್ದ ತಮ್ಮ ಶೌಚಾಲಯ ಮತ್ತು ಕಚೇರಿಯನ್ನು ವಿಸ್ತರಿಸಲು ಧರ್ಮಪ್ರಾಂತದ ಬಿಷಪರಲ್ಲಿ ಲಿಖಿತ ಅನುಮತಿ ಪಡೆದು, ಒಂದು ಗೋಡೆಯನ್ನು ಕೆಡವಿಸಿ, ಆ ಜಾಗದಲ್ಲಿ ಹೊಸ ಗೋಡೆಯನ್ನು ಕಟ್ಟಿಸಲು ಆರಂಭಿಸಿದ್ದರು. ಯಾವ ರೀತಿಯಲ್ಲೂ ಚರ್ಚ್ ಕಟ್ಟಡ ಅಥವ ಇತರ ಭಾಗಗಳಿಗೆ ಹಾನಿಯನ್ನು ಉ0ಟು ಮಾಡಿಲ್ಲ. ಚರ್ಚ್ ಕಟ್ಟಡಕ್ಕೆ ಹಾನಿಯುಂಟು ಮಾಡಲಾಗಿದೆ ಎಂಬ ವರದಿ ಸುಳ್ಳು.
3)ಅಕ್ತೋಬರ್ 05 ರಂದು ಬೆಳ್ಚೆಯ ಪ್ರತಿನಿಧಿಗಳು ಹಾಗೂ ಧರ್ಮಪ್ರಾಂತದ ಆಡಳಿತ ಮಂಡಳಿಯು ಉಡುಪಿ ಬಿಷಪರ ನಿವಾಸದಲ್ಲಿ ಜೊತೆಯಾಗಿ ನಡೆಸಿದ ಸಭೆಯಲ್ಲಿ ಎಲ್ಲಾ ವಿಷಯಗಳನ್ನು ಚರ್ಚಿಸಲಾಯಿತು. ಧರ್ಮಗುರುಗಳ ವರ್ಗಾವಣೆಯೊಂದನ್ನು ಬಿಟ್ಟು ಮಿಕ್ಕೆಲ್ಲಾ ಬೇಡಿಕೆಗಳನ್ನು ಕೈಬಿಟ್ಟರುವುದಾಗಿ ಒಪ್ಪಿ ಕೊ0ಡಿರುವುದಾಗಿ ಬೆಳ್ವೆಯ ಪ್ರತಿನಿಧಿಗಳು ಲಿಖಿತವಾಗಿ ಮಾತು ಕೊಟ್ಟಿದ್ದರು.
4)ಗುಮ್ಮಹೊಲಬೆಳೆಯಸಂತಜೋಸೆಫ್ ಅಗ್ರಿಕಲ್ಚರಲ್ ಕಾಲನಿಯ ಬೇಡಿಕೆಗೆ ಸಂಬಂಧ ಪಟ್ಟಂತೆ, ಯಾವುದೇ ಚರ್ಚಿಗೆ/ ಸಂಸ್ಥೆಗೆ/ಕಾಲನಿಗೆ ಗುರುಗಳನ್ನು/ ನಿರ್ದೇಶಕರನ್ನು ನೇಮಿಸುವ ಅಥವಾ ವರ್ಗಾಯಿಸುವ ಪರಮಾಧಿಕಾರ ಧರ್ಮಪ್ರಾಂತ ದಮುಖ್ಯಸ್ಥರಾದ ಬಿಷಪರದು. ಕಥೋಲಿಕ ಧರ್ಮಸಭೆಯ ಹಾಗೂ ಧರ್ಮಪ್ರಾಂತದ ನೇಮ ನಿಯಮಗಳ ಪ್ರಕಾರ ಅದು ನಡೆಯುತ್ತದೆ. ಬೆಳ್ಜೆಯ ಕ್ರೈಸ್ತರು ಈ ಬಗ್ಗೆ ತಿಳಿದಿದ್ದೂ, ಅವುಗಳಿಗೆ ಗಮನವೀಯದೆ. ಕ್ರೈಸ್ತ ಸಮುದಾಯಕ್ಕೆ ಸಂಬಂಧ ಪಡದ ಜನರಿಗೆ ತಪ್ಪು ಮಾಹಿತಿಯನ್ನು ನೀಡಿ ಗುಂಪುಗೂಡಿಸಿ ಪ್ರತಿಭಟಿಸಿದ್ದು, ಕ್ರೈಸ್ತಧರ್ಮವನ್ನು ತ್ಯಜಿಸುತ್ತೇವೆ’ ಎ0ಬ ಬೆದರಿಕೆ ಒಡ್ಡಿದ್ದು ನಿಜಕ್ಕೂ ವಿμÁದನೀಯ.
5) ಗುಮ್ಮ ಹೊಲ ಬೆಳ್ಜೆಯ ಕ್ರೈಸ್ತ ವಿಶ್ವಾಸಿಗಳು ಚರ್ಚಿಗೆ ಪ್ರವೇಶಿಸಲು, ಪ್ರಾರ್ಥನೆ-ಪೂಜೆಗಳಲ್ಲಿ ಭಾಗವಹಿಸಲು ಯಾರೂ ಯಾವತ್ತೂ ಅಡ್ಡಿ ಮಾಡಿದ್ದಿಲ್ಲ. ಪ್ರಸ್ತುತ ಧರ್ಮಗುರುಗಳು ಏನಾದರೂ ಸೂಚನೆಗಳನ್ನು ನೀಡಿರುವುದಾದರೆ, ಅವು ಚರ್ಚಿನ ಶಿಸ್ತುಪಾಲನೆಯ ಭಾಗವಾಗಿವೆ.
ಬೆಳ್ವೆ ಸಂತ ಜೋಸೆಫರ ಅಗ್ರಿಕಲ್ಚರಲ್ ಕಾಲನಿಯ ಕ್ರೈಸ್ತ ಭಕ್ತಾದಿಗಳು ಒಳಗಿನ ಮತ್ತು ಹೊರಗಿನ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವಕ್ಕೆ ಹಾಗೂ ಸುಳ್ಳು ಮಾಹಿತಿಗಳಿಗೆ ಬಲಿಯಾಗದೆ, ಹಿ0ದಿನ0ಂತೆ ತಮ್ಮ ದೈನಂದಿನ ಕ್ರೈಸ್ತ ವಿಶ್ವಾಸಿ ಜೀವನವನ್ನು ನಡೆಸಬೇಕಾಗಿ ಧರ್ಮಪ್ರಾಂತ ದ ಆಡಳಿತ ಮಂಡಳಿಯ ವಿನಂತಿಸಿಕೊಂಡಿದೆಯೆಂದು, ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ: ಚೇತನ್ ಲೋಬೊ ಉಡುಪಿ ಧರ್ಮಪ್ರಾಂತ್ಯದ ಪರವಾಗಿ ಮಾಧ್ಯಕ್ಕೆ ಲಿಖಿತವಾಗಿ ತಿಳಿಸಿದ್ದಾರೆ.