ಕುಂದಾಪುರ; ಫೆ.27: ತಮಿಳು ನಾಡಿನ ವೆಲಂಕಣಿಯಲ್ಲಿರುವ ಚರ್ಚ್ಗೆ ತೆರಳಲು. ಕರಾವಳಿ ಭಾಗದವರಿಗೆ ಅನುಕೂಲವಾಗುವಂತೆ ಮಡಗಾಂವ್- ವೆಲಂಕಣಿ. ನಡುವೆ. ಹೊಸ ರೈಲು ಆರಂಭಿಸುವಂತೆ ಕುಂದಾಪುರ ಹಾಗೂಕರಾವಳಿ ಭಾಗದ ನಾಗರೀಕರಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆಯವರಿಗೆ ಶನಿವಾರ’ ಮನವಿ ಸಲ್ಪಿಸಲಾಯತು, ಮಡಗಾಂವ್ – “ವೆಲಂಕಣಿ ಹೊಸ ರೈಲಿನಿಂದ ಗೋಕರ್ಣ, ಮುರ್ಡೇಶ್ವರ, ಕುಂದಾಪುರ, ಕೊಲ್ಲೂರು, ಆನೆಗುಡ್ಡ ಉಡುಪಿ ಭಾಗದವರಿಗೆ ತೆರಳಲು ಅನುಕೂಲವಾಗಲಿದೆ. ಈ ಪ್ರದೇಶ ಗಳಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಲೇತ್ರಗಳು ಹಾಗೂ ಪ್ರವಾಸೋದ್ಯಮ . ಸ್ಥಳಗಳಿಗೆ ತೆರಳಲು ಸಹ ಪ್ರಯೋಜನವಾಗಲಿದೆ. ಈ ರೈಲು ಕರ್ನಾಟಕ, ಗೋವಾ, ತಮಿಳು ನಾಡು ಹಾಗೂ ಕೇರಳ ಈ ನಾಲ್ಕುರಾಜ್ಯಗಳ ನಡುವೆ ಸಂಪರ್ಕವನ್ನು ಬೆಸೆಯಲಿದೆ. ಪ್ರವಾಸೋದ್ಯಮಕ್ಕೂ ಉತ್ತೇಜಿಸಿ ದಂತಾಗಲಿದೆ ಎನ್ನುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಜಯಪ್ರಕಾಶ್ ಹೆಗ್ಡೆಯವರು ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು, ಹೊಸ ರೈಲು ಬೇಡಿಕೆ ಬಗ್ಗೆ ಅಹವಾಲು ಸಲ್ಲಿಸಲಾಗುವುದು ಎಂದವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅಬ್ದುಲ್ ಅಜೀಜ್, ಹೆರಾಲ್ಡ್ ವಿಲ್ಲನ್ಡಿ’ಸೋಜಾ, ಹ್ಯಾರಿ ಡಿಮೆಲ್ಲೋ, ಅವಿನ್ ಬರೆಟ್ಟೋ, ಸಂತೋಷ್ ಕರ್ವಾಲೋ, ಪ್ರೀತಮ್ ಡಿ’ಸೋಜಾ, ಹರ್ಷಿತಾ ಡಿ’ಸೋಜಾ ಮತ್ತಿತರರು ಉಪಸ್ಥಿತರಿದ್ದರು.