ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಪೌರ ಕಾರ್ಮಿಕರು ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ಸಭೆಯಲ್ಲಿ ಮಾತನಾಡಿ, ಪೌರ ಕಾರ್ಮಿಕರು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ರೂ.1420 ಕೊಟ್ಟು ವಿಮೆ ಮಾಡಿಸಿದಲ್ಲಿ, ಆಕಸ್ಮಿಕ ಮರಣ ಹೊಂದಿದಲ್ಲಿ, ಮರಣ ಹೊಂದಿದ ಪೌರ ಕಾರ್ಮಿಕನ ಕಟುಂಬಕ್ಕೆ ರೂ.20 ಲಕ್ಷ ಪರಿಹಾರ ನೀಡಲಾಗುವುದು. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಕಾರ್ಯನಿರ್ವಹಿಸುವಾಗ ಕೈಗವಸು ಹಾಗೂ ಮಾಸ್ಕ್ ಧರಿಸಬೇಕು ಎಂದು ಹೇಳಿದರು.
ಪುರಸಭಾಧ್ಯಕ್ಷೆ ಲಲಿತಾ ಶ್ರೀನಿವಾಸ್, ಸಿಎಒ ರಾಜೇಶ್ವರಿ, ಪರಿಸರ ಅಭಿಯಂತರ ಡಿ.ಶೇಖರರೆಡ್ಡಿ, ಆರೋಗ್ಯ ನಿರೀಕ್ಷಕ ಪೃಥ್ವಿರಾಜ್, ನಾಗೇಶ್, ರಾಮಲಕ್ಷ್ಮಮ್ಮ, ಸುರೇಶ್ ಸಂತೊಷ್, ಚೆಂದು, ಶ್ರೀನಿವಾಸ್ ಇದ್ದರು.