ಕೋಲಾರ,ಜೂ.01: ಕರ್ನಾಟಕದ ಕೋಲಾರ ಜಿಲ್ಲೆಯು ಫ್ಲೋರೈಡ್ ಪೀಡಿತ ಪ್ರದೇಶವಾಗಿದೆ. ಈ ಪ್ರದೇಶದ ಜನಸಂಖ್ಯೆಯು ಮುಖ್ಯವಾಗಿ ಕುಡಿಯುವ, ಅಡುಗೆ ಮತ್ತು ಇತರ ಅವಶ್ಯಕತೆಗಳಿಗೆ ಹಾಗೂ ಉಪಯುಕ್ತತೆಗಳಿಗಾಗಿ ಅಂತರ್ಜಲವನ್ನು ಅವಲಂಬಿಸಿರುತ್ತಾರೆ. ಕುಡಿಯುವ ನೀರಿನಲ್ಲಿ ಫೆÇ್ಲೀರೈಡ್ ಮಟ್ಟವು 1.5 ಪಿಪಿಎಂಗೂ ಅಧಿಕವಾಗಿ ಮೀರಿ ಇತ್ತೀಚಿನ ವರದಿಗಳ ಪ್ರಕಾರ ಜಿಲ್ಲೆಯ ಅಂತರ್ಜಲದಲ್ಲಿ ಸರಾಸರಿ 3.06 ಪಿಪಿಎಂದಾಖಲಾಗಿದೆ ಹಾಗೂ ,ಇದು ಕುಡಿಯಲು ಯೋಗ್ಯವಲ್ಲ ಎಂದು ಪರಿಗಣಿಸಲಾಗಿದೆ. ಕರ್ನಾಟಕದಲ್ಲಿ ಅತಿಹೆಚ್ಚು ಫೆÇ್ಲೀರೋಸಿಸ್ಪ್ರಕರಣಗಳು ದಾಖಲಾಗಿದ್ದು ಕೋಲಾರ ಜಿಲ್ಲೆಯು 2ನೇ ಸ್ಥಾನದಲ್ಲಿದೆ. ಹೆಚ್ಚಿನ ಫ್ಲೋರೈಡ್ ಸೇವನೆಯು ದೀರ್ಘಕಾಲದ ಮೂಳೆಯ, ಕರುಳಿನ ಮತ್ತು ಮೂತ್ರಪಿಂಡದ ಮೇಲೆ ಪ್ರಭಾವ ಬೀರುತ್ತದೆ.
ಮನುಷ್ಯನ ಜೀರ್ಣಾಂಗವು ವಿವಿಧ ಕಾರಣಗಳಿಂದ ಒತ್ತಡಕ್ಕೆ ಅಣಿಯಾಗುತ್ತದೆ ಅದರಲ್ಲಿ ಫ್ಲೋರೋಸಿಸ್ ವ್ಯತ್ಯಯವು ಮುಂಚೂಣಿಯಲ್ಲಿರುತ್ತದೆ. ಫೆÇ್ಲೀರೈಡ್ ಅಣುವು ಸ್ವಲ್ಪ ಕಹಿಯಾದ ಲವಣವಾಗಿದ್ದು, ನೀರು ಮತ್ತು ಆಹಾರದೊಂದಿಗೆ ಸಣ್ಣ ಪ್ರಮಾಣದಲ್ಲಿ ಬೆರೆತು ಕರುಳನ್ನು ಸೇರುತ್ತದೆ. ಅತಿಯಾದ ಫ್ಲೋರೈಡ್ ಸೇವನೆಯು ದೀರ್ಘಕಾಲದವರೆಗೆ ಮುಂದುವರಿದರೆ, ಅದು ನಮ್ಮ ದೇಹದ ಜೀಣಾರ್ಂಗ ವ್ಯವಸ್ಥೆಯ ಹಾಗೂ ಪಚನ ಕ್ರಿಯೆಯ ಮೇಲೆ ಪರಿಣಾಮ ಬೀರಿ ಕರುಳಿನ ಸೋಂಕಿಗೆ ಕಾರಣವಾಗುತ್ತದೆ.
ಕುಡಿಯುವ ನೀರಿನಲ್ಲಿ ಫ್ಲೋರೈಡ್ ಪ್ರಾಥಮಿಕವಾಗಿ ಯಾವುದೇ ಅಣುವಿನ ಜೊತೆ ಹೊಂದಾಣಿಕೆಯಾಗದು. ಯಾವುದೇ ಹೊಂದಾಣಿಕೆಯಾಗದೆ ಜಠರ ಸೇರಿದ ಫ್ಲೋರೈಡ್, ಹೈಡ್ರೋಜನ್ ಅಣುಗಳೊಂದಿಗೆ ಸೇರಿ ಹೈಡ್ರೋಜನ್ಫ್ಲೋರೈಡ್ (ಊಈ) ಆಗಿ ರೂಪುಗೊಳ್ಳುತ್ತದೆ. ಊಈ ಗ್ಯಾಸ್ಟ್ರಿಕ್ ಎಪಿಥೀಲಿಯಂ ಅನ್ನು ಸೇರಿ ಹಾನಿಯನ್ನು ಉಂಟು ಮಾಡುತ್ತದೆ ಮತ್ತು ಹೈಡ್ರೋಜನ್ ಅಯಾನುಗಳನ್ನು ಬಿಡುಗಡೆ ಮಾಡಲು ವಿಯೋಜಿಸುತ್ತದೆ. ಈ ಹಾನಿಯು ಕರುಳಿನ ಸೋಂಕಿಗೆ ಮತ್ತಷ್ಟು ಕಾರಣವಾಗುತ್ತದೆ. ಈ ಸೋಂಕಿನ ಲಕ್ಷಣಗಳೆಂದರೆ ಹೊಟ್ಟೆನೋವು, ವಾಕರಿಕೆ ಮತ್ತು ವಾಂತಿ. ಈ ರೋಗಲಕ್ಷಣಗಳನ್ನು ಪತ್ತೆ ಹಚ್ಚದಿದ್ದರೆ ಮತ್ತು ಫೆÇ್ಲೀರೈಡ್ ನೀರನ್ನು ಸೇವಿಸುವುದನ್ನು ಮುಂದುವರೆಸಿದರೆ, ಹೆಚ್ಚುವರಿ ಫ್ಲೋರೈಡ್, ಹಲ್ಲುಗಳು, ಕೀಲುಗಳು ಮತ್ತು ಸ್ನಾಯುಗಳ ಮೇಲೆ ಸಂಗ್ರಹವಾಗುತ್ತದೆ, ಇದು ಕ್ರಮವಾಗಿ ಹಲ್ಲುಗಳಲ್ಲಿ (ಡೆಂಟಲ್ಫ್ಲೋರೋಸಿಸ್), ಮೂಳೆಗಳು (ಸ್ಕೆಲಿಟಲ್ ಫ್ಲೋರೋಸಿಸ್) ವಿರೂಪಗಳನ್ನು ಉಂಟುಮಾಡುತ್ತದೆ. ಇದರ ದುಷ್ಪರಿಣಾಮಗಳು ಇತರ ಅಂಗಾಂಗಗಳ ಮೇಲೆಯು ಸಹ ಪ್ರಭಾವ ಬೀರುತ್ತದೆ ಇದನ್ನು ಮೂಳೆಯೇತರ ಫ್ಲೋರೋಸಿಸ್ ಎಂದು ಪರಿಗಣಿಸಲಾಗುತ್ತದೆ.
ದೀರ್ಘಕಾಲದ ಫ್ಲೋರೈಡ್ ಸೇವನೆಯ ಮೇಲೆ ನಡೆಸಿದ ಅಧ್ಯಯನಗಳು, ಮೇಲ್ಭಾಗದ ಜಠರ ಗರುಳಿನ ಪ್ರದೇಶದ ವಿಷಕಾರಿ ಪರಿಣಾಮಗಳನ್ನು ದೃಢೀಕರಿಸದೆ. ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಗ್ಯಾಸ್ಟ್ರಿಕ್ಫ್ಲೋರೈಂಟ್ರ ಮತ್ತು ಸಣ್ಣಕರುಳಿನ ಮೇಲಿನ ದುಷ್ಪರಿಣಾಮಗಳ ಉಲ್ಲೇಖವಾಗಿರುತ್ತದೆ.ಪ್ರತಿ 10 ಫ್ಲೋರೈಡ್ ಗೆ ತುತ್ತಾದ ಜನರಲ್ಲಿ , 7 ಮಂದಿಗೆ ಕಿಬ್ಬೊಟ್ಟೆಯ ನೋವು, ವಾಕರಿಕೆ, ವಾಂತಿ ಮತ್ತು ರಕ್ತಸ್ರಾವ ಹಾಗೂ ಜಠರದಲ್ಲಿ ಹುಣ್ಣುಗಳು, ಕಾಣಸಿಕ್ಕವು ಎಂದು ದಾಖಲಾಗಿದೆ. ಶ್ರೀ ದೇವರಾಜ ಆರಸು ವೈದ್ಯಕೀಯ ಮಹಾ ವಿದ್ಯಾಲಯ ಜೀವರಸಾಯನ ಶಾಸ್ತ್ರ ವಿಭಾಗದಲ್ಲಿ ಫ್ಲೊ್ರೋ ಸಿಸ್ ಸಂಶೋಧನೆ ಮತ್ತು ರೆಫರಲ್ ಲ್ಯಾಬೊರೇಟರಿ ನಡೆಸಿದ ವಿವಿಧ ಸಂಶೋಧನಾ ಚಟುವಟಿಕೆಗಳು ಫ್ಲೋರೈಡೀಕರಿಸಿದ ನೀರಿನ ಸೇವನೆಯೊಂದಿಗೆ ಗ್ಯಾಸ್ಟ್ರೊ ಕರುಳಿನ ಲಕ್ಷಣಗಳು ಕಾಣಿಸಿಕೊಂಡವು ಮತ್ತು ಫ್ಲೋರೈಡೀಕರಿಸದ ನೀರಿಗೆ ಬದಲಾಯಿಸಿದಾಗ ರೋಗಲಕ್ಷಣಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ ಎಂದು ಗಮನಿಸಿದ್ದೇವೆ. ಫ್ಲೋರೊಸಿಸ್ ಗೆ ತುತ್ತಾದವರಿಗೆ ಚಿಕಿತ್ಸೆ ಕ್ಲಿಷ್ಟಕರವಾದ್ದರಿಂದ ಇದನ್ನು ತಡೆಗಟ್ಟುವುದು ಉತ್ತಮ. ಇದಕ್ಕಾಗಿಯೆ ನಾವು ಜನರಿಗೆ ತಿಳಿ ಹೇಳುವುದೇನೆಂದರೆ ಆರ್.ಓ ಫಿಲ್ಟರ್ಗಳನ್ನು ಬಳಸುವ ಮೂಲಕ ಮತ್ತು ಅಡುಗೆಗೆ ಫ್ಲೋರೈಡ್ ಮುಕ್ತ ನೀರನ್ನು ಬಳಸುವುದರಿಂದ ಈ ವ್ಯಾಧಿಯನ್ನು ತಡೆಯಬಹುದು. ಸುರಕ್ಷಿತ ಮತ್ತು ಫ್ಲೋರೈಡ್ ರಹಿತ ಕುಡಿಯುವ ನೀರನ್ನು ಒದಗಿಸುವಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ನಾವು ¸ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳಿಗೆ ಶಿಫಾರಸು ಮಾಡುತ್ತೇವೆ.
ಶ್ರೀ ದೇವರಾಜ ಆರಸು ವೈದ್ಯಕೀಯ ಮಹಾವಿದ್ಯಾಲಯ ಜೀವರಸಾಯನ ಶಾಸ್ತ್ರ, ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಪ್ಲೋರೋಸಿಸ್ ರೀಸರ್ಚ್ ಮತ್ತು ರೆಫೆರಲ್ ಲ್ಯಾಬ್ (ಈಖಖಐ) ಅಧಿಕಾರಿಗಳಾದ ಡಾ||ಶಶಿಧರ್ ಕೆ.ಎನ್9845248742, ಡಾ|| ಮುನಿಲಕ್ಷ್ಮಿ ಯು8748815373, ಡಾ|| ಸಾಯಿದೀಪಿಕ.ಆರ್ 9036413299ರನ್ನು ಸಂಪರ್ಕಿಸಬಹುದಾಗಿ ವಿನಂತಿಸುತ್ತೇವೆ.