ಕುಂದಾಪುರ, ಡಿ.24: ತಲ್ಲೂರು ಸಂತ ಫ್ರಾನ್ಸಿಸ್ ಅಸ್ಸಿಸಿ ಧರ್ಮಕೇಂದ್ರದಲ್ಲಿ, ಅಂತರ್ ಧರ್ಮಿಯ ಸಂವಾದ ಆಯೋಗ ತಲ್ಲೂರು ಘಟಕದಿಂದ ಆಯೋಜಿಸಲ್ಪಟ್ಟ ಕ್ರಿಸ್ಮಸ್ ಸೌರ್ಹಾದ ಕೂಟವು ಡಿ.23 ರಂದು ಸಂಜೆ ನಡೆಯಿತು. ಅತಿಥಿ ಗಣ್ಯರು ಸಿಹಿ ಶಾಂತಿಯ ದ್ಯೋತಕವಾದ ಕೇಕನ್ನು ಕತ್ತರಿಸಿ ಕ್ರಿಸ್ಮಸ್ ಸೌರ್ಹಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅತಿಥಿಯಾಗಿ ಆಗಮಿಸಿದ ವೇದಮೂರ್ತಿ ಹೆಚ್ ಬಾಲಚಂದ್ರ, ಮ್ಯಾನೆಜಿಂಗ್ ಟ್ರಸ್ಟಿ : ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಹಟ್ಟಿಯಂಗಡಿ “ರಾಮನಂತೆ ಯೇಸು ಈ ಭೂಮಿಯಲ್ಲಿ ದೇವರಾಗಿ ಹುಟ್ಟಿದ, ಮನುಷ್ಯನಾಗಿ ಹುಟ್ಟಿ ಅವನ ಉಚ್ಚ ಉಪದೇಶಗಳಿಂದ ಧರ್ಮವನ್ನು ಕಟ್ಟಿದ ಯೇಸುವಿನ ಹೆಸರಿನಲ್ಲಿ ನೀವು ಹಿಂದು, ಮುಸ್ಲಿಮ್, ಕ್ರೈಸ್ತರನ್ನು ಒಟ್ಟಿಗೆ ಸೇರಿಸಿ ಉತ್ತಮ ಕಾರ್ಯವನ್ನು ಮಾಡಿದ್ದಿರಿ, ಇಂದು ಸಮಾಜದಲ್ಲಿ ಸಾಮರಸ್ಯಕ್ಕಾಗಿ ಇಂತಹ ಕಾರ್ಯಕ್ರಮಗಳ್ಳು ಹೆಚ್ಚಾಗಿ ನಡಯೆಬೇಕೆಂದು’ ತಿಳಿಸಿದರು. ಇವರನ್ನು ಜೋನ್ ಮೆಂಡೊನ್ಸಾರವರು ಪರಿಚಯಿಸಿದರು. ಮತ್ತೋರ್ವ ಅತಿಥಿ ಮಹಮ್ಮದ್ ಸಾಫ್ಟಾನ್ ಸ-ಹದಿ, ಧರ್ಮಗುರುಗಳು, ಮೆಹರಾಜ್ ಜುಮ್ಮಾ ಮಸೀದಿ ಗುಲ್ವಾಡಿ ಇವರು ಮಾತನಾಡಿ “ಯಾವುದೇ ಧರ್ಮದಲ್ಲಿ ಹಗೆತನ, ವೈರತ್ವ, ಹಿಂಸೆಗೆ ಪ್ರಚೋಧನೆಯ ಸಂದೇಶಗಳಿಲ್ಲ, ಇದನ್ನು ಆಯಾಯ ಧರ್ಮದ ಧರ್ಮಗುರುಗಳೇ ಜನರಿಗೆ ತಿಳಿಸಿಕೊಡಬೇಕು, ನನಗೆ ಈಗಲೂ ಅನ್ಯ ಧರ್ಮದವರ ಮಿತ್ರರಿದ್ದಾರೆ, ಕುವೆಂಪು ಹೇಳಿದಾಗೆ ಶಾಂತಿ ಸಾಮರಸ್ಯದಿಂದ ನಾವೆಲ್ಲಾ ಒಟ್ಟಾಗಿ ಜೀವಿಸಿ ನಮ್ಮ ನಾಡು ಸಾಮರಸ್ಯದ ನಾಡಾನ್ನಾಗಿ ಮಾಡಬೇಕು” ಎಂದು ತಿಳಿಸಿದರು. ಇವರನ್ನು ಫ್ರ್ಯಾಂಕಿ ಪಾಸನ್ನಾರವರು ಪರಿಚಯಿಸಿದರು.
ಉಡುಪಿ ಧರ್ಮಪ್ರಾಂತ್ಯದ ಅಂತರ ಧರ್ಮೀಯ ಸಂವಾದ ಆಯೋಗದ ನಿರ್ದೇಶಕರದ ವಂ.ಧರ್ಮಗುರು ಫ್ರಾನ್ಸಿಸ್ ಲುವಿಸ್ ಡೆಸಾ, ಇವರು ದಿಕ್ಸೂಚಿ ಸಂದೇಶ ನೀಡುತ್ತಾ, “ನಾವೆಲ್ಲರೂ ಯುನಿಟಿಯಾಗಿ ಬಾಳಬೇಕು. ಐಕ್ಯತೆ ನಮ್ಮ ಗುರಿಯಾಗಬೇಕು, ನಾವು ಮಾನವರು ಆಕಾಶದಲ್ಲಿ ಹಕ್ಕಿಗಳಂತೆ ಹಾರಡಲಿಕ್ಕೆ ಕಲಿತಿದ್ದೇವೆ, ನೀರೊಳಗೆ ಮಿನಿನಂತೆ ಈಜಾಡಲು ಕಲಿತಿದ್ದೇವೆ, ಆದರೆ ಮನುಷ್ಯನ ಹಾಗೆ ಜೀವಿಸಲು ಕಲಿಯಲಿಲ್ಲ. ಎಂದು ಹೆಸರಾಂತ ಲೇಖಕರ ಮಾತುಗಳನ್ನು ಮೆಲುಕೆ ಹಾಕಿದರು. ನಮ್ಮ ಜೀವನ ವೈರತ್ವ ಹಗೆತನದಿಂದ ಕೂಡಿರಬಾರದು, ಯೇಸು ಹೇಳಿದ್ದಾರೆ ನಾನು ನಿಮ್ಮನ್ನು ಪ್ರೀತಿಸಿದಂತೆ, ನೀವು ಪರರನ್ನು ಪ್ರೀತಿಸಬೇಕು.ಯಾವ ಧರ್ಮವೂ ಕೀಳಲ್ಲ, ನಾವು ಕ್ಷಮೆ ನೀಡಲು ಮುಂದಾಗಬೇಕು, ಕಶ್ಟದ ಕೆಲಸ ಅದು, ಆದರೆ ತಮ್ಮನ್ನು ಶಿಲುಭೆಗೇರಿಸಿ ಕೊಂದವರನ್ನೆ ಯೇಸು ಸ್ವಾಮಿ ಕ್ಷಮಿಸಿ ನಮಗೆ ದಾರೆ ದೀಪವಾಗಿದ್ದಾರೆ, ಯೇಸು ನಮಗಾಗಿ ಹುಟ್ಟಿ ನಮಗಾಗಿ ಪ್ರಾಣ ತ್ಯಾಗ ಮಾಡಿ ನಮ್ಮನ್ನು ಪಾಪಗಳಿಂದ ವಿಮೋಚನೆ ಮಾಡಿದ್ದಾರೆ, ಅವರ ಹುಟ್ಟು ಹಬ್ಬವೇ ಕ್ರಿಸ್ಮಸ್, ಕ್ರಿಸ್ಮಸ್ ಅಂದರೆ ಶಾಂತಿ ಸಮಾಧಾನ ಸಂತೋಷದ ದ್ಯೋತಕವಾಗಿದೆ’ ಎಂದು ಸಂದೇಶ ನೀಡಿದರು. ಇವರನ್ನು ಅರುಣ್ ಮೆಂಡೊನ್ಸಾ ಪರಿಚಯಿಸಿದರು.
ತಲ್ಲೂರು ಸಂತ ಫ್ರಾನ್ಸಿಸ್ ಅಸ್ಸಿಸಿ ಧರ್ಮಕೇಂದ್ರದ ಧರ್ಮಗುರು ವಂ|ಎಡ್ವಿನ್ ಡಿಸೋಜಾ ಅಥಿತಿಗಳನ್ನು ಶಾಲು ಹೋದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಧರ್ಮಕೇಂದ್ರದ ಗಾಯನ ಪಂಗಡದಿಂದ ಕ್ರಿಸ್ಮಸ್ ಕ್ಯಾರೋಲ್ ಗೀತೆಯ ಮೂಲಕ ಪ್ರಾಥನೆಯನ್ನು ಮಾಡಿದರು. ಭಾರತೀಯ ಕಥೊಲಿಕ್ ಯುವ ಸಂಚಲನೆಯಿಂದ ರೂಪಕವನ್ನು ಪ್ರದರ್ಶಿಸಿದರು. ತಲ್ಲೂರು ಘಟಕದ ಯುವ ವಿದ್ಯಾರ್ಥಿ ಸಂಚಲನದ ಸದಸ್ಯರು ಕ್ರಿಸ್ಮಸ್ ನೃತ್ಯ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಕಥೋಲಿಕ್ ಸಭಾ ತಲ್ಲೂರು ಘಟಕ್ ಆಯೋಜಿಸಿದ ಭಾಶಣ ಸ್ಪರ್ಧೆಯ ವಿಜೇತರಿಗೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಬಹುಮಾನವನ್ನು ಹಂಚಲಾಯಿತು. ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ಗ್ರೆವೀನ್ ಪಸಾನ್ನ ನೆಡೆಸಿಕೊಟ್ಟರು. ಕಾರ್ಯಕ್ರಮದ ಬಳಿಕ ಎಲ್ಲರಿಗೂ ಪಾನೀಯ ಮತ್ತು ಸಿಹಿತಿಂಡಿಗಳನ್ನು ಹಂಚಲಾಯಿತು. ವೇದಿಕೆಯಲ್ಲಿ ಸುತ್ತಮುತ್ತಲಿನ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ತಲ್ಲೂರು ಚರ್ಚ್ ಪಾಲನ ಮಂಡಳಿಯ ಕಾರ್ಯದರ್ಶಿ ರೀನಾ ಮೆಂಡೊನ್ಸಾ, ತಲ್ಲೂರು ಚರ್ಚಿನ ಆಯೋಗಗಳ ಸಂಚಾಲಕ ರೋನಿ ಲುವೀಸ್ ಉಪಸ್ಥಿತರಿದ್ದರು. ಅಂತರ್ ಧರ್ಮೀಯ ಆಯೋಗದ ಸಂಚಾಲಕ, ಹಾಗೂ ಉಪಾಧ್ಯಕ್ಷರಾದ ಕ್ಯಾಲ್ವಿನ್ ಮೆಂಡೋನ್ಸಾ ವಂದಿಸಿದರು. ಜೂಡಿತ್ ಮೆಂಡೊನ್ಸಾ ಸ್ವಾಗತಿಸಿ, ನಿರೂಪಿಸಿದರು.