ಕುಂದಾಪುರ, ಡಿ.25: 453 ವರ್ಷದ ಇತಿಹಾಸವುಳ್ಳ ಕೆನರಾದಲ್ಲೆ ಅತ್ಯಂತ ಪ್ರಾಚೀನ ಇಗರ್ಜಿಗಳಲ್ಲಿ ಎರಡನೇ ಇಗರ್ಜಿಯಾದ ಹೋಲಿ ರೋಜರಿ ಇಗರ್ಜಿಯಲ್ಲಿ ಡಿ.24 ರ ಸಂಜೆ ಕ್ರಿಸ್ಮಸ ಹಬ್ಬ ಸಡಗರ ಭಕ್ತಿಭಾವದಿಂದ ದಿವ್ಯ ಬಲಿಪೂಜೆಯನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು.
“ಕ್ರಿಸ್ಮಸ್ ಅಂದರೆ ಸಮಾಧಾನ ಪ್ರೀತಿ ಮತ್ತು ತ್ಯಾಗ ಅದಕ್ಕಾಗಿಯೆ ದೇವರ ಪುತ್ರ ಯೇಸು ಮನುಷ್ಯನ ರೂಪದಲ್ಲಿ ಭೂಮಿಯಲ್ಲಿ ಜನಿಸಿ ನಮಗೆ ಪ್ರೀತಿ ಮತ್ತು ತ್ಯಾಗ ಬಲಿದಾನವನ್ನು ಅರ್ಪಿಸಲು ಬಂದವನು. ಯೇಸು ಕ್ರಿಸ್ತರ ಪ್ರೀತಿ ಮತ್ತು ತ್ಯಾಗ ಬಹಳ ಶ್ರೇಷ್ಟವಾದುದು. ಅದರಂತೆ ನಾವು ಬಾಳಬೇಕು, ಮೋಜಿನ ಸಂಭ್ರಮದ ಕ್ರಿಸ್ಮಸ್ ಆಚರಣೆಯಲ್ಲಿ ಅರ್ಥವಿಲ್ಲಾ, ನಾವು ಬಡವರಿಗಾಗಿ, ಅಗತ್ಯವಿದ್ದವರಿಗಾಗಿ ಸಂಕಷ್ಟದಲ್ಲಿರುವರಿಗಾಗಿ ತ್ಯಾಗ ಮಾಡಿ ಸರಳ ರೀತಿಯಲ್ಲಿ ಕ್ರಿಸ್ಮಸ್ ಆಚರಿಸಿದರೆ ಅದು ಯೇಸು ಕ್ರಿಸ್ತರಿಗೆ ಸಲ್ಲುತ್ತದೆ” ಬಲಿದಾನದ ನೇತ್ರತ್ವ ವಹಿಸಿದ ಕಾರ್ಮೆಲ್ ಸಂಸ್ಥೆಯ ವಂ|ಜೋನ್ ಸಿಕ್ವೇರಾ ಸಂದೇಶ ನೀಡಿದರು
“ಯೇಸು ಕೇವಲ ಕ್ರೈಸ್ತರಿಗಲ್ಲ, ಇಡೀ ಜಗತ್ತಿಗಾಗಿ ಬಂದವನು,ಯೇಸು ಶಾಂತಿಯ ರಾಜಾ, ಪ್ರೀತಿಯ ರಾಜಾನಾಗಿದ್ದು, ನಿಮ್ಮ ಹ್ರದಯದಲ್ಲಿ ಆತ ಶಾಂತಿ, ಪ್ರೇಮ, ಸಮಾಧಾನ ಬಿತ್ತಿದ್ದಾನೆ, ಅದನ್ನು ನೀವು ಇತರರಿಗೆ ಹಂಚಿದರೆ ನಾವು ಒಂದು ಒಳ್ಳೆಯ ಕ್ರಿಸ್ಮಸ್ ಆಚರಿಸುತ್ತೀರಿ ಎಂದಾಯ್ತು, ಆದರೆ ಶಾಂತಿ, ಪ್ರೇಮ, ಸಮಾಧಾನ ಹಂಚದಿದ್ದರೆ ನೀವು ಕ್ರಿಸ್ತನ ವಿರುದ್ದ ಹೋಗುತ್ತೀರಿ ಎಂದು ಅರ್ಥ. ಯೇಸು ಹುಟ್ಟಿದ್ದು ಅತೀ ಬಡವನಾಗಿ, ಒಂದು ಹಟ್ಟಿಯಲ್ಲಿ ಅದರರ್ಥ ನಮಗಿದು ನಾವು ಸರಳವಾಗಿ ಜೀವಿಸಬೇಕೆಂಬುದು. ನಮ್ಮ ಜೀವನ ಕ್ರಿಸ್ತರ ಜೀವನಕ್ಕೆ ಸರಿಹೊಂದಬೇಕು, ಆವಾಗ ನಾವು ನೀಜ ಕ್ರೈಸ್ತರಾಗುತ್ತೆವೆ. ಬಡವರಿಗೆ, ಅಸಕ್ತರಿಗೆ, ಸಂಕಷ್ಟದಲಿದ್ದವರಿಗೆ ಸಹಾಯ ಮಾಡುವುದೇ ನಮ್ಮ ಕ್ರಿಸ್ಮಸ್ ಆಗಲಿ’ ಎಂದು ಸಂದೇಶ ನೀಡಿದರು.
ಅ|ವಂ| ಸ್ಟ್ಯಾನಿ ತಾವ್ರೊ, ಕ್ರಿಸ್ಮಸ್ ಹಬ್ಬದ ಬಲಿಪೂಜೆಯಲ್ಲಿ ಭಾಗಿಯಾಗಿ ಹಬ್ಬದ ಶುಭಾಶಯಗಳನ್ನು ಕೋರಿದರು. ಸಹಾಯಕ ಧರ್ಮಗುರು ವಂ|ಸ್ಶ್ವಿನ್ ಆರಾನ್ಹಾ ಮತ್ತು ಅತಿಥಿ ಧರ್ಮಗುರು ವಂ|ಜಾರ್ಜ್ ಅಂದ್ರಾದೆ ಬಲಿದಾನದ ಅರ್ಪಿಸಿದರು.. ಬಲಿದಾನದ ಬಳಿಕ ವಾಳೆವಾರು ಭಾಗ್ಯಶಾಲಿ ಕುಟುಂಬಗಳಿಗೆ, ಹೌಸಿ ಆಟದ, ಮತ್ತು ಗೋದಲಿ ಗ್ರೀಟಿಂಗ್ಸ್ ಕಾರ್ಡ್ ರಚಿಸುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಐ.ಸಿ.ವೈ.ಎಮ್. ಸಂಘಟನೆಯಿಂದ ಬಹುಮಾನಗಳನ್ನು ವಿತರಿಸಲಾಯಿತು.