ಕುಂದಾಪುರ. ದಿನಾಂಕ 23-12-2024 ಸೋಮವಾರದಂದು ಕುಂದಾಪುರ ಸೈoಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಅಧ್ಯಕ್ಷರು ಆಗಿರುವ ಪೂಜ್ಯನೀಯ ಫಾ. ಪಾವ್ಲ್ ರೇಗೋ ರವರು ಮಾತನಾಡಿ ನಮ್ಮಲ್ಲಿ ಪರಸ್ಪರ ಸಹಬಾಳ್ವೆ ಇರಬೇಕು. ಕಿಂಚಿತ್ತಾದರೂ ನಮ್ಮಿಂದ ಇನ್ನೊಬ್ಬರಿಗೆ ಸಹಾಯ ಮಾಡಬೇಕು. ಎನ್ನುತ್ತಾ ಕ್ರಿಸ್ಮಸ್ ಸಂದೇಶದೊಂದಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಫೇರ್ನಾಂಡೀಸ್ ರವರು, ಸಾಂಸ್ಕೃತಿಕ ಸಂಘದ ವಿದ್ಯಾರ್ಥಿ ಪದಾಧಿಕಾರಿಗಳಾದ ರಿಯಾ ಡಿಸೋಜಾ ಹಾಗೂ ಸಾನಿಕ ಉಪಸ್ಥಿತರಿದ್ದು, ಪ್ರಾಂಶುಪಾಲರು ನಮ್ಮ ಆಲೋಚನೆಗಳು ಸೃಜನಾತ್ಮವಾಗಿರಬೇಕು. ದೇವರ ಆಶೀರ್ವಾದದೊಂದಿಗೆ ನಮ್ಮ ಜೀವನ ಬೆಳಕಾಗುತ್ತದೆ ಎನ್ನುತ್ತಾ ಶುಭ ಹಾರೈಸಿದರು.
ಉಪನ್ಯಾಸಕರಾದ ಪ್ರೀತಿ ಕ್ರಾಸ್ತಾ ರವರು ಕ್ರಿಸ್ಮಸ್ ಹಬ್ಬದ ಪ್ರಾಮುಖ್ಯತೆಯನ್ನು ತಿಳಿಸಿದರು. ವಿದ್ಯಾರ್ಥಿ ಸಂಸತ್ತಿನ ಕಾರ್ಯದರ್ಶಿ ಜೊನಿಟಾ ಮೆಂಡೋನ್ಸಾ ಸ್ವಾಗತಿಸಿ, ರಿಯಾ ಡಿಸೋಜಾ ವಂದಿಸಿದರು. ಪ್ರಥಮ ವಿಜ್ಞಾನ ವಿದ್ಯಾರ್ಥಿ ವಿಯೋನ್ನಾ ಕಾರ್ಯಕ್ರಮ ನಿರೂಪಿಸಿದರು.
ದ್ವಿತೀಯ ಪಿಯು ವಿದ್ಯಾರ್ಥಿ ಆಲ್ವಿನ್ ಹಾಗೂ ಸಂಗಡಿಗರ ಆಕರ್ಷಣೆಯ ಗೋದೂಲಿಯೊಂದಿಗೆ, ಕಿರು ರೂಪಕ, ನೃತ್ಯದೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.