

ಕುಂದಾಪುರ(27.12.2023):ಕುಂದಾಪುರ ಎಜುಕೇನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಆಂಗ್ಲಾ ಮಾಧ್ಯಮ ಪ್ರಾಥಮಿಕ ಮತ್ತು ವಿಕೆಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳ ಕ್ರಿಸ್ಮಸ್ನ ಸಂದೇಶವನ್ನು ಸಾರುವ ಗೀತ ಗಾಯನ ಮತ್ತು ನೃತ್ಯ ಗಮನಸೆಳೆಯಿತು. ಸಂಸ್ಥೆಯ ಅಕಾಡೆಮಿಕ್ ಕೋಆರ್ಡಿನೇಟರ್ ವಿಲ್ಮಾ ಡಿಸಿಲ್ವಾ ಕ್ರಿಸ್ಮಸ್ ನ ಮಹತ್ವವನ್ನು ವಿದ್ಯಾರ್ಥಿಗಳಿಗೆ ಅರುಹಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ.ಚಿಂತನಾ ರಾಜೇಶ್ ಮತ್ತು ವಿವಿಧವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶೈಲಾ ಶಾಲೆಟ್ ಮತು ದಿವ್ಯ ನಜರತ್ ಇವರ ಸಹಯೋಗದೊಂದಿಗೆ ಕಾರ್ಯಕ್ರಮ ಮೂಡಿಬಂತು. ವಿದ್ಯಾರ್ಥಿ ವಿನ್ಯಾಸ್ ಅಡಿಗ ಕಾರ್ಯಕ್ರಮ ನಿರೂಪಿಸಿದರು.
