ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೋ ಮುಳಯ್ಕಲ್ ನಿರ್ದೋಶಿ ನ್ಯಾಯಾಲಯದ ತೀರ್ಪು

JANANUDI.COM NETWORK


2014 ಮತ್ತು 2016ರ ಇಸವಿಯ ನಡುವೆ ಹಲವಾರು ಬಾರಿ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿದ ಎನ್ನಲಾದ ಆರೋಪ ಇರುವ ಬಿಷಪ್ ಫ್ರಾಂಕೋ ಮುಳಯ್ಕಲ್ ಅವರನ್ನು ಕೇರಳದ ನ್ಯಾಯಾಲಯವು ನಿರ್ದೋಷಿ ಎಂದು ಖುಲಾಸೆ ಮಾಡಿದೆ.
ಬಿಷಪ್ ಫ್ರಾಂಕೋ ಮುಳಯ್ಕಲ್ ಅವರು ಸನ್ಯಾಸಿನಿಯೊಬ್ಬರ ದೂರು ನೀಡಿದ ಆಧಾರದ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಭಾರತದ ಮೊದಲ ಕ್ಯಾಥೋಲಿಕ್ ಬಿಷಪ್ ಆಗಿದ್ದರು. ಫ್ರಾಂಕೋ ಮುಳಯ್ಕಲ್, ಪೆÇಲೀಸರು ಮತ್ತು ನ್ಯಾಯಾಲಯಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಅವರ ಪರ ವಕೀಲರು ಹೇಳಿದ್ದಾರೆ.
ಬಿಷಪ್ ಫ್ರಾಂಕೋ ವಿರುದ್ಧ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಬಲವಂತದ ಬಂಧನದ ಗಂಭೀರ ಆರೋಪ ಹೊರಿಸಲಾಗಿತ್ತು.
ಕೊಟ್ಟಾಯಮನ ನ್ಯಾಯಾಲಯವು 100 ದಿನಗಳಿಗೂ ಅಧಿಕ ದಿನ ನಡೆದ ವಿಚಾರಣೆಯ ನಂತರ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು. 2018ರಲ್ಲಿ ಜಲಂಧರ್ ಡಯಾಸಿಸ್ ಅಧೀನದಲ್ಲಿರುವ ಸಭೆಯ ಕ್ರೈಸ್ತ ಸನ್ಯಾಸಿನಿಯರು ಬಿಷಪ್ ಫ್ರಾಂಕೋ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.


ಕೋಟ್ಟಾಯಮನ್ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ. ಗೋಪ ಕುಮಾರ್ ಅವರು ಈ ತೀರ್ಪು ನೀಡಿರುತ್ತಾರೆ. ಮಿಷನರೀಸ್ ಆಫ್ ಜೀಸಸ್ ಕಾನ್ವೆಂಟಿನ ಸದಸ್ಯೆ ಹಾಗೂ ಕುರವಿಲಂಗಾಡ್ ನಡುಕನ್ನು ಸೇಂಟ್ ಫ್ರಾನ್ಸಿಸ್ ಮಿಷನ್ ಹೋಮಿನ ನಿವಾಸಿ ನೀಡಿದ ದೂರಿನ ಮೇರೆಗೆ ಕುರವಿಲಂಗಾಡ್ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ನ್ಯಾಯವಾದಿಗಳಾದ ಜಿತೇಶ್ ಜೆ.ಬಾಬು ಮತ್ತು ಸುಬಿನ್ ಕೆ. ವರ್ಗೀಸ್ ಮತ್ತು ವಕೀಲರಾದ ಕೆ ರಾಮನ್ ಪಿಳ್ಳೈ ಮತ್ತು ಸಿಎಸ್ ಅಜಯನ್ ವಾದ ಮಂಡಿಸಿದರು.