ಕುಂದಾಪುರ ರೋಜರಿ ಚರ್ಚನಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ

JANANUDI.COM NETWORK

ಕುಂದಾಪುರ,ಫೇ.: ಫೆ. ೨೭: ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಸಭಾಭವನದಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಫೆ. 27ರಂದು ನಡೆಯಿತು
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ನೀತಿ ಶಿಕ್ಷಣ ಪಡೆದ ಮಗು ಜೀವನದಲ್ಲಿ ಸಫಲತೆಯನ್ನು ಪಡೆಯುತ್ತದೆ. ಆ ಮಗು ಮುಂದೆ ಜೀವನದಲ್ಲಿ ಮೌಲ್ಯಾಧಾರಿತ ಜೀವನ ನಡೆಸುತ್ತದೆ ಅಧ್ಯಾತ್ಮಿಕವಾಗಿ ತಮ್ಮನ್ನು ಬೆಳೆಸಿಕೊಳ್ಳುವುದು ಮಾತ್ರವಲ್ಲಾ, ನೀತಿ ಶಿಕ್ಷಣದಿಂದ ನಮಗೆ ದೇವರ ಪರಿಚಯವಾಗುತ್ತದೆ’ ಎಂದು ವರ್ಷವೀಡಿ ತಮ್ಮ ಸಮಯವನು ತ್ಯಾಗ ಮಾಡಿ ನೀತಿ ಶಿಕ್ಷಣ ನೀಡುವ ಶಿಕ್ಷಕಿಯರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ,ನೀತಿ ಶಿಕ್ಷಕರನ್ನು ಅವರು ಗೌರವಿಸಿದರು. ಸಭಾ ಕಾರ್ಯ ಕ್ರಮದ ಮೊದಲು ಹೋಲಿ ರೋಜರಿ ಚರ್ಚನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು.
ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ, ಮಕ್ಕಳು ಕ್ರೈಸ್ತ ಶಿಕ್ಷಣ ಪಡೆದರೆ ಮಾತ್ರ ಸಾಲದು, ಅದನ್ನು ನಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಿ ಅದರಂತೆ ನಡೆಯಬೇಕು.ಎಂದು ಹೇಳಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಅವರ ಜೊತೆಗೆ ಪಾಲನಾ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ,ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ಒಂದನೇ ತರಗತಿಯಿಂದ ಪಿ.ಯು.ಸಿ. ವರೆಗಿನ ಮಕ್ಕಳಿಗೆ ಕ್ರಿಸ್ತಿ ಮೌಲ್ಯಾಧಾರಿತ ಶಿಕ್ಷಣದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಶಿಕ್ಷಕಿ ಲೋನಾ ಲುವಿಸ್, ಮತ್ತು ವಿದ್ಯಾರ್ಥಿನಿ ರಿಶಿಕಾ ಮೊಂತೇರೊ ತಮ್ಮ ಅನುಭವವನ್ನು ಹಂಚಿಕೊಂಡರು.
ಮಕ್ಕಳಿಂದ ನ್ರತ್ಯ, ಪ್ರಹಸನ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ನೀತಿ ಶಿಕ್ಷಣ ಶಿಕ್ಷರ ಸಂಚಾಲಕಿ ವೀಣಾ ಡಿಸೋಜಾ ವರದಿಯನ್ನು ವಾಚಿಸಿದರು. ವಿದ್ಯಾರ್ಥಿನಿಯಾರಾದ ವಿಯಾನ್ನ ಬರೆಟ್ಟೊ ಮತ್ತು ವಿಯೋಲಾ ಬರೆಟ್ಟೊ ನಿರೂಪಿಸಿದರು.ಶಿಕ್ಷಕಿಯಾರಾದ ಸಿಸ್ಟರ್ ತೆರೆಜಾ ಶಾಂತಿ, ಮರಿಯಾ ಬರೆಟ್ಟೊ, ಸೆಲಿನ್ ಬರೆಟ್ಟೊ ಸಹಕರಿಸಿದರು.ವಿದ್ಯಾರ್ಥಿನಿ ಪರ್ಲ್ ಬರೆಟ್ಟೊ ಸ್ವಾಗತಿಸಿದಳು ಶಿಕ್ಷಕಿ ಜೂಲಿಯೆಟ್ ಪಾಯ್ಸ್ ವಂದಿಸಿದರು
.