

ಕುಂದಾಪುರ ಫೆ.24 : ಕುಂದಾಪುರ ಹೋಲಿ ರೋಜರಿ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಫೆ. 23 ರಂದು ನಡೆಯಿತು. ಚರ್ಚಿನ ಅ।ವಂ। ಧರ್ಮಗುರು ಪಾವ್ಲ್ ರೇಗೊ ನೀತಿ ಶಿಕ್ಷಣ ಪಡೆಯುವ ಮಕ್ಕಳು ಹಾಗೂ ಶಿಕ್ಷಕರು ಪ್ರಾರ್ಥನ ವಿಧಿಯೊಂದಿಗೆ ಪವಿತ್ರ ಬಲಿದಾನವನ್ನು ಅರ್ಪಿಸಿ “ನೀತಿ ಶಿಕ್ಷಣ ಪಡೆಯುವ ಮೂಲಕ ಮಕ್ಕಳು ಮುಂದೆ ನೀತಿವಂತರಾಗಿ ಬಾಳಬಹುದು. ನೀತಿ ಶಿಕ್ಷಣ ಬಹು ಅಮೂಲ್ಯವಾಗಿದೆ, ನೀತಿ ಶಿಕ್ಷಣ ನೀಡುವ ಶಿಕ್ಷರ ಸೇವೆ ಗಮನರ್ಹವಾಗಿದೆ, ಅವರಿಗೆ ವಾರಕ್ಕೊಂದು ದಿನ ಸಿಗುವ ವಿಶ್ರಾಮ ದಿನವನ್ನು ಕ್ರೈಸ್ತ ಮಕ್ಕಳಿಗಾಗಿ ಮೀಸಲಿಡುತ್ತಾರೆ, ಇಲ್ಲಿ ಸುದೀರ್ಘವಾಗಿ 25 ವರ್ಷಗಳಿಕ್ಕಿಂತಲು ಹೆಚ್ಚು ವರ್ಷ ಸೇವೆ ನೀಡಿದವರಿದ್ದು, ಇದು ಹೆಮ್ಮೆಯ ವಿಚಾರವಾಗಿದೆ. ಇಂದು ನಾವು ಒದಿದ ದೇವರವಾಕ್ಯದಲ್ಲಿ ಉತ್ತಮ ಸಂದೇಶವಿದೆ, “ನೀವು ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಿಸುವರನ್ನು ಒಳ್ಳೆದು ಮಾಡಿ, ನಿಮಗೆ ಶಾಪ ಹಾಕಿದವರನ್ನು ಆಶಿರ್ವದಿಸಿರಿ, ನಿಮಗೆ ನಿಂದನೆ ಮಾಡಿದವರಿಗಾಗಿ ಪ್ರಾರ್ತಿಸಿರಿ” ಎಂದು ಯೇಸು ಕ್ರಿಸ್ತರು ಭೋದಿಸಿದ್ದಾರೆ, ಅದರಂತೆ ನಾವು ನಡೆಯೋಣ” ಎಂದು ಸಂದೇಶ ನೀಡಿದ ಅವರು ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ನೀತಿ ಶಿಕ್ಷಣದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಬಹುಮಾನ ವಿತರಿಸಿ, ಶಿಕ್ಷಕರಿಗೆ ನೆನಪಿನ ಕಾಣಿಕೆಯನ್ನು ನೀಡಿದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ, ಪಾಲನಾ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ಉಪಸ್ಥಿರರಿದ್ದು ಮಕ್ಕಳಿಗೆ ಬಹುಮಾನ ವಿತರಿಸಿದರು.ವಿಧ್ಯಾರ್ಥಿಗಳ ಪರವಾಗಿ ರೀಶೊನ್ ಡಿಆಲ್ಮೇಡಾ, ಕ್ಲಿಯೊನಾ ಸಿಕ್ವೇರಾ, ಶಿಕ್ಷಕರ ಪರವಾಗಿ ವೈಲೆಟ್ ಡಿಸೋಜಾ ಅನಿಸಿಕೆಯನ್ನು ವ್ಯಕ್ತ ಪಡಿಸಿದರು.
1 ರಿಂದ 10 ನೇ ತರಗತಿ ಮಕ್ಕಳಿಂದ ನ್ರತ್ಯ, ಪ್ರಹಸನ, ಸಂತರ ವೇಷಭೂಶಣಗಳ, ಕವಾಲಿ ಪ್ರದರ್ಶನ ಕಾರ್ಯಕ್ರಮಗಳು ನಡೆದವು. ನೀತಿ ಶಿಕ್ಷಣ ಶಿಕ್ಷರ ಸಂಚಾಲಕಿ ವೀಣಾ ಡಿಸೋಜಾ ವರದಿಯನ್ನು ವಾಚಿಸಿದರು. ವಿದ್ಯಾರ್ಥಿ ಡೆನಿಸನ್ ಬ್ರಗಾಂಜಾ, ಸ್ವಾಗತಿಸಿದರು. ಪರ್ಲ್ ಬರೆಟ್ಟೊ, ಸಿಯೋನಾ ವಾಜ್ ನಿರೂಪಿಸಿದರು. ಡೆನ್ಸಿಯಾ ಬರೆಟ್ಟೊ ವಂದಿಸಿದರು.



































































































































