ಕುಂದಾಪುರದ ಪ್ರತಿಷ್ಠಿತ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ನೇತೃತ್ವದಲ್ಲಿ ದಿನಾಂಕ 27- 07- 2024 ರಂದು ತನ್ನ ಪ್ರಧಾನ ಕಚೇರಿಯ ಮೂರನೇ ಅಂತಸ್ತಿನ ರೋಜರಿ ಸಭಾಭವನದಲ್ಲಿ “ಕ್ರೈಸ್ತ ಸಹಕಾರಿ ಸಮ್ಮಿಲನ ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ| ಡಾ. ಜೆರಾಲ್ಡ್ ಐಸಾಕ್ ಲೋಬೋ ಮುಖ್ಯ ಅತಿಥಿಯಾಗಿ ಆಗಮಿಸಿ “ಇಂತಹ ಒಂದು ಕೂಟ ನಮಗೆ ಅಗತ್ಯವಿದೆ, ಸಹಕಾರಿ ಸಂಘಗಳ ನಡುವೆ ಸಹಕಾರ ಅಗತ್ಯವಿದೆ, ಇದನ್ನು ಮುಂದಕ್ಕೆ ನೆಡೆಕೊಂಡು ಹೋಗಬೇಕು’ ತಮ್ಮ ಸಂದೇಶ ನೀಡಿದರು. ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ಪಾವ್ಲ್ ರೇಗೊ,ಶುಭ ಹಾರೈಸಿ ಸಂದೇಶ ನೀಡಿದರು.
ಸಹಕಾರ ಸಂಘದ ಸಾಧನೆಗಳನ್ನು ಆಚರಿಸಲು, ಸ್ನೇಹಿತತ್ವವನ್ನು ಬಲಪಡಿಸಲು ಮತ್ತು ನಮ್ಮ ಸಮೂಹದ ಯಶಸ್ಸನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕ್ಯಾಥೋಲಿಕ್ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಬ್ರಹ್ಮಾ ವರ,ಇದರ ಅಧ್ಯಕ್ಷರಾದ ವಲೇರಿಯನ್ ಮಿನೆಜೆಸ್, ಉಡುಪಿ ಕ್ಯಾಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಡುಪಿ, ಇದರ ಅಧ್ಯಕ್ಷ ಲುವಿಸ್ ಲೋಬೊ, ಕೊಂಕಣ್ ಕ್ಯಾಥೊಲಿಕ್ ವಿವಿದೋದ್ಧೇಶ ಸಹಕಾರಿ ಸಂಘ ಕಾರ್ಕಳ ಇದರ ಅಧ್ಯಕ್ಷರಾದ ಡಾ|ಪೀಟರ್ ಫೆರ್ನಾಂಡಿಸ್, ಸುಗಮ್ಯಾ ಮಹಿಳಾ ಸೌಹಾರ್ದ ಸಹಕಾರಿ ಸಂಘ ಉಡುಪಿ ಇದರ ಅಧ್ಯಕ್ಷರಾದ ಪ್ರಮೀಳಾ ಡೆಸಾ ಇವರುಗಳು ತಮ್ಮ ಸಂಘಗಳು ಬೆಳೆದು ಬಂದ ರೀತಿ ಸಭೆಯಲ್ಲಿ ಮಾತನಾಡಿ ಮುಂದೆ ಸಂಘವನ್ನು ಹೇಗೆ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸಲಹೆ ನೀಡಿದರು.
ಮುಂದೆ ಇಂತಹ ಕೂಟ ಮುಂದುವರೆಸಿ ಬಲ ಪಡಿಸಲು, ಮುಂದಿನ ಮೂರು ವರ್ಷಗಳ ಕಾಲಕ್ಕೆ ರೋಜರಿಯ ಸೊಸೈಟಿಯ ಅಧ್ಯಕ್ಷ ಜೋನ್ಸನ್ ಡಿ ‘ ಆಲ್ಮೇಡಾ ಅವರನ್ನು ಸಂಚಾಲಕರನ್ನಾಗಿ ಆರಿಸಲಾಯಿತು.
ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಜೆರಾಲ್ಡ್ ಫೆರ್ನಾಂಡಿಸ್, ಎಮ್.ಸಿ.ಸಿ. ಬ್ಯಾಂಕಿನ ನಿರ್ದೇಶಕರಲ್ಲಿ ಒಬ್ಬರಾದ ಡಾ.ಜೆರಾಲ್ಡ್ ಪಿಂಟೊ, ರೋಜರಿ ಸೊಸೈಟಿಯ ಎಲ್ಲಾ ನಿರ್ದೇಶಕರು, ಎಲ್ಲಾ 5 ಸೊಸೈಟಿಗಳ ಉಪಾಧ್ಯಕ್ಷರು, ನಿರ್ದೇಶಕರು ಸೇರಿ 70 ಮಂದಿ ಭಾಗವಹಿಸಿದ್ದರು. ರೋಜರಿ ಸೊಸೈಟಿಯ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಜೋನ್ಸನ್ ಡಿ ‘ ಆಲ್ಮೇಡಾ ಪ್ರಸ್ತಾವನೆಗೈದು ಸರ್ವರನ್ನು ಸ್ವಾಗತಿಸಿದರು, ರೋಜರಿಯ ಸೊಸೈಟಿಯ ಉಪಾಧ್ಯಕ್ಷರಾದ ಕಿರಣ್ ಲೋಬೊ ಕಾರ್ಯಕ್ರಮಕ್ಕೆ ಸಹಕರಿಸಿದರು. ರೋಜರಿ ಸೊಸೈಟಿಯ ನಿರ್ದೇಶಕ ಶ್ರೀ ವಿಲ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.