

ಕೋಲಾರ,ಆ.12: ಬೆಂಗಳೂರಿನ ನಾಗರಬಾವಿಯಲ್ಲಿ ಜಪಾನ್ ಕರಾಟೆ ಶೂಟೋಕಾನ್ ಅಕಾಡೆಮಿ ಇವರ ನೇತೃತ್ವದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಗರದ ಸೆಂಟ್ ಆನ್ಸ್ ಶಾಲೆಯ 3ನೇ ತಗರತಿ ವಿದ್ಯಾರ್ಥಿ ಸಿಯಾನ್ ಜಾನ್ ಕರಾಟೆ ಸ್ಪರ್ಧೆಯ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಇದೇ ತಿಂಗಳು ಬಾಂಬೆಯಲ್ಲಿ ನಡೆಯಲಿರುವ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕರಾಟೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ 2ನೇ ಡಾನ್ ಬ್ಲಾಕ್ ಬೆಲ್ಟ್ ಸಹ ಪಡೆದುಕೊಂಡಿದ್ದಾರೆ.
ಬ್ರೂಸ್ಲಿ ಕರಾಟೆ ಶಾಲೆಯ ಸಂಸ್ಥಾಪಕ ಹಾಗೂ ಚಿತ್ರನಟ ಕರಾಟೆ ಶ್ರೀನಿವಾಸರ ಬಳಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.
ಸಿಯಾನ್ ಜಾನ್ ಅವರ ತಂದೆ ಆದರ್ಶ್ ರೇವಂತ್, ತಾಯಿ ಲೆನೆಟ್, ತಾತ ಜಾನ್ ಕಣ್ಣನ್ ಅವರು ತಮ್ಮ ಸುಪುತ್ರಿಯವರ ಸಾಧನೆಗೆ ಅಭಿನಂದಿಸಿದ್ದಾರೆ.

