ಕುಂದಾಪುರ: ಎಲ್ಲರಿಗೂ ಬದುಕುವ ಹಕ್ಕಿದೆ ಎಂಬುದನ್ನು ಅರಿತಾಗ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬಹುದು ಪ್ರತಿಯೊಬ್ಬ ಮಗುವಿನಲ್ಲಿ ತಮಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ತಿಳಿಹೇಳಲು ಮಕ್ಕಳ ವಿಶೇಷ ಗ್ರಾಮಸಭೆ ಸಹಕಾರಿ.ಇದನ್ನು ಮಕ್ಕಳ ಹಬ್ಬದಂತೆ ಆಚರಿಸಲಾಗುತ್ತಿದೆ ಎಂದು ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷೀ ಎಚ್.ಎಸ್.ಹೇಳಿದರು. ಅವರು ತಲ್ಲೂರು ಗ್ರಾಮ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ತಾಪಂ ಕುಂದಾಪುರ ನೇತೃತ್ವದಲ್ಲಿ ನಮ್ಮ ಭೂಮಿ ಸಿಡಬ್ಲುಸಿ ಸ್ವಯಂಸೇವಾ ಸಂಸ್ಥೆ ಆಶ್ರಯದಲ್ಲಿ ತಲ್ಲೂರಿನ ಶೇಷಕೃಷ್ಣ ಸಭಾಂಗಣದಲ್ಲಿ ಶನಿವಾರ ನಡೆದ ಮಕ್ಕಳ ವಿಶೇಷ ಗ್ರಾಮ ಸಭೆ ‘ಮಕ್ಕಳ ಹಬ್ಬ-2024’ರಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅದಕ್ಕೂ ಮುನ್ನಾ ಕಾರ್ಯಕ್ರಮದ ಅಧ್ಯಕ್ಷರಾದ ತಲ್ಲೂರು ಗ್ರಾಮಪಂಚಾಯತ್ ಅಧ್ಯಕ್ಷ ಗಿರೀಶ್ ನಾಯ್ಕ್ ಇತರ ಅಥಿತಿ ಗಣ್ಯರೊಂದಿಗೆ ಬೆಲುನುಗಳನ್ನು ಹಾರಿಬಿಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ರೂವಾರಿಯಾದ ಅವರು ತಮ್ಮ ಸಂದೇಶ ನೀಡಿದರು. ಸಭಾ ಕಾರ್ಯಕ್ರಮವನ್ನು ತಹಶೀಲ್ದಾರ್ ಶೋಭಾಲಕ್ಷೀ ಎಚ್.ಎಸ್, ರಾಜ್ಯದ ಸಾಂಸ್ಕ್ರತಿಕ ರಾಯಾಭಾರಿಯಾಗಿರುವ ಬಸವಣ್ಣನ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಚಾಲನೆ ನೀಡಿದರು.
ನಂತರ ನಡೆದೆ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮಕ್ಕಳು ಮುಂದಿಟ್ಟ ವಿವಿಧ ರೀತಿಗಳ ಸಮಸ್ಯೆಗಳ ಅಹವಾಲುಗಳನ್ನು ಗ್ರಾಮ ಪ0ಚಾಯತ್ ಮಟ್ಟದಲ್ಲಿ ಹಾಗೂ ವಿವಿಧ ಇಲಾಖೆಳ ಅಧಿಕಾರಿಗಳಲ್ಲಿ ತೋಡಿಕೊಂಡರು. ಮಕ್ಕಳು ಮಂಡಿಸಿದ ಸಮಸ್ಯೆಗಳು ನೀಜವಾಗಿಯೂ, ಶ್ಲಾಘನೆಗೆ ಮತ್ತು ನೈಜ್ಯ ಸಮಸ್ಯೆಗಳಾಗಿದ್ದವು. ಈ ಸಮಸ್ಯೆ ಅಧಿಕಾರಿಗಳು ವ್ಯಾಪ್ತಿಯಲ್ಲಿ ಸ್ಪಂದಿಸಿ ಬಗೆಹರಿಸಲಾಗುವುದೆಂದು ಮಕ್ಕಳಿಗೆ ಭರವಸೆ ನೀಡಲಾಯಿತು.
ಕುಂದಾಪುರ ತಾಪ0 ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್, ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಡಿಪಿಒ ಅನುರಾಧಾ, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕುಸುಮಾಕರ ಶೆಟ್ಟಿ ಮಾತನಾಡಿದರು.
ಈ ಸ0ದರ್ಭದಲ್ಲಿ ತಲ್ಲೂರು ಗ್ರಾಪಂ ನಾಯ್ಕ್ ಉಪಾಧ್ಯಕ್ಷೆ ಚಂದ್ರಮತಿ ಹೆಗ್ಡೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ತಲ್ಲೂರು, ಸದಸ್ಯರಾದ ಸಂಜೀವ ದೇವಾಡಿಗ, ಕೃಷ್ಣ ಪೂಜಾರಿ, ರಾಧಕ್ರಷ್ಣ ಶೇರುಗಾರ್, ಚಂದ್ರ ದೇವಾಡಿಗ, ಶಿವರಾಮ ಕೊಠಾರಿ, ಅಕ್ಷಯ, ಸರೋಜಾ, ಸುಶೀಲಾ, ರುಕ್ಮಿಣಿ, ಲಕ್ಷ್ಮಿ ಜಯಲಕ್ಷಿ ಕೊಠಾರಿ, ಜುಡೀತಾ, ಸಮಾಜ ಕಲ್ಯಾಣ ಇಲಾಖೆಯ ರಮೇಶ್ ಕುಲಾಲ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ್, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅಮಿತಾ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಸುಮಲತಾ, ಕುಂದಾಪುರ ನಗರ ಠಾಣೆ ಪಿಎಸ್ಐ ವಿನಯ್ ಎಂ.ಕೊರ್ಲಹಳ್ಳಿ ನಮ್ಮ ಭೂಮಿ ಸಂಸ್ಥೆಯ ಆಶಾ,ಬೈಂದೂರು ಬಿ.ಇ.ಒ ನಾಗೇಶ್ ನಾಯ್ಕ್, ಸಮಾಜ ಕಲ್ಯಾಣ ಇಲಾಖೆಯ ರಮೇಶ್ ಕುಲಾಲ್, ಕಾರ್ಯದರ್ಶಿ ರತ್ನಾ ಮತ್ತಿತರರು ಮಾತನಾಡಿದರು.
ನಮ್ಮ ಭೂಮಿ ಸಂಸ್ಥೆಯ ಪರಮೇಶ್ವರ್ ಗಾಣಿಗಾ ಪ್ರಸ್ತಾವಿಸಿ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಪಿಡಿಒ ನಾಗರತ್ನ ವದರಿಯನ್ನು ವಾಚಿಸಿದರು. ತಲ್ಲೂರು ಗ್ರಾಮಪಂಚಾಯತ್ ಸದಸ್ಯೆ ಜುಡಿತ್ ಮೆಂಡೊನ್ಸಾ ಕಾರ್ಯಕ್ರವನ್ನು ನಿರೂಪಿಸಿದರು.
ಹಲವು ಶಾಲೆಗಳಿಂದ ಉತ್ತಮವಾದ ವಸ್ತುಪ್ರದರ್ಶನವನ್ನು ಪ್ರರ್ದರ್ಶಿಸಲಾಯಿತು.
ಮಕ್ಕಳು ಸಮಸ್ಯೆ ಮತ್ತು ಅಹವಾಲುಗಳು ಇಂತೀವೆ
ತಲ್ಲೂರು ಹಾಗೂ ಉಪ್ಪಿನಕುದ್ರು ಗ್ರಾಮ ವ್ಯಾಪ್ತಿಯ ಶಾಲೆಗಳ ಹತ್ತು ಹಲವು ಸಮಸ್ಯೆಗಳು ಕೇಳಿಬಂದವುತ್ ಪ್ರಮುಖವಾಗಿ ಗ್ರಂಥಾಲಯ ರಚನೆ, ನಿರ್ವಹಣೆ, ಉಪಗ್ರಂಥಾಲಯ ನಿರ್ಮಾಣದ ಬಗ್ಗೆ ಹಲವು ವಿದ್ಯಾರ್ಥಿಗಳು ತಿಳಿಸಿದರು.
ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ತರಬೇತಿ ಕೊಠಡಿ, ಶಿಕ್ಷಕರ ನೇಮಕ ಮಾಡಬೇಕು. ಶಾಲಾ ಮೈದಾನದಲ್ಲಿ ಕುಡುಕರಿಂದ ಗಲೀಜು, ಬೀದಿನಾಯಿ ಕಾಟದ ಬಗ್ಗೆ ದೂರುಗಳನ್ನು ನೀಡಿದರು.
ತಲ್ಲೂರು ಜಂಕ್ಷನ್ನಲ್ಲಿ ರಸ್ತೆ ದಾಟಲು ಕಷ್ಟವಾಗುತ್ತಿದ್ದು ಸ್ಕೈಪಾತ್ ರಚನೆಯಾಗಬೇಕು.
ಉಪ್ಪಿನಕುದ್ರು ಶಾಲಾ ಆಟದ ಮೈದಾನದ ಬಳಿ ಅಪಾಯಕಾರಿ ಕೆರೆಯಿದ್ಯು ಅದರ ಬಗ್ಗೆ ಕ್ರಮಕೆಗೊಳಬೇಕು
ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಶಾಲಾ ಮಟ್ಟದಲ್ಲಿ ಕಾರ್ಯಾಗಾರ ನಡೆಸಬೇಕು, ಮಕ್ಕಳ ಸಹಾಯವಾಣಿ ಬಗ್ಗೆ ತಿಳುವಳಿಕೆ ನೀಡಬೇಕು
ಹೆಣ್ಣುಮಕ್ಕಳಿಗೆ ಕರಾಟೆಯಂತಹ ರಕ್ಷಣಾ ತರಬೇತಿ ನೀಡಬೇಕು
ಗ್ರಾಪಂ ವ್ಯಾಪ್ತಿಯ “ಶಾಲೆಯೊಂದರ ಐದನೇ ತರಗತಿ ವಿದ್ಯಾರ್ಥಿನಿಯು ‘ನನಗೆ ತಂದೆಯಿಲ್ಲ ನನ್ನನ್ನು ತಾಯಿ ಕೂಲಿನಾಲಿ ಮಾಡಿ ಶಾಲೆಗೆ ಕಳಿಸುತ್ತಾಳೆ, ನನಗೆ ವಿದ್ಯಾರ್ಥಿ ವೇತನ ದೊರಬೇಕು ಎಂದು ಕೇಳಿಕೊಂಡಳು.
ಶಾಲೆಗಳಲ್ಲಿ ಕೊಠಡಿ, ಶೌಚಾಲಯ ಕೊರತೆಯಿದೆ, ಸಮಸ್ಯ ನಿವಾರಿಸಬೇಕು.
ಸಬ್ಲಾಡಿಗೆ ಹೋಗುವ ರಸ್ತೆ ಸರಿಯಿಲ್ಲ ಸರಿಪಡಿಸಬೇಕು
ತಲ್ಲೂರು ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ ಹಾವುಗಳಿರುತ್ತವೆ
ಶಾಲೆಗಳ ಹತ್ತಿರವಿದ್ದ ಅಂಗಡಿಗಳಲ್ಲಿ ಗುಟ್ಕಾ ಮತ್ತು ಇತರ ಮತ್ತು ಬರಿಸುವ ಪದಾರ್ಥಗಳನ್ನು ಮಾರಾಟ ನೀಷೆದಿಸಬೇಕು.
ಸರಕಾರದಿಂದ ಪುನಹ ಸೈಕಲ್ ವಿತರಣೆಯನ್ನು ಪ್ರಾರಂಭಿಸಬೇಕು
ಹೀಗೆ ಹಲವಾರು ಸಮಸ್ಯೆಗಳ ಅವಹಾಲನ್ನು ವಿದ್ಯಾರ್ಥಿಗಳು ತೋಡಿಕೊಂಡಿದ್ದು, ವಿಶೇಷವಾಗಿತ್ತು.
ಮಧ್ಯಾನ್ನ ಭೋಜನದ ನಂತರ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರ ನೆಡದವು.