ಮಂಗಳೂರು; 14.11.2024 ಗುರುವಾರ ನೇಜಿಗುರಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ನಡೆಯಿತು.
ಅತಿಥಿಗಳಿಂದ ದೀಪ ಬೆಳಗಿಸಿ ಹಾಗೂ ಭಾರತದ ಮೊದಲ ಪ್ರಧಾನಿ, ‘ಭಾರತ ರತ್ನ’ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಹೂವನ್ನು ಅರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂತ ಜೋಸೆಫ್ ಶಾಲೆ ಕುಲಶೇಖರ ಇಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಆಗೊಸ್ತಿನ್ ಟೀಚರ್ ಮಕ್ಕಳ ದಿನಾಚರಣೆ ಬಗ್ಗೆ ತಿಳಿಸಿದರು.
ಪದವ್ 21ನೇ ವಾರ್ಡಿನ ಕಾರ್ಪೊರೇಟರ್ ಶ್ರೀಮತಿ ವನಿತಾ ಪ್ರಸಾದ್ ಮಕ್ಕಳಿಗೆ ಶುಭ ಹಾರೈಸಿದರು. ಗೇಮ್ಸ್ ನಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನದ ದಾನಿಗಳಾದ ಪೆಲಿಕ್ಸ್ ಡಿಸೋಜಾ ಇವರಿಂದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಪೊರೇಟರ್ ಶ್ರೀಮತಿ ವನಿತಾ ಪ್ರಸಾದ್,ಶ್ರೀಮತಿ ಆಗೊಸ್ತಿನ್ ಟೀಚರ್,ನೇಜಿಗುರಿ ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಗೋಪಿ, ಸಮಾಜ ಸೇವಕರಾದ ಶ್ರೀಯುತ ಶುಭಕರ್ ಮುಗ್ರೋಡಿ, ಶ್ರೀಯುತ ಪೆಲಿಕ್ಸ್ ಡಿಸೋಜಾ, ನೇಜಿಗುರಿ ಗುಂಪಿನ ಅಧ್ಯಕ್ಷರಾದ ಅರುಣ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಪಲ್ ಹೋಂಮ್ಸ್ ನ ಶ್ರೀಮತಿ ಸುಜಾತ ನಾಯಕ್ ಎಲ್ಲ ಮಕ್ಕಳಿಗೆ ಉಡುಗೊರೆಯನ್ನು ನೀಡಿ, ಸಹಕರಿಸಿದರು.
ನೇಜಿಗುರಿ ಅಂಗನವಾಡಿ ಕೇಂದ್ರದ ಟೀಚರ್ ಶ್ರೀಮತಿ ಹರಿಣಾಕ್ಷಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ನೇಜಿಗುರಿ ಅಂಗನವಾಡಿ ಕೇಂದ್ರದ ಶ್ರೀಮತಿ ಶ್ಯಾಮಲ ಅಂಗನವಾಡಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿ, ವಂದಿಸಿದರು. ನೆರೆದವರೆಲ್ಲರಿಗೂ ತಿಂಡಿ ಹಾಗೂ ಸಿಹಿಹಂಚಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.