ದಿನಾಂಕ :14/11/2024 ರಂದು ಹೋಲಿ ರೋಜರಿ ಶಾಲೆಯಲ್ಲಿ ವಿಜ್ರಂಭಣೆಯಿಂದ ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಸ್ ಶಾಂತಿ ಎ.ಸಿ.ಯವರು ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸಂಬಂಧ ಹೇಗಿರಬೇಕು ಎಂದು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಂಬಂಧ ಪವಿತ್ರವಾದದು ಎನ್ನುತ್ತಾ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಶಾಲಾ ಶಿಕ್ಷಕರಿಂದ ವಿವಿಧ ನೃತ್ಯ ಮತ್ತು ವಿದ್ಯಾರ್ಥಿಗಳಿಗೆ ಹಾರೈಕೆಯ ಶುಭಾಶಯವನ್ನು ಕೊರಲಾಯಿತು ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಿಗೆ ಮುಖ್ಯೋಪಾಧ್ಯಾಯಿನಿಯವರು ಬಹುಮಾನ ವಿತರಿಸಿದರು ಸಹಶಿಕ್ಷಕಿ ಅಂಕಿತಾ ಸ್ವಾಗತಿಸಿ ಸಹ ಶಿಕ್ಷಕಿ ನಿಖಿತಾ ಶೆಟ್ಟಿಯವರು ಮಕ್ಕಳ ದಿನಾಚರಣೆಯಕುರಿತುತಿಳಿಸಿದರು . ಶಾಲಾ ಸಿಬ್ಬಂದಿಯಾಗಿರುವ ನಿಮಿಷಾ ಕಾರ್ಯಕ್ರಮ ನಿರೂಪಿಸಿ ಶಾಲಾ ಮುಖ್ಯೋಪಾದ್ಯಾಯಿನಿ ಸಿಸ್ಟರ್ ತೆರೆಸ್ ಶಾಂತಿ ಎ.ಸಿ. ಧನ್ಯವಾದ ಸಮರ್ಪಿಸಿದರು.