ಮಂಗಳೂರು: 14ನೇ ನವೆಂಬರ್ 2022 ರಂದು ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಮಕ್ಕಳ ದಿನವನ್ನು ಉತ್ಸಾಹ ಮತ್ತು ಹುರುಪಿನಿಂದ ಆಚರಿಸಲಾಯಿತು. ಇದು ವಿದ್ಯಾರ್ಥಿಗಳಿಗೆ ಮೋಜಿನ ದಿನವಾಗಿತ್ತು. ವರ್ಣರಂಜಿತ ಉಡುಗೆಯಲ್ಲಿ ಶಾಲೆಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಆನಂದ ಅನುಭವಿಸಲು ಹಾಗೆ ಮಕ್ಕಳಲ್ಲಿ ವಿಶೇಷ ಭಾವನೆ ಮೂಡಿಸಲು ಶಿಕ್ಷಕರಿಂದ ವಿಶೇಷ ಸಭೆ ಆಯೋಜಿಸಲಾಗಿತ್ತು. ಶಿಕ್ಷಕರಿಂದ ದೇವರ ಆಶೀರ್ವಾದ ಪಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾಂಶುಪಾಲರಾದ ಫಾದರ್ ಜೋಸೆಫ್ ಉದಯ್ ಫೆರ್ನಾಂಡಿಸ್ ಮಕ್ಕಳ ದಿನಾಚರಣೆಯ ಮಹತ್ವವನ್ನು ಕೇಂದ್ರೀಕರಿಸಿ ಭಾಷಣ ಮಾಡಿ “ಜೀವನದ ಎಲ್ಲಾ ಋತುಗಳಲ್ಲಿ ಬಾಲ್ಯದ ಜೀವನವು ಅತ್ಯಂತ ಸುಂದರವಾಗಿದೆ” ಎಂದು ತಿಳಿಸಿದರು. ಶಿಕ್ಷಕರು ಮಕ್ಕಳಿಗೆ ಸುಂದರವಾದ ಶುಭಾಶಯ ಗೀತೆಯನ್ನು ಅರ್ಪಿಸಿದರು. ಮಕ್ಕಳು ಅಸೆಂಬ್ಲಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ದಿನವನ್ನು ಸ್ಮರಣೀಯವಾಗಿಸಿಕೊಂಡರು. ವರ್ಗವಾರು ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ವಿವಿಧ ಬಹುಮಾನಗಳನ್ನು ನೀಡಲಾಯಿತು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.