ಆಸ್ಸಾಂ ಬಾಲ್ಯವಿವಾಹ ಕಾರ್ಮಿಕತೆಯಿಂದ ಒಂದೇ ಸಲ 10 ಮಕ್ಕಳ ರಕ್ಷಣೆ

JANANUDI.COM NETWORK

ಅಸ್ಸಾಂ: ಫೆ.18 ಚೈಲ್ಡ್ ಲೈನ್ ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕ ಮತ್ತು ಜಿಲ್ಲಾ ಪೊಲೀಸರ ಸಹಾಯದಿಂದ ಆಸ್ಸಾಮಿನ ಹೈಲಕಂಡಿಯಂಬಲ್ಲಿ 10 ಮಕ್ಕಳನ್ನು ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕತೆಯಿಂದ ರಕ್ಷಿಸಲಾಗಿದೆ.
ಫೆಬ್ರವರಿಯಲ್ಲಿ ವರದಿಯಾದ ಬಾಲ್ಯ ವಿವಾಹದ ಒಂಬತ್ತು ಪ್ರಕರಣಗಳಲ್ಲಿ ಏಳು ಪ್ರಕರಣಗಳಲ್ಲಿ ಮಕ್ಕಳನ್ನು ರಕ್ಷಿಸಲಾಗಿದೆ ಮತ್ತು ಎರಡು ತಪ್ಪಾಗಿ ವರದಿಯಾಗಿದೆ ಎಂದು ಚೈಲ್ಡ್ ಲೈನ್ ಅಧಿಕಾರಿ ಸೌರವ್ ನಾಥ್ ಬಹಿರಂಗಪಡಿಸಿದ್ದಾರೆ.
ಮಕ್ಕಳ ಸಹಾಯವಾಣಿ ಸಂಸ್ಥೆಯಾದ ಚೈಲ್ಡ್ ಲೈನ್​​ ವಿಭಿನ್ನ ಸಾಮರ್ಥ್ಯದ ಮಕ್ಕಳಿಗೆ ಅಂಗವೈಕಲ್ಯ ಪ್ರಮಾಣಪತ್ರವನ್ನು ಪಡೆಯಲು ಸಹಾಯ ಮಾಡಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಮತ್ತು ಇತರ ಸಂಬಂಧಿತ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವುಗಳನ್ನು ಹೇಗೆ ತಡೆಗಟ್ಟುವುದು ಎಂಬುದರ ಕುರಿತು ಸಂಸ್ಥೆ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.
ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಲಿಂಗ ತಾರತಮ್ಯ ಮತ್ತು ದಿವ್ಯಾಂಗ ಪ್ರಮಾಣಪತ್ರ ಸೇರಿದಂತೆ ವಿವಿಧ ವಿಕಲಚೇತನ ಮತ್ತು ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಕುರಿತು ಮಾಸಿಕ ಕ್ರಿಯಾ ಯೋಜನೆಯ ಪ್ರಕಾರ ಜಾಗೃತಿ ಮೂಡಿಸಲಾಗುತ್ತದೆ ಎಂದು ಸೌರವ್ ನಾಥ್ ಹೇಳಿದ್ದಾರೆ.