ಚಿಕ್ಕಬಳ್ಳಾಪುರ ಬ್ರಹ್ಮಾನಂದ ಸ್ವಾಮೀಜಿಯವರು, ಹಲ್ಲೆಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಂದನರವರ ಆರೋಗ್ಯ ವಿಚಾರಿಸಿದರು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಚಿಕ್ಕಬಳ್ಳಾಪುರ ವಾಲ್ಮೀಕಿ ಗುರುಕುಲ ಪೀಠದ ಬ್ರಹ್ಮಾನಂದ ಸ್ವಾಮೀಜಿ ಗುರುವಾರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಂದನ ಅವರ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ಕುಟುಂಬವೊಂದರ ಸವರ್ಣೀಯರು ಈಚೆನೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ವಂದನ ಹಾಗೂ ಅವರ ಕುಟುಂಬದ ಸದಸ್ಯರ ಮೇಲೆ ಕಲ್ಲು, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ವಂದನ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಸವರ್ಣೀಯ ಕುಟುಂಬದ ಸದಸ್ಯರನ್ನು ಬಂಧಿಸಬೇಕು. ಪರಿಷಿಷ್ಟ ಪಂಗಡಕ್ಕೆ ಸೇರಿರುವ ವಂದನ ಅವರ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಲ್ಲೆಯಿಂದ ಗಾಯಗೊಂಡಿರುವ ಯುವತಿಗೆ ನಿಯಮಾನುಸಾರ ಪರಿಹಾರ ನೀಡಬೇಕು. ತಾಲ್ಲೂಕಿನಲ್ಲಿ ಮುಂದೆ ಇಂಥ ಹಲ್ಲೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ ಶಿರಿನ್ ತಾಜ್ ಅವರಿಗೆ ನೀಡಿದರು.
ಮಹರ್ಷಿ ವಾಲ್ಮೀಕಿ ಗುರುಕುಲ ಪೇಠದ ಜಿಲ್ಲಾಘಟಕದ ಅಧ್ಯಕ್ಷ ಜಿ.ವಿ.ಹರೀಶ್ ನಾಯಕ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ನಾಗರಾಜ್, ಮುಖಂಡರಾದ ಜಯಮ್ಮ, ಪ್ರದೀಪ್, ಶ್ರೀರಾಮ್, ಆಂಜಿ, ಸುರೇಶ್, ಮುನಿವೆಂಕಟಪ್ಪ ಇದ್ದರು.

ಶ್ರೀನಿವಾಸಪುರದ ಎಲ್‍ಐಸಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಬಡ್ತಿ ಪಡೆದು ವರ್ಗವಾದ ಸತೀಶ್ ಅವರಿಗೆ ಕಚೇರಿ ಸಿಬ್ಬಂದಿ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಕುಲಕರ್ಣಿ, ನಟರಾಜನ್, ಪ್ರತಿನಿಧಿಗಳಾದ ಸತ್ಯಣ್ಣ, ಶ್ರೀನಾಥ್, ಶ್ರೀನಿವಾಸರೆಡ್ಡಿ, ಮಂಜುನಾಥಯ್ಯ, ಶ್ರೀನಾಥ್, ಎಸ್.ಲಕ್ಷ್ಮಣಬಾಬು, ಶಿವಕುಮಾರ್, ಪ್ರಮೀಳಾ, ಅಮರಾವತಿ, ಸಂಜೀವಯ್ಯ, ಕೆ.ಎಂ.ಚೌಡಪ್ಪ ಇದ್ದರು.