
ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನಲ್ಲಿ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಚೆಸ್ ಚಾಂಪ್ ನಡೆಯಿತು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೌಂದರ್ಯ ಯು ಕೆ. ಇಂಜಿನಿಯರ್ ( ಫಿಡೆ ತೀರ್ಪುಗಾರರು ಮತ್ತು ಚೆಸ್ ಕೋಚ್,ನಿರ್ದೇಶಕರು, ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಉಡುಪಿ ಮತ್ತು ಕಾಪು) ಮಾತನಾಡಿ ಕ್ರಿ ಶ 6ನೇ ಶತಮಾನಕ್ಕೂ ಮೊದಲೇ ಚೆಸ್ ಭಾರತೀಯರಿಗೆ ಪರಿಚಯವಾಗಿತ್ತು ಎಂಬುದು ತಜ್ಞರ ಅಭಿಪ್ರಾಯ ಈ ಜನಪ್ರಿಯ ಆಟವು ಏಕಾಗ್ರತೆ, ಸ್ಮರಣೆ, ತಾರ್ಕಿಕ ಚಿಂತನೆ, ಸಮಸ್ಯೆಪರಿಹರಿಸುವ ಕೌಶಲ್ಯ, ಆತ್ಮವಿಶ್ವಾಸ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಸಮೀಕ್ಷೆಯ ಪ್ರಕಾರ 605 ಮಿಲಿಯನ್ ಜನರಿಗೆ ನಿಯಮಿತವಾಗಿ ಚೆಸ್ ಆಡುವ ಹವ್ಯಾಸವಿದೆ ಇದೊಂದು ಮೋಜಿನ ಮಿದುಳಿನ ವ್ಯಾಯಾಮ ಈ ಆಟವನ್ನು ಎಲ್ಲ ವಯಸ್ಸಿನ ಜನ ಪ್ರಪಂಚದಾದ್ಯಂತ ಪ್ರೀತಿಸುತ್ತಾರೆ ಕಿರಿಯ ವಯಸ್ಸಿನಿಂದಲೇ ಚೆಸ್ ಆಟವನ್ನು ಆಡುವುದರಿಂದ ಮಕ್ಕಳಲ್ಲಿ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯವನ್ನು ಪರಿಹಾರಿಸಿಕೊಳ್ಳುವಲ್ಲಿ
ಸಹಾಯಕವಾಗುತ್ತದೆ ಶಾಲೆಯಲ್ಲಿ ಲಭ್ಯವಿರುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ವಿನಿಯೋಗಿಸಿಕೊಂಡು ಭವಿಷ್ಯದಲ್ಲಿ ಅತ್ಯುತ್ತಮ ಕ್ರೀಡಾಪಟುಗಳಾಗಿ ಬೆಳೆಯಿರಿ ಎಂದು ಹಿತೋಪದೇಶ ನುಡಿದರು
ಮುಖ್ಯಶಿಕ್ಷಕ ಡಾI ರವಿದಾಸ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು ಶಿಕ್ಷಕಿ ಅವಿನಾ ಡಿಸೋಜಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು
ಚೆಸ್ ಚಾಂಪ್ ವಿಜೇತರ ಯಾದಿ :
6ನೇ ತರಗತಿ :
1.ಸ್ರಜನ್
- ಸಾಕ್ಷಿತ್
- ಆಶ್ರಿತ್
7ನೇ ತರಗತಿ : - ಹೃತಿಕ್
- ಕಿಶನ್ ಶೆಟ್ಟಿ
- ಚೇತನ್
8ನೇ ತರಗತಿ : - ಮುತ್ತು
- ಚರಿಷ್ಮಾ
- ಆಋಷಿ
9ನೇ ತರಗತಿ : - ಪ್ರೀತಮ್
- ಪ್ರದ್ಯುಮ್ನ
- ಶ್ರೀನಿವಾಸ್









