ಶ್ರೀನಿವಾಸಪುರ : ಆಧ್ಯಾತ್ಮಿಕ ಹಾಗೂ ವೈಜ್ಞಾನಿಕವಾಗಿ ಸಾಬೀತಾಗಿರುವಂತೆ ಓಂಕಾರವನ್ನು ಪ್ರತಿದಿನ ಪಠಿಸುವುದರ ಮೂಲಕ ನಮ್ಮ ಮಾನಸಿಕ ಒತ್ತಡಗಳು ನಿವಾರಣೆಯಾಗಿ ಹಾಗೂ ಭಾವನೆಗಳು ನಿಯಂತ್ರಣಕ್ಕೆ ಬಂದು ಮನಸ್ಸು ಪ್ರಹ್ಲಾದಕರವಾಗಿರುತ್ತದೆ ಎಂದು ಧಾರ್ಮಿಕ ಚಿಂತಕ ಕೆ.ಎಂ.ಸೋಮಶೇಖರ್ ತಿಳಿಸಿದರು.
ಪಟ್ಟಣದ ಸಂತೆ ಮೈದಾನದಲ್ಲಿ ನೆಲಸಿರುವ ಶ್ರೀಬೋಯಿಕೊಂಡ ಗಂಗಮ್ಮ ದೇವಾಲಯದಲ್ಲಿ ಲೋಕಕಲ್ಯಾಣರ್ಥವಾಗಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ಕೇತಗಾನಹಳ್ಳಿ ಕೆ.ಎಂ. ಸೋಮಶೇಖರ್ ಧನಾತ್ಮಕ ಕಂಪನವನ್ನುಂಟು ಮಾಡುವುದರ ಜೊತೆಗೆ ಓಂಕಾರ ಉಚ್ಚಾರಣೆಯು ನಮ್ಮ ಶರೀರದಲ್ಲಿರುವ ಎಲ್ಲಾ ವಿಷಕಾರಿ ಅಂಶಗಳನ್ನು ಹೊರಹಾಕಿ ನಮ್ಮ ಹೃದಯದ ಆರೋಗ್ಯದ ಸಮೃದ್ಧಿಗೆ ಹಾಗೂ ಆರೋಗ್ಯಕರವಾದ ರಕ್ತ ಸಂಚಾರಕ್ಕೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಇಂದು ದೇವಾಲಯಗಳು ನೆಮ್ಮದಿ ಸ್ಥಳವಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗುಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಾನವ ಕೆಲಸ ಕಾರ್ಯಗಳ ನಿಮಿತ್ತ ಸದಾ ಯೋಚನೆಗಳೊಂದಿಗೆ ಮಗ್ನನಾಗಿದ್ದು , ಯೋಚನೆಗಳಿಂದ ಆರೋಗ್ಯದಲ್ಲಿ ಏರುಪೇರಾಗಿ ಬಳುಲುತ್ತಿದ್ದಾನೆ ಹಾಗು ಏಕಾಗ್ರತೆ ಇಲ್ಲದೆ ಮನಸ್ಸಿಗೆ ಶಾಂತಿ ನೆಮ್ಮದಿ ಇದ್ದು ಏನು ಮಾಡುಬೇಕೆನ್ನುವ ಸ್ಥಿತಿಯಲ್ಲಿದ್ದಾನೆ ಎಂದರು. ಇದಕ್ಕೆ ಪರಿಹಾರವಾಗಿ ಪ್ರತಿಯೊಬ್ಬರು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೂಳ್ಳುವುದರಿಂದ ಮನಸ್ಸಿಗೆ ಸಿಗುತ್ತದೆ ಎಂದರು.
ಈ ಪೂಜಾ ಕಾರ್ಯಕ್ರಮಗಳನ್ನು ದೇವಾಲಯದ ಪ್ರಧಾನ ಅರ್ಚಕ ವೆಂಕಟಸ್ವಾಮಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಅರುಣ ಸೋಮಶೇಖರ್, ಅವಲಕುಪ್ಪ ಎನ್. ನಾಗರಾಜ್, ಕೇತಗಾನಹಳ್ಳಿ ರವಣಮ್ಮ, ಮುನಿವೆಂಕಟಪ್ಪ, ಮಂಜೇವಾರಿಪಲ್ಲಿ ಲಕ್ಷ್ಮೀದೇವಮ್ಮ ವೆಂಕಟರಮಣಪ್ಪ, ನಯನಶಿವಕುಮಾರ್, ಗಾಯತ್ರಿ ವಿಶ್ವನಾಥ್ ಅಕೀಲಾ, ಕಳಾ, ಬುರುಡುಗುಂಟೆ ಮೂರ್ತೇಪ್ಪ, ತುಳಿಸಮ್ಮ, ಸತ್ಯನಾರಾಯಣ, ಸೋಮಶೇಖರ್, ಹಾಗೂ ಕುಟುಂಬದವರು. ಉಪಸ್ಥಿತರಿದ್ದರು.