ಕವಿತೆಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ; ಕುಂದಾಪುರ ತಾಲೂಕು 18 ನೇ ಕನ್ನಡ ಸಾಹಿತ್ಯ ಸಮ್ಮೇಳದ ಕವಿ ಗೋಷ್ಟಿಯಲ್ಲಿ ಅಭಿಪ್ರಾಯ

ಗ೦ಗೊಳ್ಳಿ. ಫೆ. 20 : ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮೇಳನ “ಗಂಗಾವಳಿ” ಕಾರ್ಯಕ್ರಮದ ಎರಡನೇ ಗೋಷ್ಠಿಯಾಗಿ ಕವಿ ಗೋಷ್ಟಿ ನಡೆಯಿತು. ಈ ಕವಿ ಗೋಷ್ಟಿಯಲ್ಲಿ ಬರ್ನಾಡ್‌ ಡಿ’ಕೋಸ್ತಾ, ಅವರು “ಎಂತಹ ಕಂಪನ” ಭೂಕಂಪನದ ಬಗ್ಗೆ ಮಾರ್ಮಿಕವಾಗಿ ತಮ್ಮ ಕವಿತೆಯನ್ನು ಪ್ರಚುರ ಪಡಿಸಿದರು.  ಜಗದೀಶ ದೇವಾಡಿಗ ಮುಳ್ಳಿಕಟ್ಟೆ ಸೌರ್ಹಾದತೆಯ ಬಗ್ಗೆ,  ದೇವಿ ಪ್ರಸಾದ್ ಶೆಟ್ಟಿ ಬೈಲೂರು ಸಮಾಜದ ಬಗ್ಗೆ, ಶ್ರೀಮತಿ ಸುಪ್ರಸನ್ನಾ ನಕ್ಕತ್ತಾಯ ಕೋಟೇಶ್ವರ ಬಾಲ್ಯದ ಬಗ್ಗೆ,  ನಾಗರಾಜ್‌ ಖಾರ್ವಿ ಕಂಚುಗೋಡು, ತಗ್ಗುವಿಕೆಯ ಬಗ್ಗೆ, ಜಗದೀಶ ದೇವಾಡಿಗ ಮುಳ್ಳಿಕಟ್ಟೆ, ಬುದ್ದ, ಕ್ರಷ್ಣ ರಾದೆಯ ಬಗ್ಗೆ,  ದೀಪಿಕಾ ಟಿ. ಮೂಡುಬಗೆ, ಸಮಾಜದ ಬಗ್ಗೆ  ಸಾಧನಾ ಕುಂದಾಪುರ, ಅರೆವಾಸ್ತವದ ಬಗ್ಗೆ ಕವನ ವಾಚಿಸಿದರು.

    ಸಮ್ಮೇಳನದ ಗಂಗಾವಳಿ ಕವಿಗೋಷ್ಠಿಯ ಸಮನ್ವಯಕಾರರಾದ ವಂಡ್ಸೆ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ರಾಜೀವ ನಾಯ್ಕ್  “ಕಾವ್ಯ ಓದುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ, ಹಾಗೇ ಕವನಗಳು ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಯುವ ಕವಿಗಳು ಹಿಂದಿನವರು ಬರೆದುದನ್ನು ಓದುವ ಮೂಲಕ ಪದ ಸಂಪತ್ತು ಗಳಿಸಿಕೊಂಡು ಕವಿತೆಗಳನ್ನು ರಚಿಸಬೇಕು, ಪದ ಸಂಪತ್ತಿನ ಭಂಡಾರ ಬೆಳಸಿಕೊಳ್ಳಬೇಕು. ಕವಿ ಬಳಸುವ ಶಬ್ದ ಹಿತವಾದಷ್ಟೂ ಕಾವ್ಯ ಉತೃಷ್ಟವಾಗಿರುತ್ತದೆ ಎಂದು ಹೇಳಿದರು. ಉಪನ್ಯಾಸಕ ಸುಜಯೀಂದ್ರ ಹಂದೆ ಸ್ವಾಗತಿಸಿ, ಸತೀಶ್ ಶೆಟ್ಟಿ ನಿರ್ವಹಿಸಿದ ಕವಿ ಗೋಷ್ಟಿಯಲ್ಲಿ ಶಾರ್ಲೆಟ್ ಲೋಬೊ ಗುಜ್ಜಾಡಿ ವಂದಿಸಿದರು.

    ಎರಡನೆ ಗೋಷ್ಠಿಯಾಗಿ ಕುಂದಾಪ್ರ ಕನ್ನಡ ಸಂವಾದ ನಡೆಯಿತು. ಮೂರನೇ  ಗೋಷ್ಠಿಯಾಗಿ ಕೋ.ಶಿವಾನಂದ ಕಾರಂತರ ಬದುಕು ಮತ್ತು ಬರಹ, ಮೂರನೇ ಗೋಷ್ಟಿಯಾಗಿ ಕಂದಾಪ್ರ ಕನ್ನಡ ನಡೆಯಿತು.