ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ
ಕೋಲಾರ: ಜನರ ಕಷ್ಟಕ್ಕೆ ಸ್ಪಂದನೆ ನೀಡುವ ಮೂಲಕ ಗರ್ಭಿಣಿ ಮತ್ತು ಬಾಣಂತಿಯರಿಗೆ ತವರು ಮನೆ ಉಡುಗೊರೆ ನೀಡುತ್ತಿರುವ ಸಮಾಜ ಸೇವಕ ಚಂದನ್‍ಗೌಡರಂತಹ ಮಕ್ಕಳನ್ನು ಮಹಿಳೆಯರು ಜನ್ಮ ನೀಡಬೇಕೆಂದು ಕೋಡಿಮಠದ ಶ್ರೀಗಳು ಹೇಳಿದರು.
ಚಂದನವನ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಚಂದನ್ ಗೌಡರು ತಾಲೂಕಿನ ವೇಮಗಲ್‍ನಲ್ಲಿ ಆಯೋಜಿಸಿದ್ದ,ಗರ್ಭಿಣಿ ಮತ್ತು ಬಾಣಂತಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣು ಮಕ್ಕಳನ್ನು ಗೌರವಿಸುವ ಕಡೆ ದೇವರು ನೆಲೆಸುತ್ತಾರೆ. ಹೀಗಾಗಿ ಮಹಿಳೆಯರಿಗೆ ತವರು ಮನೆ ಉಡುಗೊರೆ ನೀಡುತ್ತಿರುವ ಚಂದನ್‍ಗೌಡರ ಜನಸೇವೆಗೆ ಅಧಿಕಾರದ ಶಕ್ತಿ ಸಿಗಲಿ ಎಂದರು.
ಹೆಣ್ಣಿನಲ್ಲಿ ಪ್ರಕೃತಿ,ಸಂಸ್ಕøತಿ,ವಿಕೃತಿ ಮೂರೂ ಇದೆಯಾದರೂ ತಾಳಿ ಕಟ್ಟಿಸಿಕೊಂಡು ತಾಳುವ ಹಾಗೆ ಬಾಳಿ ಶೀಲವಂತೆಆಗಬೇಕೆಂದು ಶ್ರೀಗಳು ಮಹಿಳೆಯರಿಗೆ ಕರೆ ನೀಡಿದರು.
ಸಮಾಜ ಸೇವಕ ಚಂದನ್‍ಗೌಡ ಮಾತನಾಡಿ, ಇದೀಗ ಸ್ವಲ್ಪ ಮಟ್ಟಿಗೆ ಕರೋನಾ ಬಿಡುವು ನೀಡಿದ್ದರೂ 3ನೇ ಅಲೆ ನಿರೀಕ್ಷೆ ಇರುವುದರಿಂದಾಗಿ ಮಹಿಳೆಯರು ಎಚ್ಚೆತ್ತುಕೊಂಡು ಎಸ್‍ಎಂಎಸ್ ಸೂತ್ರವನ್ನು ಪಾಲಿಸಬೇಕೆಂದು ಮನವಿ ಮಾಡಿದರು.ಗೌರಿ ಹಬ್ಬಕ್ಕಾಗಿ ಅಣ್ಣನಾಗಿ ಸೀರೆ ವಿತರಿಸುತ್ತಿದ್ದು ಆಶೀರ್ವಾದದ ಮೂಲಕ ಹರಸಬೇಕೆಂದು ಮನವಿ ಮಾಡಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ಮುನಿರಾಜು ಮಾತನಾಡಿ, ಸಮಾಜ ಸೇವಕ ಚಂದನ್‍ಗೌಡರ ಸೇವೆಯನ್ನು ಕೊಂಡಾಡಿದರು.ಕಲಾವಿದ ಜ್ಞಾನಮೂರ್ತಿ, ಜಿಪಂ ಮಾಜಿ ಸದಸ್ಯ ಅರವಿಂದ್ ಮಾತನಾಡಿದರು.
ಮದ್ದೇರಿ ಪಂಚಾಯತಿ ಅಧ್ಯಕ್ಷೆ ಪುಷ್ಪಾ,ಉಪಾಧ್ಯಕ್ಷ ಪ್ರಕಾಶ್, ಸೀತಿ ಪಂಚಾಯತಿ ಅಧ್ಯಕ್ಷೆ ಸೀತಾಲಕ್ಷ್ಮಿ, ಉಪಾಧ್ಯಕ್ಷೆ ಮಂಜುಳಾ, ಬೆಳಮಾರನ ಹಳ್ಳಿ ಗ್ರಾಂ.ಪಂ ಅಧ್ಯಕ್ಷ ಚಂದ್ರು, ಕಾಡಹಳ್ಳಿ ಮಂಜುನಾಥ್, ಕ್ಯಾಲನೂರು ನಾರಾಯಣಮೂರ್ತಿ ಮುಂತಾದವರರು ಇದ್ದರು.